ಬಿಜೆಪಿಯೊಂದಿಗಿನ ಮೈತ್ರಿಯ ಪ್ರಶ್ನೆಯೇ ಇಲ್ಲ; ಎಸ್‌ಎಡಿ
ಮೋಗಾ, ಅಕ್ಟೋಬರ್ 1: ಪಂಜಾಬ್‌ನಲ್ಲಿ ಬಿಜೆಪಿ ಪಕ್ಷದೊಂದಿಗೆ ಮತ್ತೆ ಮೈತ್ರಿ ಹೊಂದುವ ಕುರಿತು ಮರುಚಿಂತನೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಗುರುವಾರ ಸ್ಪಷ್ಟಪಡಿಸಿದೆ.
ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ .ದಲ್ಜೀತ್ ಸಿಂಗ್ ಚೀಮಾ, ಎಸ್‌ಎಡಿ ರೈತರ ಪಕ್ಷವಾಗಿದ್ದು, ಅದರ ವಿರುದ್ಧ ನೀತಿ ರೂಪಿಸಿರುವ ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಳ್ಳುವ ನಿರ್ಧಾರದ ಕುರಿತು ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು.
ಕೃಷಿ ಮಸೂದೆ ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾದ್ದರಿಂದ ಸಂಸತ್ತಿನಲ್ಲಿ ಅದರ ವಿರುದ್ಧ ಮತ ಹಾಕಬೇಕಾಯಿತು ಎಂದು ಚೀಮಾ ತಿಳಿಸಿದರು.
ನರೇಂದ್ರ ಮೋದಿ ಸರ್ಕಾರದ ನಡವಳಿಕೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಧಾರ್ಮಿಕ ಪಕ್ಷಗಳು ಭಾವನೆ ಹೊಂದಿದೆ ಎಂದ ಚೀಮಾ ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಈ ಪಕ್ಷಗಳ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.