ಕ್ವಾರಂಟೈನ್ ನಲ್ಲಿದ್ದ ಯುವ ಇಂಜಿನಿಯರ್ . .. ಕತ್ತು ಕೊಯ್ದುಕೊಂಡು ಆತ್ಮಹತ್ಯೆ..!
ಕಣ್ಣೂರು, ಸೆಪ್ಟೆಂಬರ್ 12: ವಿದೇಶದಿಂದ ವಾಪಸ್ಸಾಗಿದ್ದ ಯುವ ಇಂಜನಿಯರ್ ಒಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಕುವೈತ್ ನಿಂದ ವಾಪಸ್ಸಾಗಿದ್ದ ಟಿ ವಿ ಶರತ್ (30) ಎಂಬ ಯುವಕ ಕಣ್ಣೂರಿನಲ್ಲಿರುವ ತನ್ನ ಮನೆಯ ಬಳಿಯ ಔಟ್ ಹೌಸ್ ನಲ್ಲಿ ಕ್ವಾರಂಟೈನ್ ಒಳಗಾಗಿದ್ದರು.
ಶನಿವಾರ ಬೆಳಗ್ಗೆ ಶರತ್ ಸಂಬಂಧಿಕರು ಆತನಿಗೆ ಉಪಹಾರ ನೀಡಲು ಔಟ್ ಹೌಸ್ ಗೆ ತೆರಳಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದರು.
ಮೃತದೇಹದ ಬಳಿ ಎರಡು ಬ್ಲೇಡ್ ಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಮಾನಸಿಕ ಒತ್ತಡದ ಕಾರಣ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ ತಿಂಗಳು ಶರತ್ ವಿದೇಶದಿಂದ ಮರಳಿ ಬಂದಿದ್ದ, ಘಟನೆಯ ಬಗ್ಗೆ ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.