ಶಿಗ್ಗಾವ್

ಶರಣ ಸಂಸ್ಕೃತಿ ಉತ್ಸವದ ಮೂರನೇಯ ದಿನದ ಕಾರ್ಯಕ್ರಮ

ಶರಣ ಸಂಸ್ಕೃತಿ ಉತ್ಸವದ ಮೂರನೇಯ ದಿನದ ಕಾರ್ಯಕ್ರಮ


ಲೋಕದರ್ಶನ ವರದಿ 

ಶಿಗ್ಗಾವಿ : ನಡೆ ಮತ್ತು ನುಡಿಯಲ್ಲಿ ಅಂತರ ಇರದವರು ಶಿವಶರಣರು, ಶರಣರ ನಡೆಯೆ ಸಂಸ್ಕೃತಿ, ನಡೆ ನುಡಿ ಒಂದಾದರೆ ಶಿವನ ದರ್ಶನವಾದಂತೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.  

ಪಟ್ಟಣದ ವಿರಕ್ತಮಠದಲ್ಲಿ ಹಮ್ಮಿಕೊಂಡ 29 ನೇ ಶರಣ ಸಂಸ್ಕೃತಿ ಉತ್ಸವದ ಮೂರನೇಯ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಯಾರು ಅರಾ​‍್ಣ ಭಾವದಿಂದ ಶಿವನನ್ನು ಆರಾಧಿಸಿದರೆ ಶಿವ ಆಗುತ್ತಾರೆ, ಶಿವನನ್ನು ಆರಾಧಿಸುತ್ತಾರ ಶಿವನಾಗುವರೇ ಶಿವಶರಣರು, ಬಸವಣ್ಣನವರು ಮಹಿಳೆಯರಿಗೆ ಹೆಚ್ಚಿನ ಪ್ರಾದಾನ್ಯತೆ ನೀಡಿದ್ದರು, ಜಾತಿರಹಿತ ಸಮಾಜವನ್ನು ಜಾರಿಗೆ ತಂದವರು ಬಸವಣ್ಣನವರು, ನೀನು ಗಳಿಸಿದ್ದನ್ನು ನೀನು ಒಬ್ಬನೆ ಅನುಭವಿಸದೆ ಅದನ್ನು ಸಮಾಜಕ್ಕೂ ಉಪಯೋಗಿಸಬೇಕು ಎನ್ನುವ ಕಲ್ಪನೆ ನೀಡಿದವರು ಬಸವಣ್ಣನವರು ಆದರೆ ದುರ್ದೈವ, ಇಂದು ಬಸವಣ್ಣನರ ತತ್ವಗಳನ್ನು ಅಪಪ್ರಚಾರ ಮಾಡುವಂತವುಗಳು ನಡೆಯುತ್ತಿವೆ ಎಂದರಲ್ಲದೆ ಎಲ್ಲರೂ ಕಾಶಿ ಯಾತ್ರೆ ಮಾಡಿ, ಇಂದು ಗಂಗಾ ನದಿ ಶುದ್ದವಾಗಿದೆ, ಕಾಯಕದಿಂದ ಮಾತ್ರ ನಮ್ಮ ಇಚ್ಚೆಗಳು ಈಡೆರುತ್ತವೆ ಎಂದರು. 

ಶ್ರೀಮಠದ ವತಿಯಿಂದ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿಯವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರೇ, ಕೇಂದ್ರ ಸಚಿವರು ನಾಲ್ಕು ಶ್ರೀಗಳನ್ನು ಗೌರವಿಸಿದರು. 

ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು, ಗದಗಿನ ತೊಂಟದಾರ್ಯಮಠದ ಖ್ಯಾತ ಪ್ರವಚನಕಾರ ಡಾ. ಮಹಾಂತದೇವರು, ಬಸವಶಾಂತಲಿಂಗ ಮಹಾಸ್ವಾಮಿಗಳು, ಡಾ. ಎ ಸಿ ವಾಲಿ, ತಹಶೀಲ್ದಾರ ಶಿವಾನಂದ ರಾಣೆ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೋಪ್ಪ, ತಾಲೂಕ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಭಾಜಪ ರಾಜ್ಯ ಯುವ ಮೋರ್ಚಾ ಸದಸ್ಯ ನರಹರಿ ಕಟ್ಟಿ,  ಭೋವಿ ಸಮಾಜ ಅಧ್ಯಕ್ಷ ಅರ್ಜುನ ಹಂಚಿನಮನಿ, ಪುರಸಭೆ ಸದಸ್ಯರಾದ ಶ್ರೀಕಾಂತ ಬುಳ್ಳಕ್ಕನವರ, ಸುಭಾಸ ಚವ್ಹಾಣ, ದಯಾನಂದ ಅಕ್ಕಿ, ರಮೇಶ ವನಹಳ್ಳಿ, ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ