ಬಳ್ಳಾರಿ

ಎಚ್‌.ಆರ್ ಗವಿಪ್ಪ ಸರ್ಕಲ್ ನಲ್ಲಿ ಅಟೋ ಚಾಲಕರಿಂದ ನೀರಿನ ಅರವಟಿಗೆ ಆರಂಭ

ಎಚ್‌.ಆರ್ ಗವಿಪ್ಪ ಸರ್ಕಲ್ ನಲ್ಲಿ ಅಟೋ ಚಾಲಕರಿಂದ ನೀರಿನ ಅರವಟಿಗೆ ಆರಂಭ

ಲೋಕದರ್ಶನ ವರದಿ 

ಬಳ್ಳಾರಿ 06: ನಗರದ ಎಚ್ ಆರ್ ಗವಿಯಪ್ಪ (ಮೋತಿ) ಸರ್ಕಲ್ ನಲ್ಲಿ ಕೆ ತಾಯಪ್ಪ ಅಧ್ಯಕ್ಷತೆಯ ಅಟೋ ಚಾಲಕರ ಸಂಘದವತಿಯಿಂದ ಅಟೋ ನಿಲ್ದಾಣದ ಹತ್ತಿರ ನೀರಿನ ಅರವಟಿಗೆ ಆರಂಭಿಸಲಾಯಿತು. ದಿನ ಕಳೆದಂತೆ ಬೇಸಿಗೆಯ ಬಿಸಿಲು ತನ್ನ ಪ್ರತಾಪವನ್ನು ತೋರಿಸುತ್ತಿದೆ, ಹಳ್ಳಿಗಳಿಂದ ಮತ್ತು ಇತರೆ ಊರುಗಳಿಂದ ಕೆಲಸದ ನಿಮಿತ್ತ ನಗರಕ್ಕೆ ಬಂದ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆಪಡಬಾರದೆಂಬ ಸದುದ್ದೇಶದಿಂದ ಅವರ ಉಪಯೋಗಕ್ಕಾಗಿ ನೀರಿನ ಅರವಟಿಗೆಯನ್ನು ಆರಂಭಿಸಲಾಗಿದೆ. ಅರವಟಿಗೆ ಆರಂಭದ ಇಂದು ಮೊದಲನೆ ದಿನವಾದ್ದಾರಿಂದ ಮಜ್ಜಿಗೆ ವಿತರಣೆಯನ್ನು ಕೈಗೋಂಡಿದ್ದೇವೆಂದು ಸ್ಟ್ಯಾಂಡ್ ಲೀಡರ್ ತಿಳಿಸಿದರು. ಈ ಸಂದರ್ಭದಲ್ಲಿ ಅಟೋ ಸ್ಟಾಂಡ್ ಲೀಡರ್ ಆದ ನಾಗರಾಜ್, ಜಮೀರ್, ಗೋಪಾಲ್, ಫಾರುಖ್, ಮುಝಿಬ್ ಸೇರಿದಂತೆ ಹಲವಾರು ಅಟೋ ಚಾಲಕರಿದ್ದರು. 


ಸುದ್ದಿ ಓದಿ