ಶಿಗ್ಗಾವ್

ಪಕ್ಷದ ವರಿಷ್ಟರು ಅಭ್ಯರ್ಥಿಯನ್ನಾಗಿಸುವ ವಿಶ್ವಾಸವಿದೆ : ಮ್ಯಾಗೇರಿ

ಪಕ್ಷದ ವರಿಷ್ಟರು ಅಭ್ಯರ್ಥಿಯನ್ನಾಗಿಸುವ ವಿಶ್ವಾಸವಿದೆ : ಮ್ಯಾಗೇರಿ

ಶಿಗ್ಗಾವಿ: ನನ್ನ ಸುದೀರ್ಘ 20 ವರ್ಷಗಳ ಪಕ್ಷ ನಿಷ್ಟೆ ಮತ್ತು ಪಕ್ಷ ಸಂಘಟನೆ ಗಮನಿಸಿರುವ ಬಿಜೆಪಿ ಪಕ್ಷದ ವರಿಷ್ಟರು ಮತ್ತು ಮತದಾರರು ಉಪ ಚುನಾವಣೆಯಲ್ಲಿ ನನ್ನನ್ನು ಪಕ್ಷದ ಅಭ್ಯರ್ಥಿಯನ್ನಾಗಿಸುವ ಮೂಲಕ ಶಿಗ್ಗಾವಿ ಮತ್ತು ಸವಣೂರ ಕ್ಷೇತ್ರದ ಜನತೆಯ ಸೇವೆ ಮಾಡಲು ಅವಕಾಶ ನೀಡುವ ವಿಶ್ವಾಸವಿದೆ ಎಂದು ಶಿವಾನಂದ ಮ್ಯಾಗೇರಿ ಹೇಳಿದರು. 

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮಕ್ಕೆ ಬೇಟಿ ಕೊಟ್ಟಿದ್ದು, ಕ್ಷೇತ್ರದ ಜನತೆ ಅಪಾರ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿ ಪಕ್ಷ ನನಗೆ ನೀಡಿರುವ ವಿವಿಧ ಹುದ್ದೆಗಳನ್ನು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮಾರ್ಗದರ್ಶನದಲ್ಲಿ ಯಶಸ್ವೀಯಾಗಿ ನಿಭಾಯಿಸಿದ ಅನುಭವ ಇದ್ದು, ಪಕ್ಷದ ನಿಷ್ಟಾವಂತ ಸಾಮಾನ್ಯ ಕಾರ್ಯಕರ್ತನಾಗಿರುವ ನಾನು ಉಪಚುನಾವಣೆಗೆ ಪ್ರಭಲ ಆಕಾಂಕ್ಷಿಯಾಗಿದ್ದೇನೆ. 

ಪಕ್ಷದ ಸಂಘಟನೆಗಾಗಿ ಬೂತ ಸಶಕ್ತೀಕರಣ, ಬೂತ ಪೇಜ್ ಪ್ರಮುಖ ಮಾಡುವ ಮೂಲಕ ರಾಜ್ಯದಲ್ಲಿಯೇ ಶಿಗ್ಗಾವಿ ಮಂಡಲವನ್ನು ಮೊದಲಸ್ಥಾನದಲ್ಲಿ ನಿಲ್ಲುವಂತೆ ಮಾದರಿ ಕೆಲಸವನ್ನು ಮಾಡಲಾಗಿದ್ದು, ಅವಕಾಶ ಸಿಕ್ಕರೆ ಗೆದ್ದು ಸಾಮಾನ್ಯ ಕಾರ್ಯಕರ್ತನಾಗಿ, ಜನಾನುರಾಗಿಯಾಗಿ ಜನಪಯೋಗಿ ಕಾರ್ಯಗಳನ್ನು ಮಾಡುವ ಮೂಲಕ ಬಸವರಾಜ ಬೊಮ್ಮಾಯಿ ಮತ್ತು ಪ್ರಲ್ಹಾದ ಜೋಶಿಯವರ ಅಭಿವೃದಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಬಸವರಾಜ ಮೇಗಿಲಮನಿ, ನಿಂಗನಗೌಡಾ ಪಾಟೀಲ, ಮಂಜು, ಶಿವಾನಂದ ಪೂಜಾರ, ಬಸವರಾಜ ಗುದ್ಲಿಶೆಟ್ಟರ, ಬಸವರಾಜ ಹುಬ್ಬಳ್ಳಿ, ವೀರನಗೌಡ ಪಾಟೀಲ, ಸಂತೋಷ ದೊಡ್ಡಮನಿ, ರೇಣಕನಗೌಡ ಪಾಟೀಲ ಇತರರಿದ್ದರು. 


ಸುದ್ದಿ ಓದಿ