ರಾಷ್ಟ್ರೀಯ

ಪ್ರಣಬ್ ಮುಖರ್ಜಿ ದೇಹಾರೋಗ್ಯದಲ್ಲಿ ಚೇತರಿಕೆ ಇಲ್ಲ

ಪ್ರಣಬ್ ಮುಖರ್ಜಿ ದೇಹಾರೋಗ್ಯದಲ್ಲಿ ಚೇತರಿಕೆ ಇಲ್ಲ

ನವದೆಹಲಿ, ಆಗುಸ್ಟ್ 26: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ದೇಹ ಸ್ಥಿತಿಯಲ್ಲಿ ಚೇತರಿಕೆ ಕಂಡುಬಂದಿಲ್ಲ.  ಮೂತ್ರಪಿಂಡದ ಕಾರ್ಯಾಚರಣೆ ಮಂಗಳವಾರದಿಂದ ಕೊಂಚ  ಅಸ್ತವ್ಯಸ್ತಗೊಂಡಿದ್ದು,  ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆ ಬುಧವಾರ ತಿಳಿಸಿದೆ.

 

ಪ್ರಣಬ್ ಮುಖರ್ಜಿ ಆಳವಾದ ಕೋಮಾದಲ್ಲಿದ್ದು, ವೆಂಟಿಲೇಟರ್ ವ್ಯವಸ್ಥೆ ಮುಂದುವರಿದಿದೆ.  ತೀವ್ರ ನಿಗಾ ತಜ್ಞರ ತಂಡವು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದೆ.

 

ಕಾಂಗ್ರೆಸ್ ಹಿರಿಯ ಮುಖಂಡ, 84 ವರ್ಷ ವಯಸ್ಸಿನ ಪ್ರಣಬ್ ಮುಖರ್ಜಿ  ಅವರನ್ನು ಆಗಸ್ಟ್ 10 ರಂದು ಆರ್ & ಆರ್ ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತದ ಹೆಪ್ಪುಗಟ್ಟುವಿಕೆ ಕಂಡುಬಂದ ಹಿನ್ನೆಲೆಯಲ್ಲಿ  ತುರ್ತು ಜೀವ ಉಳಿಸುವ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.  ಅಲ್ಲದೆ ಅವರಲ್ಲಿ ಕೋವಿಡ್ ಸೋಂಕು ಸಹ ದೃಢಪಟ್ಟಿತ್ತು.


ಸುದ್ದಿ ಓದಿ