ಶಿಗ್ಗಾವ್

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಗೆ 25 ಸಾವಿರ ರೂ. ಪ್ರೋತ್ಸಾಹಧನ

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಗೆ 25 ಸಾವಿರ ರೂ. ಪ್ರೋತ್ಸಾಹಧನ

ಲೋಕದರ್ಶನ ವರದಿ 

ಶಿಗ್ಗಾವಿ : 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನ ಪಡೆದ ಬನ್ನೂರ ಗ್ರಾಮದ ನಿಖಿತಾ ಕ್ವಾಟಿ ಮತ್ತು ಪವಿತ್ರಾ ದುಂಡಿಗೌಡ್ರ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂ.ಗಳನ್ನು ವಿತರಿಸಿ ಪ್ರೋತ್ಸಾಹಿಸಲಾಗುವುದು ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 

ಸೋಮವಾರ ತಾಲೂಕಿನ ಬನ್ನೂರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿಯಲ್ಲಿ ಬನ್ನೂರ ಗ್ರಾಮದ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ 10 ಸಾವಿರ ಪ್ರೋತ್ಸಾಹಧನ ವಿತರಿಸಿ ಮಾತನಾಡಿದ ಅವರು ಮುಂದಿನ ಉನ್ನತ ಶೈಕ್ಷಣಿಕ ಕಲಿಕೆಗೆ ಪೂರಕ ಸಹಾಯ ಸಹಕಾರ ಬೇಕಾದರೇ ನಾವು ಮತ್ತು ನಮ್ಮ ಸಂಸ್ಥೆಯ ಜೊತೆಗೆ ಗ್ರಾಮದ ಮುಖಂಡರ ಸಹಕಾರ ನೀಡಲಾಗುವುದು, ಶಿಕ್ಷಕರ ಪ್ರಯತ್ನಕ್ಕೆ ತಕ್ಕಂತೆ ಮಕ್ಕಳು ಪರಿಶ್ರಮ ಹಾಕಬೇಕು ಅಂದಾಗ ಉತ್ತಮ ಸಾಧನೆ ಸನಿಹವಾಗುತ್ತದೆ ಎಂದರು. 

ಇಂದು ಮೆರಿಟ್ ಆಧಾರದ ಮೇಲೆಯೇ ಶೈಕ್ಷಣಿಕ ಪ್ರವೇಶಾತಿ ನೀಡಲಾಗುತ್ತಿದೆ ಜೊತೆಗೆ ಶಿಕ್ಷಣ ಸಂಸ್ಥೆಗಳೂ ಸಹಿತ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಪ್ರೋತ್ಸಾಹ ನೀಡುತ್ತಿರುವುದರಿಂದ ಈಗ ಉಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನೆಡೆಗೆ ಕಾರಣವಾಗಿದೆ ಎಂದು ವಿಷಾಧಿಸಿದರು. 

ನಿವೃತ್ತ ಉಪನ್ಯಾಸಕ ಶಂಬನಗೌಡ್ರ ಪೋಲಿಸಗೌಡ್ರ ಮಾತನಾಡಿ ವಿದ್ಯಾರ್ಥಿಗಳ ಸಾಧನೆಯಲ್ಲಿ ವಿದ್ಯಾರ್ಥಿಗಳ ನಡೆ, ಶಿಕ್ಷಕರ ಶ್ರಮ ಮತ್ತು ಪ್ರಯತ್ನ ಅವಶ್ಯವಾಗಿದೆ, ವಿದ್ಯಾರ್ಥಿಗಳಾದವರಿಗೆ ಪ್ರಯತ್ನ ಅವಶ್ಯ, ಆ ಗುರಿ ಸಾಧನೆಗೆ ಪೂರಕ ವಾತಾವರಣ ಸೃಷ್ಟಿಸಿ ಉಶಸ್ವಿಯಾಗಬೇಕು, ಕಲಿಕೆ, ಕಲಿಸುವಿಕೆ ಮತ್ತು ಅರ್ಥೈಸುವಿಕೆ ಇವುಗಳ ಸಮನ್ವಯವನ್ನ ವಿದ್ಯಾರ್ಥಿಗಳು ಅರಿಯಬೇಕು ಎಂದರು. 

ಶಿಕ್ಷಕ ಬಿ ಶ್ರೀನಿವಾಸ ಮಾತನಾಡಿ ಕೋವಿಡ್ ನಿಂದ ಮಕ್ಕಳ ಸಾಮರ್ಥ್ಯ ಕುಂಠಿತಗೊಂಡಿತ್ತು ಆದರೆ ಈ ಅವಧಿಯಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಕಾರಣವಾಯಿತು, ನಮ್ಮ ಗ್ರಾಮದ ಮಕ್ಕಳು ಸಾಧನೆ ಮಾಡಿದ್ದಾರೆ ಎಂಬ ಹೆಮ್ಮೆ ನಮಗಿದ್ದು ಉಳಿದ ಮಕ್ಕಳ ಪ್ರೇರಣೆಗಾಗಿ ಈ ಗೌರವ ನೀಡಲಾಗುತ್ತಿದೆ ಎಂದರು. 

ನೌಕರರ ಸಂಘದ ಅದ್ಯಕ್ಷ ಅರುಣ್ ಹುಡೇದಗೌಡ್ರ, ಉದ್ಯಮಿ ಶಿವಕುಮಾರ, ಯುವ ಮುಖಂಡ ನವೀನ ಸಾಸನೂರ, ವೀರಭದ್ರ​‍್ಪ ಅಗಡಿ ಮಾತನಾಡಿದರು. 

ಎಸ್‌.ಎಸ್‌.ಎಲ್‌.ಸಿ ಯಲ್ಲಿ ಸಾಧನೆಗೈದ ಬನ್ನೂರ ಗ್ರಾಮದ ನಿಖಿತಾ ಕ್ವಾಟಿ ಹಾಗೂ ಪವಿತ್ರಾ ದುಂಡಿಗೌಡ್ರ ವಿದ್ಯಾರ್ಥಿಗಳನ್ನ ಭಾರತ ಸೇವಾ ಸಂಸ್ಥೆಯಿಂದ ಸನ್ಮಾನಿಸಲಾಯಿತು, ನಂತರ ಬನ್ನೂರ ಗ್ರಾಮದ ಬಸವ ಸೇವಾ ಸಮೀತಿ ಹಾಗೂ ಗ್ರಾಮದೇವಿ ಸೇವಾ ಸಮೀತಿ ವತಿಯಿಂದ ಬಾರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅವರನ್ನು ಸನ್ಮಾನಿಸಲಾಯಿತು. 

ಶಿವಾನಂದಸ್ವಾಮಿ ಹಿರೇಮಠ ಅವರ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ವೀರನಗೌಡ ಹುಡೆದಗೌಡ್ರ, ಖಾದರಿಬಿ ದೊಡ್ಡಮನಿ, ಜಿ ಐ ಅಂಗಡಿ, ಬಿ ಡಿ ಮಾಳಗಿ, ವೀರನಗೌಡ ಹೊನ್ನಾಗೌಡ್ರ, ಮಾದೇವಪ್ಪ ಶಿದ್ದಣ್ಣವರ, ಟಾಕನಗೌಡ್ರ ಪಾಟೀಲ, ದೇವಪ್ಪ ಬಡಿಗೇರ, ಸಿದ್ದನಗೌಡ ಪೋಲಿಸಗೌಡ್ರ, ವೀರಭದ್ರಗೌಡ ಹೊನ್ನಾಗೌಡ್ರ, ಶಂಕರಗೌಡ್ರ ಪೋಲೀಸಗೌಡ್ರ, ಮುನಿರಹ್ಮದ ಸೇತಸನದಿ, ಎನ್ ಡಿ ಸಿದ್ದಣ್ಣವರ, ಚಾಮರಾಜ ಹೊನ್ನಾಗೌಡ್ರ, ಎಚ್‌.ವಿ. ಪೋಲಿಸಗೌಡ್ರ, ಬಸವರಾಜ ಲಂಗೋಟಿ, ಬ್ರಹ್ಮಾನಂದ ಬಡಿಗೇರ, ಪಿ.ಡಿ.ಓ ಬಸವರಾಜ ಪೂಜಾರ, ಫಕೃಸಾಬ  ಹಕ್ಕಿ, ಶಿವಕುಮಾರ ಒಡೆಯರ, ಸರೋಜಾ ಕಮ್ಮಾರ, ಸೇರಿದಂತೆ ಎಸ್‌.ಡಿ.ಎಂ.ಸಿ ಸದಸ್ಯರಾದ ಬಸವರಾಜ ಮಾಯಣ್ಣವರ, ಚಂದ್ರಗೌಡ ಪೋಲಿಸಗೌಡ್ರ, ದ್ರೋಣಾಚಾರ್ಯ ಕಮ್ಮಾರ,ವೀರ​‍್ಪ ನೇಕಾರ, ಧರ್ಮಗೌಡರ ಪೋಲಿಸಪಾಟೀಲ, ನೇತ್ರಾ ಅಡ್ಡಂಗಡಿ, ಪೂಜಾ ರಾಮಾಪೂರ, ಮುತ್ತಪ್ಪ ಭಜಂತ್ರಿ, ವಿನೋಧ ಹೊನ್ನಪ್ಪನವರ ಹಾಗೂ ಗ್ರಾಮಸ್ಥರು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ