ರಾಣೆಬೆನ್ನೂರ

ವಿಕಲಚೇತನರಲ್ಲಿ ಅಗಾಧ ಪ್ರತಿಭೆ ಇದೆ, ಅನಾಧಾರ ಬೇಡ: ಡಾ.ವಿಜಯಲಕ್ಷ್ಮಿ

ವಿಕಲಚೇತನರಲ್ಲಿ ಅಗಾಧ ಪ್ರತಿಭೆ ಇದೆ, ಅನಾಧಾರ ಬೇಡ: ಡಾ.ವಿಜಯಲಕ್ಷ್ಮಿ
ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯಲ್ಲಿ ಕಾಲೇಜು ಉಪನ್ಯಾಸಕಿ ಡಾ.ವಿಜಯಲಕ್ಷ್ಮಿ ಶಿಕ್ಷಕರ ದಿನಾಚರಣೆ ನಿಮಿತ್ತ ಉಪನ್ಯಾಸ ನ

ರಾಣೇಬೆನ್ನೂರು 08: ವಿಕಲಚೇತನರಲ್ಲಿ ಆತ್ಮಸ್ಥೈರ್ಯ ಹೆಚ್ಚಿದ್ದು ಅವರಲ್ಲಿ ವಿಶೇಷ ಜ್ಞಾನ ಇರುತ್ತದೆ. ಅವರನ್ನು ಇತರರಂತೆ ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯದಲ್ಲಿ ಸಂಘ ಸಂಸ್ಥೆಗಳು ಪ್ರತಿಯೊಬ್ಬ ನಾಗರಿಕರು ತಮ್ಮ ಮಾನವೀಯ ಗುಣಗಳ ಮೂಲಕ ಸೇವೆ ಸಲ್ಲಿಸಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ಸರ್ಕಾರಿ ಪ.ಪೂ ಕಾಲೇಜಿನ ಉಪನ್ಯಾಸಕಿ ಡಾ.ವಿಜಯಲಕ್ಷ್ಮಿ ಹೇಳಿದರು.

ಅವರು ಇಲ್ಲಿನ ಶ್ರೀರಾಮ ನಗರದ ಸ್ನೇಹದೀಪ ಅಂಧ ಹಾಗೂ ಅಂಗವಿಕಲರ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ವಿಕಲಚೇತನರನ್ನು ಅನಾದಾರವಾಗಿ ಕಾಣುತ್ತಿದ್ದಾರೆ. ಇದು ಸಲ್ಲದು. ಇಂದಿನ ಆದುನಿಕ ತಂತ್ರಜ್ಞಾನದ ಯುಗದಲ್ಲಿ ವಿಕಲಚೇತನರು ತಮ್ಮಲ್ಲಿರುವ ಅಂತಃಶಕ್ತಿಯ ಮೂಲಕ ವಿಶ್ವದ ಗಮನ ಸೆಳೆಯುವ ಪ್ರತಿಭೆ ಮೆರೆಯುತ್ತದ್ದಾರೆ. ಅಂತಹವರನ್ನು ಗೌರವಿಸುವುದರ ಜೊತೆಗೆ ಇತರರನ್ನೂ ಸಮುದಾಯದಲ್ಲಿ ಸಮಾನತೆ ನೀಡಲು ಸಹಕರಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಘವೇಂದ್ರ, ಪ್ರಾಚಾರ್ಯ ಡಾ. ಗಂಗಾಧರ ಬೆಳವಿಗಿ, ಪ್ರೊ. ಗಿರಿಜಾ ಸ್ನೇಹದೀಪ ನಿರ್ದೇಶಕರಾದ ಡಾ.ಯೋಗೇಶ, ಭವಾನಿ ಶಂಕರ್, ಸಲಹೆಗಾರರಾದ ವಿಜಯಲಕ್ಷ್ಮೀ ಮುಂಡಾಸದ, ವಸಂತಾ ಹುಲ್ಲತ್ತಿ ಸೇರಿದಂತೆ ಮತ್ತಿತರ ಗಣ್ಯರು ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು.

ಸುದ್ದಿ ಓದಿ