ತಾಳಿಕೋಟಿ

ರಜಪೂತ ಸಮಾಜದ ಕಾರ್ಯ ಶ್ಲಾಘನೀಯ: ಜಯಸಿಂಗ್ ಸನದಿ

ರಜಪೂತ ಸಮಾಜದ ಕಾರ್ಯ ಶ್ಲಾಘನೀಯ: ಜಯಸಿಂಗ್ ಸನದಿ


             ತಾಳಿಕೋಟಿ 27 : ಪಟ್ಟಣದಲ್ಲಿ ಉಳಿದ ಸಮಾಜಗಳಿಗಿಂತ ರಜಪೂತ ಸಮಾಜ ಸಂಖ್ಯೆಯಲ್ಲಿ ಬಹಳ ಕಡಿಮೆ ಇದ್ದರೂ ಇಷ್ಟೊಂದು ಅದ್ಭುತವಾದ ಪುತ್ಥಳಿಯನ್ನು ಸ್ಥಾಪಿಸಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ ಎಂದು ಬೆಲ್ಲದ ಬಾಗೇವಾಡಿ ರಜಪೂತ ಸಮಾಜದ ಮುಖಂಡ ಜಯಸಿಂಗ್ ಸನದಿ ಹೇಳಿದರು. ಬುಧವಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಇತ್ತೀಚಿಗೆ ಲೋಕಾರೆ​‍್ಣಗೊಂಡ ಮಹಾರಾಣಾ ಪ್ರತಾಪ ಸಿಂಹ ಅವರ ಮೂರ್ತಿಯ ದರ್ಶನ ಪಡೆದುಕೊಂಡ ನಂತರ ಮಾತಾಡಿದರು. 

            ಇದೇ ಸಂದರ್ಭದಲ್ಲಿ ಅವರು ಸ್ಥಳೀಯ ರಾಜಪೂತ ಸಮಾಜದ ಅಧ್ಯಕ್ಷರಾದ ಹರಿಸಿಂಗ್ ಮೂಲಿಮನಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಸಮಾಜದ ಉಪಾಧ್ಯಕ್ಷರಾದ ರತನಸಿಂಗ್ ಕೊಕಟನೂರ,ಭರತಸಿಂಗ್ ಹಜೇರಿ,ಮಾನಸಿಂಗ್ ಕೊಕಟನೂರ, ಸುರೇಶ ಹಜೇರಿ,ರಮೇಶಸಿಂಗ್ ಗೌಡಗೇರಿ,ಭೀಮಸಿಂಗ್ ರಜಪೂತ(ಪಾಪುಸಿಂಗ್), ನಾರಾಯಣಸಿಂಗ್, ದೀಲೀಪಸಿಂಗ್ ಹಜೇರಿ ಹಾಗೂ ಅರುಣಸಿಂಗ್ ದಡೇದ ಇದ್ದರು. 


ಸುದ್ದಿ ಓದಿ