ಸಂತ ಕನಕದಾಸರ ಸಾಮಾಜಿಕ ಕಳಕಳಿ ಇಂದಿಗೂ ಪ್ರಸ್ತುತವಾಗಿದೆ: ರತ್ನಾಕರ
ರಾಣಿಬೆನ್ನೂರ 23: ಕನಕದಾಸರ ಬದುಕು ಮತ್ತು ಸಾಧನೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾಗಿದೆ, ಸರ್ವ ಸಮೂದಾಯದ ಸಂತ ಕನಕದಾಸರ ಸಮಾಜಿಕ ಕಳಕಳಿ ಇಂದಿಗೂ ಪ್ರಸ್ತುತವಾಗಿದೆ. ಇವರು ದೇಶ ಕಂಡ ಹರಿಭಕ್ತರಲ್ಲಿ ಒಬ್ಬರಾಗಿದ್ದು ಇವರು ತತ್ವಾದರ್ಶ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರು ಅನುಸರಿಸಿಕೊಳ್ಳಬೇಕು ಎಂದು ಗಂಗಾ ಸಹಕಾರಿ ಸಂಘದ ಅಧ್ಯಕ್ಷ ರತ್ನಾಕರ ಕುಂದಾಪುರ ಹೇಳಿದರು.
ಸೋಮವಾರ ನಗರದ ಗಂಗಾ ಸಹಕಾರಿ ಸಂಘದ ಸಭಾಭವನದಲ್ಲಿ ಏರ್ಪಡಿಸಿದ್ದ ಕನಕದಾಸರ 534ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಸಮಾನತೆ ವಿರುದ್ಧ ಆಂದೋಲನ ನಡೆಸಿದ ಅವರು ತಮ್ಮ ಕೀರ್ತನೆಗಳ ಮೂಲಕ ಹೋರಾಡಿ ಶೋಷಿತ ಸಮಾಜವನ್ನು ಜಾಗೃತಿ ಗೊಳಿಸುವ ಕೆಲಸ ಮಾಡಿದವರು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಪಿಹೆಚ್ಡಿ ಪದವಿಗೆ ಭಾಜನರಾದ ಕನ್ನಡ ಉಪನ್ಯಾಸಕ ಡಾ. ಕಾಂತೇಶ ಅಂಬಿಗೇರ ಅವರನ್ನು ಗಂಗಾ ಸಹಕಾರಿ ಸಂಘದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ನಿರ್ದೇಶಕರಾದ ಕೃಷ್ಣಮೂರ್ತಿ ಸುಣಗಾರ, ಹನುಮಂತಪ್ಪ ಕುರವತ್ತಿ, ಲಕ್ಷ್ಮಣ ದಾಸರ, ಗಣೇಶ ಜಡಮಲಿ, ವೀರಣ್ಣ ಬಾರ್ಕಿ, ರಾಜೇಂದ್ರ ಅಂಬಿಗೇರ, ಶಿವಲಿಂಗಪ್ಪ ಮೇದಾರ, ಜಲಜಾಕ್ಷಿ ಕುರ್ಗಿ, ಕೆ.ಶಿವಲಿಂಗಪ್ಪ, ರೇಣುಕಾ ಅಬ್ಬಿಗೇರಿ, ರಾಮಪ್ಪ ಲಮಾಣಿ, ರಾಜು ಅಡಿವೆಪ್ಪನವರ, ಕುಮಾರ ಸಾಲಗೇರಿ, ವ್ಯವಸ್ಥಾಪಕಿ ಅನ್ನಪೂರ್ಣ ಬಾರ್ಕಿ, ಆಂಜನೇಯ ಬಾಳಿಕಾಯಿ ಇದ್ದರು.