ರಾಣೆಬೆನ್ನೂರ

ಮಾಧ್ಯಮ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ವಿಫುಲ್ ಅವಕಾಶಗಳಿವೆ : ಎಸ್. ಟಿ.ವೇದಮೂರ್ತಿ

ಮಾಧ್ಯಮ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ವಿಫುಲ್ ಅವಕಾಶಗಳಿವೆ :  ಎಸ್. ಟಿ.ವೇದಮೂರ್ತಿ

ರಾಣೇಬೆನ್ನೂರು ಜು 31 ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪತ್ರಿಕಾ ರಂಗವೂ  ಸ್ವಾತಂತ್ರ ಪೂರ್ವದಿಂದಲೂ ಅತ್ಯಂತ ಪರಿಣಾಮಕಾರಿಯಾಗಿ  ತನ್ನ ಕರ್ತವ್ಯವನ್ನು ಮಾಡುತ್ತಾ ಬರುತ್ತಿದೆ ಎಂದು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಟಿ. ವೇದಮೂರ್ತಿ ಹೇಳಿದರು.     

 ಬಿ.ಎ.ಜೆಎಸ್ಎಸ್ ಕಾಲೇಜಿನಲ್ಲಿ, ಕಾನಿಪ ಸಂಘವು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾಧ್ಯಮ ಕ್ಷೇತ್ರವು ಇಂದು ಎಲ್ಲರನ್ನೂ ಆಹ್ವಾನಿಸುತ್ತಿದೆ, ಕ್ಷೇತ್ರಕ್ಕೆ ಪ್ರವೇಶ ಪಡೆಯಬೇಕಾದರೆ ಸಾಹಿತ್ಯದ, ಬಹುಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಧ್ಯಯನದ ಹಸಿವು ಇರಬೇಕು ಅದರಿಂದ ಮಾತ್ರ ಹೂರಹೊಮ್ಮಿ  ಸಮರ್ಥ ಪತ್ರಕರ್ತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುವುದು ಎಂದರು.   

       ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಾದ ನಡೆಸಿದ ವೇದಮೂರ್ತಿ ಅವರು,ಈ ಹಿಂದೆ ಪತ್ರಿಕೋದ್ಯಮ ಪದವಿ ಗಳಿಸಲು, ಮೈಸೂರು, ಶಿವಮೊಗ್ಗ, ಬೆಂಗಳೂರು, ಧಾರವಾಡ  ವಿಜಯಪುರ ಸೇರಿದಂತೆ ನಾಡಿನ ಬೇರೆ ಬೇರೆ ನಗರಗಳಿಗೆ ಹೋಗಬೇಕಾಗಿತ್ತು. ಇದೀಗ ಕಳೆದ 20 ವರ್ಷಗಳಿಂದ ಇದೇ ಮಹಾವಿದ್ಯಾಲಯದಲ್ಲಿ ಹಾಗೂ ಹಾವೇರಿ ಕೆರಿಮತ್ತಿಹಳ್ಳಿ, ಯಲ್ಲಿ ಆರಂಭವಾಗಿರುವುದರಿಂದ  ಅತ್ಯಂತ ಸರಳವಾಗಿ, ಕಡಿಮೆ ವೆಚ್ಚದಲ್ಲಿ ಪದವಿ ಗಳಿಸಲು  ಅವಕಾಶವಿದೆ, ತಾಲೂಕಿನ  ವಿದ್ಯಾರ್ಥಿ ಸಮುದಾಯ ಇದರ ಪ್ರಯೋಜನವನ್ನು ಪಡೆಯಬೇಕಾದ  ಅಗತ್ಯವಿದೆ ಎಂದರು. 

 ಹಿರಿಯ ಪತ್ರಕರ್ತ, ಹುಬ್ಬಳ್ಳಿಯ ಮಲ್ಲಿಕಾರ್ಜುನ ಸಿದ್ದಣ್ಣನವರ್, ಅವರು ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಕುರಿತು ಉಪನ್ಯಾಸ ನೀಡಿದರು.         ಸಂತೋಷಕುಮಾರ್ ಪಾಟೀಲ್, ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾಲೇಜು ಆಡಳಿತಾಧಿಕಾರಿ ಡಾ: ಆರ್. ಎಂ.. ಕುಬೇರಪ್ಪ, ಉದ್ಯಮಿ ಮಂಜುನಾಥ ಗೌಡ ಶಿವಣ್ಣನವರ್,ಜಿಲ್ಲಾ ಅಧ್ಯಕ್ಷ ನಾಗರಾಜ ಕುರುವತ್ತೇರ, ಖಜಾಂಚಿ  ನಾರಾಯಣ ಹೆಗಡೆ, ಕಾರ್ಯದರ್ಶಿ ವೀರೇಶ್ ಮಡ್ಲೂರ್, ಸೇರಿದಂತೆ ಮತ್ತಿತರ ಗಣ್ಯರು ಮಾತನಾಡಿದರು.   

     ವೇದಿಕೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ, ಮಂಜುನಾಥ ಹೊಸಪೇಟೆ, ಶಿವಕುಮಾರ್ ಓಲೇಕಾರ್, ಮನೋಹರ ಮಲ್ಲಾಡದ,ಜಿ.ಎಲ್.ನಾಡಿಗೇರ್, ಎಸ್. ಜಿ.ಮಹಾನುಬಾವಿಮಠ, ಜಿ. ವಿ.ಶಿರಹಟ್ಟಿ, ಬಸವರಾಜ ಸರೂರ, ಕರಿಯಪ್ಪ ಅರಳಿಕಟ್ಟಿ, ಮುಕ್ತೇಶ್ ಕೊರಗುಂದಮಠ,  ಸಂತೋಷ್ ಮಹಾಂತಶೆಟ್ಟರ, ಮಂಜುನಾಥ ಕುಂಬಳೂರು, ಜಿ.ವಿ. ದೀಪಾವಳಿ ವಿಶ್ವನಾಥ ಕುಂಬಳೂರು ಎಂ. ಚಿರಂಜೀವಿ, ನಾಗರಾಜ ಹಾವನೂರು, ಕೆ.ಎಸ್. ನಾಗರಾಜ್, ಸ್ವರೂಪ, ಸೇರಿದಂತೆ ಮತ್ತಿತರರು ಇದ್ದರು.

ಸುದ್ದಿ ಓದಿ