ಅಪಾರವಾದ ಶಕ್ತಿ, ಜ್ಞಾನ ಇದೆ ಅನುಕಂಪ ಬೇಡ, ಅವಕಾಶ ಬೇಕು: ಗೀರೀಶ್
ಲೋಕದರ್ಶನ ವರದಿ
ರಾಣೇಬೆನ್ನೂರು 07: ವಿಕಲಚೇತನರಲ್ಲಿ ಅಘಾದವಾದ ಶಕ್ತಿಯನ್ನು ಭಗವಂತ ದೈವದತ್ತವಾಗಿ ನೀಡಿದ್ದಾನೆ. ಅವರಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುವ ಆತ್ಮ ವಿಶ್ವಾಸವಿದೆ. ಸಮಾಜ ಕೇವಲ ಅನುಕಂಪ ತೂರಿಸುವುದಕ್ಕಿಂತ ತಮ್ಮ ಮಾನವೀಯ ಗುಣವನ್ನು ತೋರಿಸಿ ಅವಕಾಶವನ್ನು ನೀಡಿದಾಗ ಮಾತ್ರ ಅವರು ಸಹ ಇತರರಂತೆ ಸಹಜ ಜೀವನವನ್ನು ಸಾಗಿಸಲು ಸಾಧ್ಯವಾಗುವುದು ಎಂದು ಸಾಮಾಜಿಕ ಸೇವಾ ಕಾರ್ಯಕರ್ತ ಗೀರೀಶ ಬುಡ್ಡನಗೌಡ್ರ ಹೇಳಿದರು.
ಅವರು ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೂಂಡು ಮಾತನಾಡಿದರು. ವೇದಿಕೆಯಲ್ಲಿ ಸ್ನೇಹದೀಪ ಸಂಸ್ಥೆಯ ಧರ್ಮದರ್ಶಿಗಳಾದ ಕೆ.ಜಿ.ಮೋಹನ್, ಡಾ.ಪಾಲ್ ಮುದ್ದಾ ಮಂಜುನಾಥ ಮುದ್ದಿ, ಪದಮ್ ಜೈನ್, ನವೀನ್ ಕುಳೇನೂರು, ಡಾ.ಆಶಾ ಕುಳೇನೂರು, ಮೇಘನಾ ನಾಡಿಗೇರ, ಯೋಗೇಶ ಭವಾನಿ ಶಂಕರ್ ಸೇರಿದಂತೆ ಮತ್ತಿತರ ಗಣ್ಯರು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.