ಉದ್ಯೋಗದ ಕೊರತೆ ಇಲ್ಲ, ವ್ಯಕ್ತಿತ್ವದ ಕೂರತೆ ಇದೆ: ಕೋಳಿವಾಡ
ಲೋಕದರ್ಶನ ವರದಿ
ರಾಣೇಬೆನ್ನೂರು 04: ದೇಶದಲ್ಲಿ ಉದ್ಯೋಗದ ಕೂರತೆಯಿಲ್ಲ, ಆದರೆ ಉದ್ಯೋಗವನ್ನು ಪಡೆಯಲು ವ್ಯಕ್ತಿತ್ವ ನಿರ್ಮಾಣದ ಕೂರತೆ ಎದ್ದು ಕಾಣುತ್ತಲಿದೆ ಅದಕ್ಕಾಗಿ ಯಾವುದೇ ಉದ್ಯೋಗವನ್ನು ಹೊಂದಬೇಕಾದರೆ ತರಬೇತಿ ಬಹಳ ಮುಖ್ಯವಾಗುತ್ತದೆ ಎಂದು ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.
ಅವರು ಇಲ್ಲಿನ ಬಿ.ಕೆ.ಗುಪ್ತಾ ಕಾಲೇಜು ಭವನದಲ್ಲಿ ಪಿಕೆಕೆ ಇನಿಷಿಯೆಟಿವ್ ಐಬಿಪಿಎಸ್, ಆರ್ಆರ್ಬಿ, ಐಎಎಸ್ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಇಂದಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಬಹು ಮುಖ್ಯ, ಸ್ಪರ್ಧೆಯಿಂದಲೇ ಸಮರ್ಥವಾಗಿ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದ ಕೋಳಿವಾಡರು ವಿಧ್ಯಾವಂತರು ಯಾವುದೇ ಉದ್ಯೋಗವಿರಲಿ ಮೋದಲು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೂಳ್ಳಬೇಕು ನಂತರ ಜೋತೆ ಜೋತೆಗೆ ಇಂತಹ ಕಾರ್ಯಾಗಾರಗಳಲ್ಲಿ ಭಾಗ ವಹಿಸುವುದರಿಂದ ಸಮರ್ಥವಾಗಿ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿಕೆಕೆ ಅಧ್ಯಕ್ಷ ಪ್ರಕಾಶ ಕೋಳಿವಾಡ ಅವರು ಮಾತನಾಡಿ ತಮ್ಮ ಸಂಸ್ಥೆಯು ಕಳೆದ 10 ವರ್ಷಗಳ ಹಿಂದೆ ಆರಂಭವಾಗಿದ್ದು ಎಲ್ಲ ರೀತಿಯ ನಿರುದ್ಯೋಗಿ ಯುವಕ ಯುವತಿಯರಿಗೆ, ಅವರಲ್ಲಿರುವ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಮೇಳದಲ್ಲಿ ಈಗಾಗಲೇ 5 ಸಾವಿರ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ. ಸಾವಿರಾರು ಯುವಕ ಯುವತಿಯರು ದೇಶದ ಮತ್ತು ನಾಡಿನ ಬೇರೆ ಬೇರೆ ಕಂಪನಿಗಳಲ್ಲಿ ಸೇರಿ ತಮ್ಮ ಬದುಕನ್ನು ಕಟ್ಟಿಕೂಂಡಿದ್ದಾರೆ. ಅದಕ್ಕಾಗಿ ಸಂಸ್ಥೆಯು ಹೆಮ್ಮೆ ಪಡುತ್ತದೆ. ಭವಿಷ್ಯದ ದಿನಗಳಲ್ಲಿ ಇನ್ನಿತರೆ ಹೊಸ, ಹೊಸ ಯೋಜನೆಗಳನ್ನು ರೊಪಿಸಿ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ. ಮತ್ತು ಸಾಂಸ್ಕ್ರತಿಕವಾಗಿ ನಡೆಸಲಾದ ನೈಟಿಂಗಲ್ ಆಫ್ ರಾಣೇಬೆನ್ನೂರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ಮೇರೆದ ವಿಧ್ಯಾರ್ಥಿಗಳು ಇಂದು ಪ್ರಸಿದ್ದ ಗಾಯಕರಾಗಿ ಹೂರ ಹೊಮ್ಮಿದ್ದಾರೆ. ಚಲನ ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿ ಐಎಎಸ್ ಅಧಿಕಾರಿ ಹೆಚ್.ಆರ್. ಶ್ರೀಕಾಂತ, ನ್ಯಾಯವಾದಿ ಎ.ಎಂ.ನಾಯಕ, ಡಾ. ಆರ್.ಎಂ. ಕುಬೇರ್ಪ, ಕೃಷ್ಣಪ್ಪ ಕಂಬಳಿ, ಶ್ರೀನಿವಾಸ ಸಾವುಕಾರ , ಪೋರ್ಣಿಮಾ .ಪಿ. ಕೋಳಿವಾಡ ಸೇರಿದಂತೆ ಮತ್ತಿತರ ಗಣ್ಯರು ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೂಂಡಿದ್ದರು. ಇಂದಿನಿಂದ ಪ್ರಾರಂಭವಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರವು 4 ತಿಂಗಳುಗಳ ಕಾಲ ಪ್ರಾಯೋಗಿಕ ಮತ್ತು ಪ್ರಾಥ್ಯಕ್ಷತೆಯೊಂದಿಗೆ ನಡೆಯಲಿದೆ. ಸಾವಿರಕ್ಕೂ ಹೆಚ್ಚು ಯುವಕ ಯುವತಿಯರು ತಮ್ಮ ಹೆಸರನ್ನು ನೋಂದಾಯಿಸಿಕೂಂಡಿದ್ದು ಸಂಸ್ಥೆಯ ಜನಪ್ರೀಯತೆಗೆ ಸಾಕ್ಷಿಯಾಗಿದೆ ಎನ್ನಬಹುದಾಗಿದೆ.