ಬೆಳಗಾವಿ

ಮಹರ್ಷಿ ವಾಲ್ಮೀಕಿ ನೀಡಿದ ಕೊಡುಗೆಯನ್ನು ಸ್ಮರಿಸುವ ವಿಶೇಷ ದಿನ : ರಮೇಶ ಅಳಗುಂಡಿ

ಮಹರ್ಷಿ ವಾಲ್ಮೀಕಿ ನೀಡಿದ ಕೊಡುಗೆಯನ್ನು ಸ್ಮರಿಸುವ ವಿಶೇಷ ದಿನ : ರಮೇಶ ಅಳಗುಂಡಿ

ಲೋಕದರ್ಶನ ವರದಿ 

           

ಬೆಟಗೇರಿ 26: ಮಹರ್ಷಿ ವಾಲ್ಮೀಕಿಯವರನ್ನು ಆದಿಕವಿಯೆಂದೂ ಕರೆಯಲಾಗುತ್ತದೆ. ಮಹರ್ಷಿ ವಾಲ್ಮೀಕಿ ಅವರು ಪವಿತ್ರ ಮಹಾ ಕಾವ್ಯವಾದ ರಾಮಾಯಣವನ್ನು ರಚಿಸಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು. 

  ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅ.26ರಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಬಾಲ್ಯದ ಹೆಸರು ರತ್ನಾಕರ ಎಂದಾಗಿತ್ತು, ನಾರದರ ಉಪದೇಶದಿಂದ ಇವರ ಜೀವನದಲ್ಲಿ ಬದಲಾವಣೆಯಾಗಿ ಮಹರ್ಷಿಗಳಾದರು. ಮಹರ್ಷಿ ವಾಲ್ಮೀಕಿ ನೀಡಿದ ಕೊಡುಗೆಯನ್ನು ಸ್ಮರಿಸುವ ವಿಶೇಷ ದಿನವಾಗಿದೆ ಎಂದರು. 

    ಶಾಲೆಯ ಎಸ್‌.ಡಿಎಮ್‌.ಸಿ ಅಧ್ಯಕ್ಷ ರಮೇಶ ನೀಲಣ್ಣವರ ಅವರಿಂದ ಮಹರ್ಷಿ ವಾಲ್ಮೀಕಿ  ಭಾವ ಚಿತ್ರಕ್ಕೆ ಪೂಜೆ, ಪುಷ​‍್ಾರೆ್ಪನ ಸಮರೆ​‍್ನ ಕಾರ್ಯಕ್ರಮ ನಡೆದ ಬಳಿಕ ಸಿಹಿ ವಿತರಿಸಲಾಯಿತು. ಶಿಕ್ಷಕ ಸದಾನಂದ ತೆರಣಿ ಅವರು, ಮಹರ್ಷಿ ವಾಲ್ಮೀಕಿ ಬದುಕು ಮತ್ತು ಬರಹ ಕುರಿತು ಮಾತನಾಡಿದರು.  

    ಈರಣ್ಣ ಪಟಗುಂದಿ, ರಾಕೇಶ ನಡೋಣಿ, ಗಣಪತಿ ಭಾಗೋಜಿ, ಮಲ್ಹಾರಿ ಪೋಳ, ಸಿರಾಜಅಹ್ಮದ ಜಿಡ್ಡಿಮನಿ, ನಾಗರಾಜ ಅರಳಿಮಟ್ಟಿ, ಮಂಜುನಾಥ ಸವತಿಕಾಯಿ, ದೀಪಾ ದಾಸಂಗಳಿ, ಸ್ವಾತಿ ಬಡಿಗೇರ ಸೇರಿದಂತೆ ಶಾಲೆಯ ಶಿಕ್ಷಕರು, ಅತಿಥಿಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಇದ್ದರು. 


ಸುದ್ದಿ ಓದಿ