"ದಾಸವರೇಣ್ಯ ಶ್ರೀವಿಜಯದಾಸರು" ಚಿತ್ರೀಕರಣ ಆರಂಭ
ಬೆಂಗಳೂರು, ನ. 17 ಮಹಾಮಹಿಮರಾದ ಶ್ರೀ ವಿಜಯದಾಸರ ಕುರಿತಾದ "ದಾಸವರೇಣ್ಯ ಶ್ರೀ ವಿಜಯದಾಸರು" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿದ್ದು, ಚಿತ್ರೀಕರಣ ಆರಂಭವಾಗಿದೆ.
ಶಾಸಕರಾದ ಶಿವನಗೌಡ ನಾಯಕ್ ಹಾಗೂ ಪಂಡಿತ ಸತ್ಯಧ್ಯಾನಾಚಾರ್ಯ ಕಟ್ಟಿಯವರು ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು.
ಈ ಹಿಂದೆ ಜಗನ್ನಾಥದಾಸರು ಚಿತ್ರ ನಿರ್ದೇಶಿಸಿದ್ದ ಮಧುಸೂದನ್ ಹವಾಲ್ದಾರ್ "ದಾಸವರೇಣ್ಯ ಶ್ರೀ ವಿಜಯದಾಸರು" ಚಿತ್ರದ ಸಾರಥ್ಯವನ್ನೂ ವಹಿಸಿದ್ದಾರೆ.
ಕನಕದುರ್ಗ, ಆನೆಗುಂದಿ ಹಾಗೂ ನವಬೃಂದಾವನದ ಸುತ್ತಮುತ್ತ ನಡೆಯಲಿದೆ. ನನ್ನ ಹಿಂದಿನ ಸಿನಿಮಾದಲ್ಲಿದ್ದ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲೂ ಇರುತ್ತಾರೆ. ಸುಮಾರು 250 ವರ್ಷಗಳ ಹಿಂದಿನ ಜೀವನವನ್ನು ತೋರಿಸುವಾಗ ತುಂಬಾ ಜಾಗರಾಕರಾಗಿರಬೇಕು. ಆ ನಿಟ್ಟಿನಲ್ಲಿ ನಮ್ಮ ತಂಡದ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಚಿತ್ರ ಉತ್ತಮವಾಗಿ ಬರುವಲ್ಲಿ ಶ್ರಮಿಸುವುದಾಗಿ ಮಧುಸೂದನ್ ಹವಾಲ್ದಾರ್ ತಿಳಿಸಿದ್ದಾರೆ.
ಮೂಲತಃ ರಾಯಚೂರಿನವರಾದ ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಷಿ ವಿಜಯದಾಸರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಂದಿನ ಯುವಪೀಳಿಗೆಗೆ ದಾಸರ ಜೀವನದ ಕುರಿತು ತಿಳಿಸುವುದಕ್ಕೆ ಇದು ಉತ್ತಮ ಮಾಧ್ಯಮ. ನನ್ನ ತಾಯಿ,ತಂದೆಯವರಾದ ಸರಸ್ವತಿ ಹಾಗೂ ಪ್ರಹ್ಲಾದಾಚಾರ್ಯ ಜೋಷಿ ಅವರ ಹೆಸರಿನಲ್ಲಿ ಎಸ್ ಪಿ ಜೆ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ ಎಂದು ತ್ರಿವಿಕ್ರಮ ಜೋಷಿ ಮಾಹಿತಿ ನೀಡಿದ್ದಾರೆ.
ಮಧುಸೂದನ್ ಹವಾಲ್ದಾರ್ ಅವರ ಪರಿಕಲ್ಪನೆ ನಿರ್ದೇಶನವಿರುವ ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಚಿತ್ರಕಥೆ, ಬರೆದಿದ್ದಾರೆ. ವಿಜಯಕೃಷ್ಣ ಸಂಗೀತ ನಿರ್ದೇಶನ ಹಾಗೂ ನಾರಾಯಣ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ವಿಜಯದಾಸರ ಪಾತ್ರದಲ್ಲಿ ತ್ರಿವಿಕ್ರಮ ಜೋಷಿ ಅಭಿನಯಿಸುತ್ತಿದ್ದಾರೆ. ಶರತ್ ಜೋಷಿ, ಪ್ರಭಂಜನ ದೇಶಪಾಂಡೆ, ವಿಷ್ಣು ತೀರ್ಥ ಜೋಷಿ, ಪದ್ಮಕಲಾ ಮುಂತಾದವರು ತಾರಾಬಳಗದಲ್ಲಿದ್ದಾರೆ.