ಶಿಗ್ಗಾವ್

ಮಾಹಿತಿ ಕಲೆ ಹಾಕುವ ಜೊತೆಗೆ ಪತ್ರಿಕೆಯನ್ನ ಜನತೆಗೆ ತಲುಪಿಸುವ ಕಾರ್ಯ ಶ್ಲಾಘನೀಯ: ಸಂತೋಷ ಹಿರೇಮಠ

ಮಾಹಿತಿ ಕಲೆ ಹಾಕುವ ಜೊತೆಗೆ ಪತ್ರಿಕೆಯನ್ನ ಜನತೆಗೆ ತಲುಪಿಸುವ ಕಾರ್ಯ ಶ್ಲಾಘನೀಯ: ಸಂತೋಷ ಹಿರೇಮಠ

ಶಿಗ್ಗಾವಿ,05 : ಮಾಹಿತಿ ಕಲೆ ಹಾಕುವ ಜೊತೆಗೆ ಪ್ರತಿದಿನ ಪತ್ರಿಕೆಯನ್ನ ಜನತೆಗೆ ತಲುಪಿಸುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯವಾದ ಕಾರ್ಯ ಎಂದು ತಹಶೀಲ್ದಾರ ಸಂತೋಷ ಹಿರೇಮಠ ಹೇಳಿದರು. 

ಪಟ್ಟಣದ ಹಳೆ ಬಸ್ ನಿಲ್ದಾಣದ ಜಯಲಕ್ಷ್ಮಿ ಭವನದಲ್ಲಿ ತಾಲೂಕಾ ಪತ್ರಿಕಾ ವಿತರಕರ ಸಂಘದಿಂದ ಹಮ್ಮಿಕೊಂಡ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸುದ್ದಿಗಳಿಗೆ ಅರ್ಥ ಬರುವುದು ಪತ್ರಿಕೆಯನ್ನು ಜನತೆ ಓದಿದಾಗ ಮಾತ್ರ, ಜಗತ್ತು ಎಚ್ಚರವಾಗುವ ಮೋದಲೇ ಪತ್ರಿಕೆ ಮನೆ ಬಾಗಿಲಿಗೆ ಮುಟ್ಟಿಸುತ್ತಾರೆ, ಪತ್ರಿಕೋದ್ಯಮದಲ್ಲಿ ವಿತರಕರ ಪಾತ್ರ ಬಹಳಷ್ಟು ಮಹತ್ವವನ್ನ ಪಡೆದಿದೆ, ಆ ಕಾರ್ಯವನ್ನ ಪ್ರತಿನಿತ್ಯ ತಮ್ಮ ಒತ್ತಡದ ಜೀವನದ ಮದ್ಯ ಪತ್ರಿಕಾ ವಿತರಕರು ಚಾಚೂ ತಪ್ಪದೇ ಶ್ರದ್ದೆಯಿಂದ ಪತ್ರಿಕೆಯನ್ನು ವಿತರಣೆ ಮಾಡುತ್ತಾರೆ ಎಂದರು. 

ಗಡಿ ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಕನ್ನಡವನ್ನ ಉಳಿಸುವ ನಿಟ್ಟಿನಲ್ಲಿ ಕನ್ನಡ ಪತ್ರಿಕೆಗಳ ಕಾರ್ಯವೂ ಶ್ಲಾಘನೀಯವಾಗಿದೆ, ಕೋರೋನ ವಾರಿಯರ್ಸಗಳಾಗಿ ವಿತರಕರ ಶ್ರಮ ದೊಡ್ಡದಾಗಿತ್ತು, ಮಳೆ, ಚಳಿ ಎನ್ನದೇ ಪತ್ರಿಕೆ ಹಂಚುವ ಕಾರ್ಯ ನಿಜಕ್ಕೂ ಅವರ ನಿಶ್ವಾರ್ಥ ಸೇವೆಯನ್ನು ತೋರಿಸುತ್ತದೆ ಎಂದ ಅವರು, ಇದೇ ಸೆ. 8 ರಂದು ನಡೆಯುವ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನ ಯಶಸ್ವಿಯಾಗಲಿ ಎಂದು ಹರಸಿದರು. 

ಇದೇ ಸಂದರ್ಭದಲ್ಲಿ ತಾಲೂಕಾ ವಿತರಕರ ಸಂಘದ ವತಿಯಿಂದ ತಹಶೀಲ್ದಾರ ಸಂತೋಷ ಹಿರೇಮಠ, ಗಡಿ ಅಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಸೋಮಣ್ಣ ಬೇವಿನಮರದ, ಪುರಸಭೆ ಸದಸ್ಯ ರಮೇಶ ವನಹಳ್ಳಿ, ಯುವ ಮುಖಂಡ ಆನಂದ ಸುಬೇಧಾರ ಅವರುಗಳನ್ನಸನ್ಮಾನಿಸಲಾಯಿತು.  

ಮುಖಂಡರಾದ ರಮೇಶ ಬ್ರಹ್ಮಾವರ, ಬಸವರಾಜ ಹಾವೇರಿ, ವಿ ಎಸ್ ಪಾಟೀಲ, ಪತ್ರಕರ್ತರಾದ ಪರಮೇಶ ಲಮಾಣಿ, ಪಿ ಎಂ ಸತ್ಯಪ್ಪನವರ, ಬಸವರಾಜ ಹಡಪದ, ಎಂ ವಿ ಗಾಡದ, ಸದಾಶಿವಸ್ವಾಮಿ ಹಿರೇಮಠ, ದೇವರಾಜ ಸುಣಗಾರ, ಚನ್ನವೀರ ನೀರಲಗಿ, ಪತ್ರಿಕಾ ವಿತರಕರ ಸಂಘದ ತಾಲೂಕಾದ್ಯಕ್ಷ ವಿರುಪಾಕ್ಷಪ್ಪ ನೀರಲಗಿ, ಉಪಾಧ್ಯಕ್ಷ ಸಿದ್ದರಾಮಗೌಡ ಮೆಳ್ಳಾಗಟ್ಟಿ, ಕಾರ್ಯದರ್ಶಿ ಸುರೇಶ ಯಲಿಗಾರ, ವಿತರಕರಾದ ಮುತ್ತಪ್ಪ ಬಂಡಿವಡ್ಡರ, ಸಂಕಲ್ಪ ಬಡ್ಡಿ, ವಿಶ್ವನಾಥ ಹೊಣ್ಣಣ್ಣನವರ, ಪ್ರಕಾಶ ಹರಿಗೊಂಡ, ಸುನೀಲ ಹರಿಗೊಂಡ, ಅರುಣ ಸಾಳುಂಕೆ, ಹರೀಶ ಗಣ್ಣಪ್ಪನವರ ಸೇರಿದಂತೆ ಇನ್ನುಳಿದ ಸದಸ್ಯರು ಇದ್ದರು. 


ಸುದ್ದಿ ಓದಿ