ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ರೈತ ಸಾವಿಗೆ ಶರಣು ರೈತ ಪರಿಹಾರಕ್ಕೆ ಮುಂದಾಗದ ರಾಜ್ಯಸರ್ಕಾರ : ಪಾಟೀಲ್
ರಾಣೆಬೆನ್ನೂರು ನ 11 ರೈತರು ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕ ವಾಗಿ ಸಂಕಷ್ಟವನ್ನು ಎದುರಿಸುತ್ತಾ, ಸಾಲದ ಬಾಧೆಗೆ ಸಿಲುಕಿ, ನಿತ್ಯವೂ ಆತ್ಮಹತ್ಯೆ ಶರಣಾಗುತ್ತಿದ್ದಾನೆ. ಸರ್ಕಾರ ರೈತರ ಆತ್ಮಹತ್ಯೆಯನ್ನು ತಡೆಯುವುದು ಹೇಗೆ ಎನ್ನುವ ಚಿಂತನೆ ಬಿಟ್ಟು. ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ತೊಡಗಿಕೊಂಡು ರೈತರ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ರೈತ ಸಮುದಾಯ ಆತ್ಮಹತ್ಯೆ ಶರಣಾಗಿದ್ದಾರೆ. ಮುಖ್ಯ ಮಂತ್ರಿಗಳು ಅವರು ಜಿಲ್ಲೆಯಲ್ಲಿ ಜನ ಸಂಕಲ್ಪ ಯಾತ್ರೆಯಲ್ಲಿ ತೊಡಗಿರುವುದು ಸರಕಾರಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಲೋಕಾಪುರ ಗ್ರಾಮದ ಸತ್ಯಪ್ಪ ತಾವರೆಪ್ಪ ರಾಥೋಡ್ (45) ಯುವ ರೈತ ಸರಕಾರದ ವಿರೋಧಿ ನೀತಿ ಮತ್ತು ಸಾಲದ ಸುಳಿಗೆ ಸಿಲುಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಶವವನ್ನು ನಗರದ ಬಸ್ ಸ್ಟ್ಯಾಂಡ್ ಬಳಿ ಇಟ್ಟು ಸರಕಾರದ ಧೋರಣೆಯನ್ನು ಖಂಡಿಸಿ, ಮುಖ್ಯಮಂತ್ರಿಗಳ ರೈತ ವಿರೋಧಿ ನೀತಿಯನ್ನು ಖಂಡಿಸಿದರು. ಬೆಳೆ ವಿಮೆ ಪರಿಹಾರ, ಮಳೆಗೆ ಸಿಲುಕಿ ನೆಲ ಕಚ್ಚಿದ ಮನೆಗಳಿಗೆ ಸರಕಾರ ಘೋಷಿಸಿದ ಪರಿಹಾರ ಇಲ್ಲಿಯವರೆಗೂ ಸಿಕ್ಕಿಲ್ಲ. ಹಾವೇರಿ ಜಿಲ್ಲೆಯಲ್ಲಿ ಇನ್ಸೂರೆನ್ಸ್ ಕಂಪನಿಯಿಂದ ರೈತರು ವಂಚನೆಗೊಳ್ಳಲಾಗುತ್ತಿದ್ದಾರೆ. ಆದರೆ ಸಕರ್ಾರ ಸರಿಪಡಿಸಲು ಮುಂದಾಗುತ್ತಿಲ್ಲ. ರೈತ ವಿರೋಧಿ ಧೋರಣೆಯಾಗಿದೆ ಎಂದು ಪಾಟೀಲ್ ಬಲವಾಗಿ ಆರೋಪಿಸಿದರು.
ಸಕರ್ಾರದ ಪ್ರಭಾವಿ ಸಚಿವರು, ಹಿರಿಯ ಅಧಿಕಾರಿಗಳು ಕೋಟಿಗಳ ಲೆಕ್ಕದಲ್ಲಿ ಭ್ರಷ್ಟಾಚಾರ ಹೆಸಗಿದ್ದಾರೆ, ಕೂಡಲೇ ತನಿಖೆಗೂಳಪಡಿಸಬೇಕು ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ರೈತ ಆತ್ಮಹತ್ಯೆ ಪ್ರಕರಣಗಳು ಪ್ರಥಮ ಸ್ಥಾನದಲ್ಲಿ ಇದ್ದವು, ಆದರೆ ಜಿಲ್ಲೆಯಲ್ಲಿ ಇದೀಗ ಆತ್ಮಹತ್ಯೆ ಪ್ರಕರಣಗಳು ನಾಗಲೋಟದಲ್ಲಿ ಸಾಗುತ್ತಿವೇ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರು ಯಾರು?. ಎಂದು ಕಿಡಿ ಕಾರಿದ ಪಾಟೀಲ್, ಮೃತ ರೈತ ಸಕ್ರಪ್ಪ ನಾಲ್ಕು ಹೆಣ್ಣು ಮಕ್ಕಳು ಪತ್ನಿ ಇದೀಗ ಅನಾಥರಾಗಿದ್ದಾರೆ ಅವರ ರಕ್ಷಣೆ ಯಾರು ಹೊರಬೇಕು ಸಕರ್ಾರ ಕೂಡಲು ಪರಿಹಾರ ಘೋಷಿಸಬೇಕು. ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಪ್ಪ ಬೇಡರ್, ಎಸ್ಡಿ ಹಿರೇಮಠ, ಬಸವರಾಜ ಕೊಂಗಿ, ಇಕ್ಬಾಲ್ ಸಾಬ್ ರಾಣೆಬೆನ್ನೂರು, ಹಾಲಪ್ಪ ರಾಥೋಡ್, ಲಕ್ಷ್ಮಪ್ಪ ಚವಾಣ, ಶಂಕ್ರಪ್ಪ ಲಮಾಣಿ, ರುದ್ರಪ್ಪ ರಾಥೋಡ್, ರಾಜು ಲಮಾಣಿ, ರವಿ ಚವಾಣ, ಮೃತ ರೈತನ ಪತ್ನಿ ಶಾರದಮ್ಮ ರಾಥೋಡ್, ಸೋಮವ್ವ ಲಮಾಣಿ, ಈರಪ್ಪ ಲಮಾಣಿ ಸೇರಿದಂತೆ ರೈತ ಸಂಘಟನೆಯ ಅನೇಕ ಮುಖಂಡರು ಪಾಲ್ಗೊಂಡಿದ್ದರ