ಈ ವರ್ಷ ಹಂಪಿ ಉತ್ಸವ ಇಲ್ಲ
ಹೊಸಪೇಟೆ, ನವೆಂಬರ್; 4 : ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹಂಪಿ ಉತ್ಸವವನ್ನು ಸರ್ಕಾರ ಈ ವರ್ಷ ಆಚರಿಸುತ್ತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಹೊಸಪೇಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ಉದ್ಘಾಟನೆ ಹಿನ್ನೆಲೆಯಲ್ಲಿ ಸರ್ಕಾರದಿಂದ ೪ ಕೋಟಿ ೫೦ ಲಕ್ಷ ರೂಪಾಯಿ ವೆಚ್ಚದ ಅನುದಾನದಿಂದ ವಿಜಯನಗರ ಉತ್ಸವ ನಡೆಸಲಾಗಿರುವುದರಿಂದ ಮತ್ತೆ ಹಂಪಿ ಉತ್ಸವವನ್ನು ಮಾಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಂದಿನ ವರ್ಷ ದಿವಂಗತ ಎಂ.ಪಿ.ಪ್ರಕಾಶ್ ಆಶಯದಂತೆ ನವೆಂಬರ್ ೩, ೪, ೫ರಂದು ಮೂರು ದಿನಗಳ ಕಾಲ ಹಂಪಿ ಉತ್ಸವ ಜರುಗಲಿದೆ ಎಂದು ಸಚಿವರು ಹೇಳಿದರು.