ಶಿಗ್ಗಾವ್

ಪ್ರಪಂಚದಲ್ಲಿ ವಿಧ್ಯೆಗಿಂತ ಮಿಗಿಲಾದದ್ದು ಯಾವುದು ಇಲ್ಲ : ಸುಧಾಕರ

ಪ್ರಪಂಚದಲ್ಲಿ ವಿಧ್ಯೆಗಿಂತ ಮಿಗಿಲಾದದ್ದು ಯಾವುದು ಇಲ್ಲ : ಸುಧಾಕರ

ಶಿಗ್ಗಾವಿ 09: ಪ್ರಪಂಚದಲ್ಲಿ ವಿದ್ಯೆಗಿಂತ ಮಿಗಿಲಾದದ್ದು ಯಾವುದು ಇಲ್ಲ ಆದ್ದರಿಂದ ತಂದೆ ತಾಯಿಗಳು ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಒತ್ತು ಕೊಡಬೇಕು ಎಂದು ದೈವಜ್ಞ ಸಮಾಜದ ಅಧ್ಯಕ್ಷ ಸುಧಾಕರ ದೈವಜ್ಞ ಹೇಳಿದರು. 

ಪಟ್ಟಣದ ವಿಠ್ಠಲ ಮಂದಿರದಲ್ಲಿ ದೈವಜ್ಞ ಸಮಾಜ 20 ನೇ ವರ್ಷದ ಸತ್ಯನಾರಾಯಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಮಾಜದ ಮಕ್ಕಳು ಚೆನ್ನಾಗಿ ವಿಧ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದರು. 

ಸರಾಫ ಸಂಘದ ಅಧ್ಯಕ್ಷ ಚಂದ್ರಕಾಂತ ಪಾಲನಕರ ಮಾತನಾಡಿ ಇಂದು ಚಿನ್ನ ಬೆಳ್ಳಿ ಕುಲಕಸುಬಿನಲ್ಲಿ ಯಾವುದೇ ಲಾಭಾಂಶ ಇಲ್ಲ ನಮ್ಮ ಸಮಾಜದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಹಾಗೂ ಬೇರೆ ಬೇರೆ ವೃತ್ತಿಯನ್ನು ಮಾಡಿರಿ ಎಂದರು. 

ಮಾಜಿ ಅಧ್ಯಕ್ಷ ಪ್ರಕಾಶ ವೇರ್ಣೇಕರ ಮಾತನಾಡಿ  ವಿಧ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೇ ನಿಮ್ಮ ವಿಧ್ಯಾಭ್ಯಾಸವನ್ನು ಚೆನ್ನಾಗಿ ಮಾಡಿ ನಮ್ಮ ಸಮಾಜಕ್ಕೆ ಕೀರ್ತಿ ತರಬೇಕು ಎಂದರು. 

ಎಸ್‌ಎಸ್‌ಎಲ್‌ಸಿ ಹೆಚ್ಚು ಅಂಕ ಪಡೆದ ಸಮಾಜದ ಅಮೃತಾ ಪಾಲನಕರ, ಅಭಿಷೇಕ ವೇರ್ಣೆಕರ, ಭುವನೇಶ್ವರಿ ವೇರ್ಣೇಕರ, ರಾಧಿಕಾ ಶೇಜವಾಡಕರ, ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗನಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸಂಗೀತಾ ದೈವಜ್ಞ ಸೇರಿದಂತೆ ಸಮಾಜದ ಹಿರಿಯರಾದ ವಿನಾಯಕ ರಾಯ್ಕರ, ಮೋಹನ ರಾಯ್ಕರ,  ವಾಸುದೇವ ರಾಯ್ಕರ, ಸುಬ್ರಾಯ ಶೇಜವಾಡಕರ, ಪ್ರಕಾಶ ಪಾಲನಕರ, ಅಶೋಕ ರಾಯ್ಕರ, ರವಿ ರಾಯ್ಕರ,  ನಾಗರಾಜ ಪಾಲನಕರ, ಕೃಷ್ಣ ವೇರ್ಣೇಕರ, ನಾಗೇಶ ರಾಯ್ಕರ, ಮಂಜುನಾಥ ವೇರ್ಣೇಕರ, ನಾಗರಾಜ ಶೇಜವಾಡಕರ, ವಿಷ್ಣು ರಾಯ್ಕರ, ದತ್ತಾತ್ರೇಯ ದೈವಜ್ಞ, ಭೂಷಣ ರೇವಣಕರ, ರಾಘವೇಂದ್ರ ದೈವಜ್ಞ  ಸೇರಿದಂತೆ ಸಮಾಜದ ಮಹಿಳಾ ಮಂಡಲದ ವೀಣಾ ಕುರಡೇಕರ, ಸುನಂದಾ ದೈವಜ್ಞ, ಚಂದ್ರಕಲಾ ಪಾಲನಕರ, ಶಾಲಿನಿ ವೇರ್ಣೇಕರ, ವೀಣಾ ಶೇಜವಾಡಕರ ಸೇರಿದಂತೆ ಸದಸ್ಯರು ಹಾಗೂ ಸಮಾಜದ ಯುವಕರು, ಸರ್ವ ಸದಸ್ಯರು ಉಪಸ್ಥಿತರಿದ್ದರು. ರವಿ ರಾಯ್ಕರ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ