ರಾಷ್ಟ್ರೀಯ

ರಾಷ್ಟ್ರಪತಿಯವರಿಂದಲೂ ಪಾಸ್ವಾನ್ ಗೆ ಅಂತಿಮ ಶ್ರದ್ಧಾಂಜಲಿ

ರಾಷ್ಟ್ರಪತಿಯವರಿಂದಲೂ  ಪಾಸ್ವಾನ್ ಗೆ  ಅಂತಿಮ ಶ್ರದ್ಧಾಂಜಲಿ

ನವದೆಹಲಿ , ಅ 9 (ಯುಎನ್ಐ)  ಗುರುವಾರ ರಾತ್ರಿ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಮೃತದೇಹವನ್ನು ಏಮ್ಸ್ ಆಸ್ಪತ್ರೆಯಿಂದ ಅವರ ನಿವಾಸಕ್ಕೆ ತರಲಾಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಮೃತರ ನಿವಾಸಕ್ಕೆ ತೆರಳಿ ಅಂತಿಮ ಗೌರವ ಸಲ್ಲಿಸಿದರು. ಇದಕ್ಕೂ ಮುನ್ನ  ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ   ರಕ್ಷಣಾ  ಸಚಿವ ರಾಜನಾಥ್ ಸಿಂಗ್ ಅನೇಕ ಗಣ್ಯರು  ಪಾಸ್ವಾನ್ ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.

ಎಲ್ ಜೆಪಿ ನಾಯಕ 74 ವರ್ಷದ ರಾಮ್ ವಿಲಾಸ್ ಪಾಸ್ವಾನ್ ಅವರು ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನರಾಗಿದ್ದರು. ಸಚಿವರ ನಿಧನಕ್ಕೆ ಹಲವು ಕೇಂದ್ರ ಸಚಿವರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಆರೋಗ್ಯ ಸಚಿವ ಹರ್ಷ ವರ್ಧನ್ ಜೊತೆಗೆ ಪಾಸ್ವಾನ್  ಅವರ ಪುತ್ರ ಚಿರಾಗ್ ಪಾಸ್ವಾನ್ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹವನ್ನು ಮನೆಗೆ ತರಲು ಸಹಕಾರ ನೀಡಿದರು. 


ಸುದ್ದಿ ಓದಿ