ರಾಣೆಬೆನ್ನೂರ

ನಾಟಕದ ಮೂಲಕ ನೈಜತೆಯನ್ನು ಜನ-ಸಾಮಾನ್ಯರಿಗೆ ತಿಳಿಸುವ ಕೆಲಸ

ನಾಟಕದ ಮೂಲಕ ನೈಜತೆಯನ್ನು ಜನ-ಸಾಮಾನ್ಯರಿಗೆ ತಿಳಿಸುವ ಕೆಲಸ

ರಾಣೀಬೆನ್ನೂರ 16: ನಾಟಕಗಳು ಮನುಷ್ಯನಿಗೆ ಮನೋರಂಜನೆ ಜೊತೆಗೆ ಬದುಕಿನ ವಾಸ್ತವಿಕ ಸ್ಥಿತಿಯನ್ನು ನೈಜ ರೂಪದಲ್ಲಿ ಪ್ರತಿಬಿಂಬಿಸುವ ಮತ್ತು ಸಂದೇಶ ನೀಡುವ ಬಹು ಮಾಧ್ಯಮವಾಗಿದೆ. ನಾಟಕದ ಮೂಲಕ ನೈಜತೆಯನ್ನು ಜನ-ಸಾಮಾನ್ಯರಿಗೆ ತಿಳಿಸುವ ಕೆಲಸವು ನಾಟಕದ ಕಲಾವಿದರುಗಳು ಮಾಡುತ್ತಿದ್ದಾರೆ. ಕಲಾವಿದರ ತವರೂರು ನಗರ ಮತ್ತು ತಾಲೂಕಿನ ಜನತೆ ಪ್ರೋತ್ಸಾಹಿಸಲು ಮುಂದಾಗಬೇಕೆಂದು ರಾಣೀಬೆನ್ನೂರಿನ ಮಂಜುನಾಥ ನಾಟ್ಯ ಕಲಾ ಸಂಘದ ಮಾಲಕರಾದ ನಾಗರತ್ನಮ್ಮ ಚಿಕ್ಕಮಠ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 

ಅವರು ಇಲ್ಲಿನ ನಗರಸಭಾ ಶಾಲಾ ಆವರಣದಲ್ಲಿರುವ ಕಲಾಭವನದ ರಂಗ ಸಜ್ಜಿಕೆಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ನಾಟಕ ಸಂಘವು ಮೂಲತ: ಇದೇ ನಗರದಲ್ಲಿ ಕಳೆದ 50 ವರ್ಷಗಳ ಹಿಂದೆ ಪ್ರಾರಂಗೊಂಡು ನಾಡಿನ ಅನೇಕ ಜಿಲ್ಲೆ ಮತ್ತು ತಾಲೂಕ ಕೇಂದ್ರಗಳೂ ಸೇರಿದಂತೆ ಜಾತ್ರೆ-ಉತ್ಸವ, ಹಬ್ಬ-ಹರಿದಿನಗಳಲ್ಲಿ ಪ್ರದರ್ಶನಗಳನ್ನು ನಡೆಸಿ ಪ್ರಸಿದ್ಧ ಕಂಪನಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. 25 ವರ್ಷಗಳ ನಂತರ ಕಂಪನಿಯು ನಗರದಲ್ಲಿ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ. ಈ ಕಂಪನಿಯಲ್ಲಿ 35ಕ್ಕೂ ಹೆಚ್ಚು ಖ್ಯಾತ ಕಲಾವಿದರನ್ನೊಳಗೊಂಡ ತಂಡವಿದೆ.  

ಕಲೆಯನ್ನೇ ನಂಬಿಕೊಂಡು ಬದುಕಿ ಬಾಳುತ್ತಿರುವ ಕಲಾವಿದರಿಗೆ ಕಲಾಭಿಮಾನಿಗಳೇ ಅನ್ನದತರಾಗಿದ್ದು ಅವರಿಂದಲೇ ಕಲಾವಿದರ ಜೀವನ ನಡೆಯಬೇಕಾಗಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಕರೋನಾ ಹಾವಳಿಯಿಂದ ನಾಟಕ ಕಂಪನಿಗಳು ನಡೆಯದೇ ಕಲಾವಿದರ ಜೀವನ ದುಸ್ಥರವಾಗಿದೆ. ತವರೂರಿನ ಅಭಿಮಾನದಿಂದ ಇದೇ ದಿಽಽ 17ರಿಂದ ನಾಟಕ ಕಂಪನಿ ಪ್ರಾರಂಭಿಸಲಾಗುತ್ತಿದ್ದು ಸರ್ಕಾರದ ನಿಯಮಾವಳಿಗಳನ್ನು ಅನುಸರಿಸಿ ಪ್ರದರ್ಶನ ನಡೆಸಲಾಗುವುದು. ಪ್ರಾರಂಭದ ಆಕರ್ಷಣೆಯಾಗಿ ಮುದುಕನಿಗೆ ಹುಡುಗಿ ಚಿಂತಿ ಹುಡುಗಿಗೆ ಮಾವನ ಚಿಂತಿ ಎಂಬ  ಪಿ ಬಿ ದುತ್ತರಗಿ ವಿರಚಿತ ಹಾಸ್ಯ ಪ್ರಧಾನ ನಾಟಕ ಅಭಿನಯಿಸಲಾಗುವುದು ಕಲಾಭಿಮಾನಿಗಳು ಸಹಕರಿಸಿ ಪ್ರೋತ್ಸಾಹಿಸಬೇಕೆಂದು ನಾಗರತ್ನಮ್ಮ ಮತ್ತು ಮಕ್ಕಳಾದ ಮಂಜುನಾಥ, ಸುಧೀರ ಹಾಗೂ ಮಲ್ಲಿಕಾರ್ಜುನ ಚಿಕ್ಕಮಠ ಅವರು ಮನವಿ ಮಾಡಿದ್ದ್ದಾರೆ. 


ಸುದ್ದಿ ಓದಿ