ರಾಣೆಬೆನ್ನೂರ

ಪವಾಡ ಪುರುಷ ಅಜ್ಜಯ್ಯನ ಕ್ಷೇತ್ರ ಉಕ್ಕಡ ಗಾತ್ರಿಯಲ್ಲಿ ಪ್ರತಿಬಿಂಬಿಸಿದ ಭಜನಾ ಮೇಳಗಳು

ಪವಾಡ ಪುರುಷ ಅಜ್ಜಯ್ಯನ ಕ್ಷೇತ್ರ ಉಕ್ಕಡ ಗಾತ್ರಿಯಲ್ಲಿ ಪ್ರತಿಬಿಂಬಿಸಿದ ಭಜನಾ ಮೇಳಗಳು

ರಾಣೇಬೆನ್ನೂರು 13:  ಸಮೀಪದ ಪವಾಡ ಪುರುಷ ಉಕ್ಕಡಗಾತ್ರಿ ಸುಕ್ಷೇತ್ರ ಶ್ರೀ ಗುರುಕರಿಬಸವೇಶ್ವರ ಸ್ವಾಮಿಯ ಗದ್ದಿಗೆಯ ವಾರ್ಷಿಕ ಸಂಪ್ರದಾಯದ ಬೆಳ್ಳಿ ರಥೋತ್ಸವ ಮತ್ತು ವಾರ್ಷಿಕ ಮಹಾಕಾರ್ತಿಕೋತ್ಸವವು ಇತ್ತೀಚೆಗೆ ನಡೆಯಿತು. ಭಜನೆಪ್ರಿಯಾ ಶ್ರೀ ಕರಿಬಸವೇಶ್ವರ ಸ್ವಾಮಿಯ ಸಭಾಂಗಣದಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆ ಅತ್ಯಂತ ಜಾನಪದ ಕಲೆಗಳ ಪುನರುತ್ತಾನದ ಪ್ರತಿಬಿಂಬವಾಗಿ ಕ್ಷೇತ್ರದಲ್ಲಿ ಭಜನೆ ಸ್ಪರ್ಧಾ ರೂಪದಲ್ಲಿ ನಡೆದು ಸೇರಿದ ಸಾವಿರಾರು ಭಕ್ತರ ಮನ ಸೆಳೆಯುವಲ್ಲಿ ಯಶಸ್ವಿ ಕಂಡವು.ಪೂರ್ತಿ 12 ತಾಸುಗಳ ಕಾಲ ನಡೆದ ಸ್ಪರ್ಧೆಯಲ್ಲಿ ನಾಡಿನ 46ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಅಂತಿಮವಾಗಿ ಬೆಳಗಾವಿ ಜಿಲ್ಲೆಜಿ.ಎನ್‌. ಹೊಸೂರು ಗ್ರಾಮದ ಶ್ರೀ ಶಬರಿದೇವಿ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದರೆ, ಗದಗ ಜಿಲ್ಲೆಯ ಕೋಟು ಮುಚಗಿ ಗ್ರಾಮದ ಮರುಳಸಿದ್ದೇಶ್ವರ ಭಜನಾ ಸಂಘ ದ್ವಿತೀಯ ಹಾಗೂ ಕೊಪ್ಪಳ ಜಿಲ್ಲೆಯ ತೊಂಡಿಹಾಳದ ದುರ್ಗಾದೇವಿ ಭಜನಾ ಸಂಘವು ತೃತೀಯ ಸ್ಥಾನ ಗಳಿಸಿತು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಟ್ರಸ್ಟಿನ ಕಾರ್ಯದರ್ಶಿ ಎಸ್‌. ಸುರೇಶ್‌ಗೌಡ್ರ ಅವರು ಆಕರ್ಷಕ ಪಾರಿತೋಷಕ ಮತ್ತು ನಗದು ಮೊತ್ತವನ್ನು ನೀಡಿ 

ಗೌರವಿಸಿದರು. ನಿರ್ಣಾಯಕರಾಗಿದ್ದ ಜಾನಪದ ಕಲಾವಿದರಾದ ಕೆ.ಸಿ. ನಾಗರಜ್ಜಿ, ಗುಡ್ಡರಾಜ್ ಹಲಗೇರಿ, ಮತ್ತು ಕೆ.ಎಸ್‌. ನಾಗರಾಜ್‌ಅವರು ಭಜನೆ ಕಲೆ ಮತ್ತು ಕಲಾವಿದರು ಈ ನಾಡಿನ, ದೇಶದ  ಸಂಸ್ಕ್ರತಿಯ ಹರಿಕಾರರಾಗಿದ್ದಾರೆ. ಭಜನೆ ಸಹಜ ಸಂಪ್ರದಾಯವಾಗಿದ್ದರೂ ಸ್ಪರ್ಧೆಎನ್ನುವ ವಾಕ್ಯ ಬಂದಾಗ ನಿಯಾಮವಳಿಗಳನ್ನು ಅನ್ವಯಿಸಿಕೊಂಡು ಸಾಗಿದಾಗ ಮಾತ್ರಅರ್ಹತೆ ಹೊಂದಲು ಸಾಧ್ಯ. ಭಜನೆಯ ಕನಿಷ್ಠ 3 ಸೂತ್ರಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು. ಇಲ್ಲದೆ ಹೋದರೆ ಆರಂಭದಲ್ಲಿಯೇ ಆದ್ವಾನಕ್ಕೆ ಹಾದಿಮಾಡಿ ಕೊಟ್ಟಂತಾಗುತ್ತದೆ. ಭಜನೆ ಅದೊಂದು ಸಾಧನೆ ಸಾಧನೆಗೆಅಂತ್ಯವಿಲ್ಲ. ಭವಿಷ್ಯದ ದಿನಗಳಲ್ಲಿ ಸ್ಪರ್ಧಾ ನಿಯಮಗಳನ್ನು ಅನುಸರಿಸಿ ಪಾಲ್ಗೊಳ್ಳಬೇಕು. ಯಶಸ್ಸು ಕಟ್ಟಿಟ್ಟ ಬುತ್ತಿಯಾಗುತ್ತದೆ ಎಂದರು. ವೇದಿಕೆಯಲ್ಲಿ ಪ್ರಕಾಶ್‌ಕೋಟೆರ, ಬಸವನಗೌಡ ಹೊಸಪಾಳ್ಯ, ಗದಿಗೆಪ್ಪ ಹೊಸಳ್ಳಿ, ಬಸವನಗೌಡ ಬೇನಳ್ಳಿ, ಹೇಮಪ್ಪ ಶಿವಣ್ಣನವರ, ಗದಿಗೆಪ್ಪ ಮರಾಠಿ, ಜಿ.ಎಸ್‌. ಅಜಯಗೌಡ, ಮಹಾದೇವಪ್ಪ ಶಂಕ್ರ​‍್ಪ ಕಮದೋಡ್, ಭರಮಗೌಡ ಶಿವಪೂಜಿ, ಸಂಜೀವರೆಡ್ಡಿ, ಹೆಚ್‌. ವೀರನಗೌಡ, ಮಲ್ಲೇಶಪ್ಪ, ಸದಾನಂದ, ರಮೇಶ, ಬಸವರಾಜ ಪ್ಪತುಮಕೂರು, ಸಿದ್ದಲಿಂಗಪ್ಪ ತುಮಕೂರು, ಶಾರದಾ ತಿಮ್ಮಣ್ಣ, ನಿಸಾರ್ ಅಹ್ಮದ್ ತುಮಕೂರು, ಕೆ.ಎನ್ . ಗದಿಗೇಶ್, ಆನಂದ್ ಪಾಟೀಲ, ಮಹಾತಂಯ್ಯ ಮಡ್ಲೂರ್, ಕೆ.ಮಾಲತೇಶ್ ಸೇರಿದಂತೆ ಗ್ರಾಮದ ಗಣ್ಯರು ಕಮೀಟಿಯ ಸದಸ್ಯರು ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ