ಗ್ರಾಮೀಣ ಭಾಗದಲ್ಲಿ ಕಲೆ ಸಂಸ್ಕೃತಿ ಉಳಿಸುವ ಕಾರ್ಯ ಶ್ಲಾಘನೀಯ
ಆಷಾಢ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ರಾಜಶೇಖರ್
ಬಳ್ಳಾರಿ ಜು.3, ಮಕ್ಕಳಿಗೆ ರಂಗತರಬೇತಿ, ಡೊಳ್ಳು ಕುಣಿತ, ನಾಟಕ, ಹಾಡು ಇವೆಲ್ಲವೂ ಗ್ರಾಮೀಣ ಭಾಗದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಉಳಿದಿದೆ. ರಂಗಭೂಮಿ ಕಲೆಗಳನ್ನು ಗ್ರಾಮೀಣ ಭಾಗದಲ್ಲಿ ತೊಡಗಿಸಿಕೊಂಡು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ನಿರಂತರವಾಗಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ ಎಂದು ಮಾಜಿ ಸೈನಿಕ ರಾಜಶೇಖರ ಶ್ಲಾಘಿಸಿದರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಂ.ಬಸಾಪುರ ರಂಗನೇಸರ ಸಾಂಸ್ಕೃತಿಕ ಕಲಾ ಸಂಘವು ಹಮ್ಮಿಕೊಂಡಿದ್ದ ಆಷಾಢ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಡೂರು ತಾಲೂಕು ಕುರುಬ ಸಂಘದ ಅಧ್ಯಕ್ಷ ಗುರುಪಾದಪ್ಪ ಅವರು ಮಾತನಾಡಿ ಪ್ರಸ್ತುತ ದಿನಮಾನಗಳಲ್ಲಿ ಜನರು ಶ್ರೀಮಂತ ಆಗುತ್ತಿದ್ದಾರೆ ವಿನಹ ರಂಗಭೂಮಿಯನ್ನ ಶ್ರೀಮಂತಗೊಳಿಸುತ್ತಿಲ್ಲ. ಆದರೆ ಕಲೆ ಉಳಿದಿರುವುದು ಕೇವಲ ಹಳ್ಳಿ ಪ್ರದೇಶಗಳಲ್ಲಿ ಮಾತ್ರ. ರಂಗಭೂಮಿಯನ್ನು ಮೌಖಿಕವಾಗಿ ಬೆಳೆದು ಗ್ರಾಮೀಣ ಜನತೆಯ ತಳಹದಿಯಾಗಿ ಮೂಡಿಬರುವುದನ್ನು ಕಾಣುತ್ತೇವೆ. ರಂಗಭೂಮಿಯಲ್ಲಿ ನಿರಂತರವಾಗಿ ಕಲೆಯಿಂದ ಕುಲ ಹುಟ್ಟುಹಾಕಿದರು. ಅವರವರ ಕಾಯಕ್ಕೆ ತಕ್ಕಂತೆ ಕುಲಗಳು ಹುಟ್ಟಿಕೊಂಡವು. ಮಕ್ಕಳ ಡೊಳ್ಳು ಕುಣಿತವನ್ನು ಬಳ್ಳಾರಿ ಉತ್ಸವ, ಕಂಪ್ಲಿ ಉತ್ಸವ ಹಾಗೂ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಭಾಗವಹಿಸಿದ್ದಾರೆ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ ಹೆಚ್. ಇವರು ಮಾತನಾಡಿ, ಹಳ್ಳಿಗಳಲ್ಲಿ ಹಿಂದಿನ ಕಾಲದಲ್ಲಿ ಬಯಲಾಟ ಮತ್ತು ಸಾಮಾಜಿಕ ನಾಟಕಗಳು ನಡೆಯುತ್ತಿದ್ದವು. ಆದರೆ ಇಂದಿನ ಜನಗಳು ಅದನ್ನೇ ಮರೆತಿದ್ದಾರೆ. ಕಾಲಕಾಲಕ್ಕೆ ಮೊದಲು ಮಳೆ ಬೆಳೆ ಚನ್ನಾಗಿತ್ತು. ವರ್ಷಕ್ಕೆ ಒಂದಾದರೂ ಬಯಲಾಟ ನೋಡುತ್ತಿದ್ದೆವು. ಈಗ ಅದು ಕೂಡ ಕಾಣಲಾಗಿದೆ. ಹಳ್ಳಿಗಳ ಜನರ ಮನಸ್ಸು ಮಲ್ಲಿಗೆ ಹೂವಿನ ಸುಗಂಧ ಇದ್ದಾಗ ಎಲ್ಲಾರನ್ನು ಒಂದೇ ಮನೋಭಾವದಿಂದ ಕಾಣುತ್ತಾ, ಪ್ರೀತಿ, ವಿಶ್ವಾಸ, ನಂಬಿಕೆ ಮೇಲೆ ಗ್ರಾಮೀಣ ಜನರು ಒಳಗೊಂಡಿರುತ್ತಾರೆ ಎಂದು ನುಡಿದರು.
ಜನಪದ ಗೀತೆಗಳು, ಕುಣಿತ ಇವೆಲ್ಲವೂ ಗ್ರಾಮೀಣ ಜನತೆಯ ಮನರಂಜನೆಗಳು. ತಮ್ಮ ಜೀವನದ ಸುಖಕ್ಕೆ ನೆಮ್ಮದಿಯ ಜೀವನಕ್ಕೆ ಕಲೆಗಳನ್ನು ಪೋಷಿಸಿ ನೆಮ್ಮದಿಯನ್ನು ಕಾಣುತ್ತಿದ್ದರು. ನನಗೆ ಮತ್ತು ಬಸಾಪುರಕ್ಕೆ ಅವಿನಾಭಾವ ಸಂಬಂಧ ಇದೆ. ಮುಂದೆ ಕಲೆಗಳನ್ನು ಪೋಷಿಸುವುದಕ್ಕೆ ಸಹಕರಿಸುತ್ತೇನೆ. ಜನಪದ ಸಂಸ್ಕೃತಿಯನ್ನು ಎತ್ತಿ ಹಿಡಿದು ಬೆಳೆಸುವಂತಹ ಡೊಳ್ಳು ಕುಣಿತ ಕಲೆಯನ್ನು ಬಾಲಮಕ್ಕಳಿಗೆ ಕಲಿಸಿ ಪ್ರಯೋಗ ಮಾಡಲು ತಯಾರಿ ಮಾಡಿದಂತಹ ನಿಮ್ಮೂರಿನ ಚಂದ್ರಶೇಖರ ಬಹಳಷ್ಟು ಶ್ರಮವಹಿಸಿದ್ದಾರೆ ಎಂದು ಲಕ್ಷ್ಮಣ ಹೆಚ್ ಹೇಳಿದರು.
ತಾ.ಪಂ. ಮಾಜಿ ಸದಸ್ಯ ವಸಿಗೆರ್ಪ, ಶೇಖರ್ಪ, ರಾಘವೇಂದ್ರ, ಬಿ.ಆರ್.ತಿಪ್ಪೇಸ್ವಾಮಿ, ಸದಾಶಿವ, ಹುಚ್ಚಪ್ಪ, ರಾಮಣ್ಣ, ಕೆಂಚಪ್ಪ, ರುದ್ರ್ಪ, ಶೀಲಪ್ಪ, ಬಿ.ಆರ್.ಸಿದ್ದಪ್ಪ, ದೇವರಾಜ್ ಕಲಾವಿದರಾದ ಹುಸೇನಪ್ಪ, ಎರಿಸ್ವಾಮಿ, ಹೇಮಂತರಾಜ್, ಶರಣ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು
ಪರಮೇಶ್ ಕೆ.ಮತ್ತು ತಂಡದವರು ಡೊಳ್ಳು ಕುಣಿತ, ಜಡೇಶ್ ಎಮ್ಮಿಗನೂರು, ಡಿ.ಜಿ.ತಿರುಮಲ ರಾಜಾಪುರ ಮತ್ತು ದೊಡ್ಡಬಸಪ್ಪ ಸೋಮಾಸಮುದ್ರ ಅವರಿಂದ ಜಾನಪದ ಗೀತೆಗಳನ್ನು ಮತ್ತು ಪೌರಾಣಿಕ ನಾಟಕ ದ್ರೌಪದಿ ವಸ್ತ್ರಾಪಹರಣ ಹೇಮೇಶ್ವರ್ ಕೆ. ಮತ್ತು ತಂಡದವರಿಂದ ಪ್ರದರ್ಶಿಸಲಾಯಿತು. ನಾಗರಾಜ್ ಕೆ. ನಿರೂಪಣೆಯನ್ನ ಮಾಡಿದರು. ಸಂಘದ ಕಾರ್ಯದರ್ಶಿ ಚಂದ್ರು ಬಸಾಪುರ ವಂದಿಸಿದರು.