ಸಿಂಧಗಿ

ಮುಖ್ಯಾಧಿಕಾರಿಯಾಗಿ ಅನ್ಯ ಇಲಾಖೆ ಅಧಿಕಾರಿಗಳ ನಿಯೋಜನೆ ಬೇಡ

ಮುಖ್ಯಾಧಿಕಾರಿಯಾಗಿ ಅನ್ಯ ಇಲಾಖೆ ಅಧಿಕಾರಿಗಳ ನಿಯೋಜನೆ ಬೇಡ

ಸಿಂದಗಿ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನು ಮುಖ್ಯಾಧಿಕಾರಿ ಹುದ್ದೆಗೆ ನಿಯೋಜನೆ ಮಾಡುತ್ತಿರುವುದ ನಿಲ್ಲಿಸಬೇಕು. ಈಗಾಗಲೇ ಮಾಡಿರುವ ಆದೇಶಗಳನ್ನು ಹಿಂದಕ್ಕೆ ಪಡೆದು ರದ್ದುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಅಬ್ಬಾಸಲಿ ಕಾಖಂಡಕಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಿಗೆ ಗ್ರಾಪಂ ಪಿಡಿಓ ಸೇರಿದಂತೆ ಅನ್ಯ ಇಲಾಖೆಯ ಅಧಿಕಾರಿಗಳನ್ನು ಮುಖ್ಯಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಲಾಗುತ್ತಿದೆ. ಅನ್ಯ ಇಲಾಖೆ ಅವರು ನಗರ ಸ್ಥಳೀಯ ಸಂಸ್ಥೆಗಳಿಗೆ ಬಂದರೆ ಆಡಳಿತ ನಡೆಸುವುದು ಕಷ್ಟಕರವಾಗುತ್ತದೆ. ಅಲ್ಲದೇ ಯಾವುದೇ ಕಾರ್ಯಗಳು ಶೀಘ್ರವಾಗಿ ಜರಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ ಎಂದು ಆರೋಪ ವ್ಯಕ್ತ ಪಡೆಸಿದರು. 

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನು ಮುಖ್ಯಾಧಿಕಾರಿ ಹುದ್ದೆಗೆ ನಿಯೋಜನೆ ಮಾಡುತ್ತಿರುವುದ ನಿಲ್ಲಿಸಬೇಕು. ಈಗಾಗಲೇ ಮಾಡಿರುವ ಆದೇಶಗಳನ್ನು ಹಿಂದಕ್ಕೆ ಪಡೆದು ರದ್ದುಗೊಳಿಸಬೇಕು. ರಾಜ್ಯ ಪೌರ ಸೇವಾ ನೌಕರರ ಹಿತ ಕಾಪಾಡಬೇಕು. ಒಂದು ವೇಳೆ ನಿಯುಕ್ತಗೊಳಿಸಬೇಕಾದಲ್ಲಿ ನಮ್ಮ ಇಲಾಖೆಯ ನೌಕರ ವರ್ಗದವರನ್ನು ನೇಮಕ ಮಾಡಬೇಕು. ಒಂದು ವೇಳೆ ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಸಮಸ್ತ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘವು ರಾಜ್ಯಾದ್ಯಂತ ಅಗತ್ಯ ಸೇವಾ ಒದಗಿಸುತ್ತಿರುವುದನ್ನು ಬಹಿಷ್ಕರಿಸಿ ಅನಿವಾರ್ಯವಾಗಿ ಮುಷ್ಕರ ಕೈಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕಾ ಅಧ್ಯಕ್ಷ ಕಲ್ಲಪ್ಪ ಚೌರ ಮಾತನಾಡಿ, ಪೌರ ಸೇವಾ ನೌಕರರನ್ನು ನಿರ್ಲಕ್ಷಿಸಿ ಅನ್ಯ ಇಲಾಖೆಯ ನೌಕರರನ್ನು ನಗರ ಸ್ಥಳಿಯ ಸಂಸ್ಥೆಗಳಿಗೆ ನಿಯೋಜಿಸುತ್ತಿರುವುದು ಸೂಕ್ತವಲ್ಲ. ಇಂಥ ಆದೇಶಗಳನ್ನು ಹಿಂಪಡೆದು ಪೌರ ಸೇವಾ ನೌಕರರಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. 


ಸುದ್ದಿ ಓದಿ