ರಾಣೆಬೆನ್ನೂರ

ಆಧುನಿಕ ತಂತ್ರಜ್ಞಾನದಲ್ಲಿ ಅಪ್ರತಿಮ ಸಾಧನೆಗೆ ಅವಕಾಶವಿದೆ: ಟಿ.ವಿ.ಸುರೇಶ್

ಆಧುನಿಕ ತಂತ್ರಜ್ಞಾನದಲ್ಲಿ ಅಪ್ರತಿಮ ಸಾಧನೆಗೆ ಅವಕಾಶವಿದೆ: ಟಿ.ವಿ.ಸುರೇಶ್
ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಜ್ಞಾನ ವಿಕಾಸ ಅಕಾಡೆಮಿ ಆಯೋಜಿಸಿದ್ದ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರವ

ರಾಣೇಬೆನ್ನೂರು 08: ಸಮಾಜದಲ್ಲಿ ಸಮಾನತೆ ಕಾಣಬೇಕಾದರೇ ಮಕ್ಕಳು ಇಷ್ಟ ಪಟ್ಟು ಶಿಕ್ಷಣ ಹೂಂದಬೇಕು ಇದರಿಂದ ಸರ್ವ ಸಮಾನವಾಗಿ ನಿತ್ಯದ ಬದುಕಿನಲ್ಲಿ ಅತ್ಯಂತ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸಬಹುದಾಗಿದೆ ಎಂದು ಡಿವಾಯ್‍ಎಸ್‍ಪಿ ಟಿ.ವಿ.ಸುರೇಶ್ ಹೇಳಿದರು.

ಅವರು ಇಲ್ಲಿನ ಚೌಡೇಶ್ವರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜ್ಞಾನ ವಿಕಾಸ ಅಕಾಡೆಮಿ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ನಿತ್ಯದ ಬದುಕಿನಲ್ಲಿ ಶಿಸ್ತು ಜೊತೆಗೆ ಸಂಯಮತೆ, ಸ್ವಚ್ಚತೆ ಅಳವಡಿಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ನಿರ್ಮಾಣವು ತನ್ನಿಂದ ತಾನೇ ಮೈಗೂಡಲಿದೆ. ಶಿಕ್ಷಣ ಎನ್ನುವುದು ನಿಂತ ನೀರಲ್ಲ. ಅದು ಸದಾಕಾಲ ಹರಿಯುವ ಗಂಗೆ. ಜ್ಞಾನ ವಿಕಾಸ ಅಕಾಡೆಮಿಯು ಹಮ್ಮಿಕೊಂಡಿರುವ ಈ ಮಹತ್ವಪೂರ್ಣ ಕಾರ್ಯದಿಂದ ಬದುಕಿನಲ್ಲಿ ಯಾವುದೇ ಶಿಕ್ಷಣವಿರಲಿ ಉನ್ನತಿ ಪ್ರತಿಪಾದಿಸಿ ಜ್ಞಾನ ಸಂಪಾದಿಸಿ ಭವಿಷ್ಯದಲ್ಲಿ ಭದ್ರತೆಯನ್ನು ಕಾಣುವುದರ ಜೊತೆಗೆ ಇತರರನ್ನೂ ಸಹ ಜ್ಞಾನಾರ್ಜನೆಗೆ ಅವಕಾಶ ನೀಡಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ, ಕೆಪಿಸಿಸಿ ಸಂಚಾಲಕ ಚಂದ್ರಣ್ಣ ಬೇಡರ, ಕರಿಯರ್ ಅಕಾಡೆಮಿ ಕಾರ್ಯದರ್ಶಿ ಶ್ರೀನಿವಾಸ ನಲವಾಗಲ, ನ್ಯಾಯವಾದಿ ಚವ್ಹಾಣ, ಗುರುದೇವ, ದಯಾನಂದ ನಲವಾಗಲ, ಹರಿಹರಗೌಡ ಪಾಟೀಲ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಗಣ್ಯರು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸುದ್ದಿ ಓದಿ