ಶಿಗ್ಗಾವ್

ಮಾನವ ಕುಲ ಬದುಕಿಗೆ ಬೆಳಕಾದ ಶಕ್ತಿಯೇ ತ್ರಿಪದಿ ಕವಿ ಸರ್ವಜ್ಞರು: ಮ್ಯಾಗೇರಿ

ಮಾನವ ಕುಲ ಬದುಕಿಗೆ ಬೆಳಕಾದ ಶಕ್ತಿಯೇ ತ್ರಿಪದಿ ಕವಿ ಸರ್ವಜ್ಞರು: ಮ್ಯಾಗೇರಿ

ಶಿಗ್ಗಾವಿ :ಮಾನವ ಕುಲ ಬದುಕಿಗೆ ಬೆಳಕಾದ ಶಕ್ತಿಯೇ ತ್ರಿಪದಿ ಕವಿ ಸರ್ವಜ್ಞರು ಎಂದು ತಾಲೂಕ ಬಿಜೆಪಿ ಅಧ್ಯಕ್ಷ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಚಿಮ್ಯಾಗೇರಿ ಹೇಳಿದರು.  

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಸರ್ವಜ್ಞರ  ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿದಿನ ನಮಗೆ ಅನ್ನ ನೀರು ಹೇಗೆ ಮುಖ್ಯವೋ ಅದಕ್ಕಿಂತ ನಮ್ಮ ದಿನನಿತ್ಯದ ಬದುಕು ಮತ್ತು ಜೀವನಕ್ಕೆ ತ್ರಿಪದಿ ಕವಿ ಸರ್ವಜ್ಞರ ಸಾಹಿತ್ಯ ಮತ್ತು ಶುಭ ಸಂದೇಶಗಳು ಭವ್ಯ ಬೆಳಕು ನೀಡಿ ಜೀವನ್ ಮುಕ್ತಿ ನೀಡುವ ಶಕ್ತಿ ತುಂಬಿದೆ ಎಂದರು . 

ಕಾರ್ಯಕ್ರಮದ ಅಧ್ಯಕ್ಷತೆ ತಹಶೀಲ್ದಾರ್ ಸಂತೋಷ್ ಹಿರೇಮಠ ವಹಿಸಿದ್ದರು.ಮಾಜಿ ಪುರಸಭೆಯ ಅಧ್ಯಕ್ಷ ಶ್ರೀಕಾಂತ್ ಬುಳ್ಳಕ್ಕನವರ, ಕುಂಬಾರ ಸಮಾಜದ ಅಧ್ಯಕ್ಷ ಶಿವಣ್ಣ ಚಕ್ರಶಾಲಿ, ಪುರಸಭೆನಾಮ ನಿರ್ದೇಶಿತ ಸದಸ್ಯ ಮಾಂತೇಶ್ ಕುಂಬಾರ್, ನಿವೃತ್ತ ಉಪ ತಹಸಿಲ್ದಾರ್ ಕುಂಬಾರ್, ಮಲ್ಲೇಶಪ್ಪ ಹುಬ್ಬಳ್ಳಿ, ಶಿವಲಿಂಗಪ್ಪ ಹುಬ್ಬಳ್ಳಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ