ಇತಿಹಾಸದ ಸಂಪ್ರದಾಯಗಳಿಂದ ಭಾವೈಕ್ಯತೆ ಮೂಡುತ್ತಿದೆ: ನಾಗರಾಜ ಅಗಡಿ
ಲೋಕದರ್ಶನ ವರದಿ
ರಾಣೇಬೆನ್ನೂರು 22: ನಮ್ಮ ಇತಿಹಾಸದ ಪೂರ್ವಜರು ಭಾರತೀಯ ಸಂಸ್ಕ್ರುತಿಯಲ್ಲಿ ಇರುವ ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು ಇವೆಲ್ಲವು ಮಾನವನ ದಿನನಿತ್ಯದ ಬದುಕಿನ ಜೂತೆಗೆ ವಿಶೇಷತೆಯೋಂದಿಗೆ ಭಾವೈಕ್ಯತೆಯನ್ನು ಬೆಸೆಯುವ ಸಂಸ್ಕಾರ ಪರಂಪರೆಯಾಗಿದೆ ಎಂದು ಗುರು ಮಾರ್ಕಂಡೇಶ್ವರ ದೇವಸ್ಥಾನ ಸಮಿತಿಯ ಅದ್ಯಕ್ಷ ನಾಗರಾಜ ಅಗಡಿ ಹೇಳಿದರು.
ಅವರು ನಗರದ ಪದ್ಮಸಾಲಿ ಸಮಾಜದ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಇತ್ತಿಚೆಗೆ ನಡೆದ ವಿಜಯ ದಶಮಿ ದಸರಾ ಮಹೋತ್ಸವ, ಪಾಲಕಿ ಉತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದ ಯುವಕರು ತಮ್ಮ ಬದುಕಿನ ಜೂತಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೂಳ್ಳುವುದರ ಮೂಲಕ ಯುವ ಪಿಳಿಗೆಗೆ ನಮ್ಮ ಸಂಸ್ಕ್ರುತಿಯನ್ನು ಪರಿಚಯಿಸಲು ಮತ್ತು ಅದರ ಬಗ್ಗೆ ಹಿರಿಯರಿಂದ ಪಡೆದ ಮಾರ್ಗದರ್ಶನವನ್ನು ಅವರಿಗೂ ಸಹ ಧಾರೆ ಯರೆಯುವುದರ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.
ಸಮಿತಿಯ ಉಪಾಧ್ಯಕ್ಷ ಹನುಮಂತಪ್ಪ ಟಿ. ಮುಕ್ತೇನಹಳ್ಳಿ ಅವರು ಪಾಲಕಿ ಉತ್ಸವ ಮೇರವಣಿಗೆಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಮುಖ್ಯ ಅಥಿತಿಯಾಗಿ ಪಾಲ್ಗೂಂಡಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ.ಬಸವರಾಜ ಎಸ್. ಕೇಲಗಾರ ಅವರು ಮಾತನಾಡಿ ಸಮಾಜಕ್ಕೆ ಮತ್ತು ಸಮಾಜ ಅಳವಡಿಸಿಕೂಂಡಿರುವ ವೃತ್ತಿಗೆ ವೇಧ ಇತಿಹಾಸ ಕಾಲಗಳಿಂದಲೂ ತನ್ನದೇ ಆದ ಭವ್ಯ ಪರಂಪರೆ ಇದೆ. ವ್ಯಕ್ತಿಗಿಂತ ಸಮಾಜ ಬಹು ದೂಡ್ಡದು ಸಾಮೂಹಿಕವಾಗಿ ಮಾಡುದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ಇತರೆ ಸಮಾಜದ ಪರಸ್ಪರರು ಕೂಡಿ ಆಚರಿಸುವುದರಿಂದ ಮತ್ತಷ್ಟು ಮೇರಗೂ ಬರುತ್ತದೆ ದಸರಾ ಉತ್ಸವ ಮತ್ತು ವಿಜಯ ದಶಮಿಯು ಎಲ್ಲರ ಬಾಳು ಬೆಳಗುವುದರ ಜೂತೆಗೆ ಪ್ರತಿಯೂಂದು ಕುಟುಂಬಕ್ಕು ಭವಿಷ್ಯದಲ್ಲಿ ಪ್ರಜ್ವಲತೆ ಪ್ರಾಪ್ತಿಯಾಗಲೇಂದು ಹಾರೈಸಿದರು.
ಮಾರ್ಕಂಡೇಶ್ವರ ದೇವಸ್ಥಾನದಿಂದ ಹೂರಟ ಪಾಲಕಿ ಉತ್ಸವದ ಮೇರವಣಿಗೆಯು ದೂಡ್ಡ ಕೆರೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ವಿನಿಮಯ ಮಾಡಿಕೂಂಡು ನಂತರ ನಗರದ ಪ್ರಮುಖ ಬಿದಿಗಳಲ್ಲಿ ಸಾಗಿ ಪುನಃ ದೇವಸ್ಥಾನಕ್ಕೆ ಸಾಂಗತ್ಯಗೂಂಡಿತು. ಇದೆ ಸಂದರ್ಭದಲ್ಲಿ ಪ್ರದಾನ ಅರ್ಚಕ ವಿರಯ್ಯ ಸ್ವಾಮಿ, ಪುರಾಣ ಪ್ರವಚನಕಾರ ಲಕ್ಷ್ಮಣ ವೀರಣ್ಣ ಗುಂಡೇರ, ನಾಗಪ್ಪ ಐರಣಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಮುಂಚೂಣಿಯಲ್ಲಿ ಕಾರ್ಯದರ್ಶಿ ಲಕ್ಷ್ಮಣ ಕಡ್ಲಿಬಾಳ, ಶಿವಾನಂದ ಬಗಾದಿ, ಮಂಜುನಾಥ ಹುಬ್ಬಳ್ಳಿ, ಬಸವರಾಜ ಐರಣಿ, ಪರಶುರಾಮ ಅಗಡಿ, ಮಾರುತಿ ಗರಡಿಮನಿ, ಎಲ್ಲಪ್ಪ ಗುತ್ತಲ, ರವಿ ಕಿಚಡಿ, ನಾಗರಾಜ ತುಮಕೂರ, ಬೆನಕೇಶ ಹದಡಿ,ಮಂಜುನಾಥ ಶೇಟ್ಟಿ , ಗೀರಿಶ್ ಅಗಡಿ, ಗಣೇಶ ಹುಲ್ಲತ್ತಿ, ಭಿಮಣ್ಣ ಎಡಹಳ್ಳಿ, ವೇಂಕಟೇಶ ಪೆನಗೂಂಡ, ಶಂಕ್ರಣ್ಣ ಗರಡಿಮನಿ, ವಿನಾಯಕ ಅಗಡಿ, ಲಿಂಗರಾಜ ಐರಣಿ, ಪ್ರವೀಣ್ ಮುಕ್ತೇನಹಳ್ಳಿ, ಗುರುರಾಜ ತುಮ್ಮಿನಕಟ್ಟಿ, ಸೇರಿದಂತೆ ಸಮಾಜದ ಮತ್ತಿತರ ಗಣ್ಯರು ಮುಖಂಡರು ಪಾಲ್ಗೊಂಡಿದ್ದರು.