ಶಿಗ್ಗಾವ್

ಶ್ರಮದ ಹಿಂದೆ ಪ್ರತಿಫಲವಿದೆ: ಡಾ.ಡಿ.ಎ.ಗೊಬ್ಬರಗುಂಪಿ

ಶ್ರಮದ ಹಿಂದೆ ಪ್ರತಿಫಲವಿದೆ: ಡಾ.ಡಿ.ಎ.ಗೊಬ್ಬರಗುಂಪಿ

ಶಿಗ್ಗಾವಿ 22: ಪ್ರತಿ ಕಾಯಕಗಳ ಶ್ರಮದ ಹಿಂದೆ ಅಗಾದ ಪ್ರತಿಫಲವಿದೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕಾರ್ಯಗಳನ್ನು ಶ್ರಮಹಿಸಿ ಮಾಡುವ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಹಿರಿಯ ಪ್ರಾಧ್ಯಾಪಕ ಡಾ.ಡಿ.ಎ.ಗೊಬ್ಬರಗುಂಪಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಪಟ್ಟಣದ ರಂಭಾಪುರಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ನಡೆದ ರಂಭಾಪುರಿ ಶಿಕ್ಷಣ ಸಂಸ್ಥೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರಗಳು ಮೂಡಬೇಕಾಗಿದೆ. ಗುರುಹಿರಿಯರನ್ನು ಗೌರವಿಸುವ ಭಾವನೆ ಬರಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಓಕಟ್ಟಿನಲ್ಲಿ ಬದುಕು ಸಾಗಿಸಬೇಕು. ಅದರಿಂದ ಸಮರ್ಥ ನಾಯಕತ್ವದ ಗುಣಗಳು ಬೆಳೆಯಲು ಸಾಧ್ಯವಿದೆ ಎಂದರು.  

ಪ್ರಾಚಾರ್ಯ ಎಸ್‌.ಎಸ್‌.ಮಲ್ಲಾಡದ ಅಧ್ಯಕ್ಷತೆವಹಿಸಿ ಮಾತನಾಡಿ. ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶದಲ್ಲಿ ನಡೆಯುವ ಸಂಸ್ಥೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಸಂಸ್ಥೆ ಏಳಿಗೆಗಾಗಿ ಶ್ರಮಿಸಿದ ಗಣ್ಯರನ್ನು ಸ್ಮರಿಸುವದು ಮುಖ್ಯವಾಗಿದೆ. ವಿದ್ಯಾರ್ಥಿಗಳ ಉತ್ತಮ ಜ್ಞಾನಾರ್ಜನೆ ಮಾಡುವ ಮೂಲಕ ಪ್ರಯೋಜನ ಪಡೆಯಬೇಕು ಎಂದರು. 

ಪ್ರಾಧ್ಯಾಪಕ ಬಿ.ವೈ.ತೊಂಡಿಹಾಳ, ಉಪನ್ಯಾಸಕ ಎಸ್‌.ವಿ.ಕುಲಕರ್ಣಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಫ್‌.ಎಸ್‌.ಶಿವಣ್ಣವರ, ಡಾ.ಆರ್‌.ಸಿ.ದಾದುಗೌಡರ, ಡಾ.ಶ್ರೀಶೈಲ ಹುದ್ದಾರ, ರಾಜೇಶ್ವರಿ ಹೂಗರ್ತಿ, ಬಿಂದಿಯಾ ಬಿ, ಎಂ.ಎಸ್‌.ಸಿದ್ದಪ್ಪನವರ, ಶಿವಪ್ರಕಾಶ ಬಳಿಗಾರ, ಎಂ.ಎಸ್‌.ಸಂಗಣ್ಣವರ, ಎಸ್‌.ಬಿ.ಪೂಜಾರ, ಬಸವರಾಜ ಹೊಣ್ಣವರ, ಎಸ್‌.ಎನ್‌.ತೀರ್ಥ, ಎನ್‌.ಸಿ.ನಾಯಕ ಸೇರಿದಂತೆ ಕಾಲೇಜಿನ ಸಿಬ್ಬಂದಿ ಇದ್ದರು. 


ಸುದ್ದಿ ಓದಿ