ಶಿಕ್ಷಕ ಬಳಿಗಾರ ಸೇವೆ ಅವಿಸ್ಮರಣೀಯ: ರಾಮು
ಬೈಲಹೊಂಗಲ06: 35 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸುವ ಮೂಲಕ ಶತಮಾನ ಪೂರೈಸಿದ ಪ್ರೌಢಶಾಲೆಯ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ಶಿಕ್ಷಕ ಎಸ್.ಎಸ್.ಬಳಿಗಾರ ಅವರ ಸೇವೆ ಅವಿಸ್ಮರಣೀಯವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ ಹೇಳಿದರು.
ಪಟ್ಟಣದ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ನಿವೃತ್ತಿ ಹೊಂದಿದ ಎಸ್.ಎಸ್.ಬಳಿಗಾರ ಅವರ ಬೀಳ್ಕೊಡುವ ಸಮಾರಂಭದ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು.
ಶಾಲೆಯ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಸಂಘಟನೆಯ ಮೂಲಕ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸಿದ ಹೆಮ್ಮೆ ಬಳಿಗಾರ ಅವರದ್ದಾಗಿದೆ ಎಂದರು.
ಮುಖ್ಯಾಧ್ಯಾಪಕ ಎಂ.ವಿ.ನಾಗನೂರ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಶಿಕ್ಷಕ ಎಸ್.ಎಸ್.ಬಳಿಗಾರ ಮಾತನಾಡಿ, ಶಿಕ್ಷಕ ವೃತ್ತಿ ಹಾಗೂ ಶಿಕ್ಷಕ ಸಂಘಟನೆಯ ಸೇವೆಯಲ್ಲಿ ಸಂತೃಪ್ತಿ ಕಂಡಿದ್ದೇನೆ. ಸರಕಾರದ ನಿಯಮದಂತೆ ನಿವೃತ್ತಿ ಹೊಂದಿದ್ದು, ಆದರೆ ಶಾಲೆಯ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುತ್ತೇನೆ ಎಂದರು.
ನಿವೃತ್ತ ಶಿಕ್ಷಕ ಕೆ.ಎಂ.ಸಂಗೊಳ್ಳಿ, ಸಹಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಿದ್ದಯ್ಯ ಧಾರವಾಡಮಠ, ಕಿತ್ತೂರು ತಾಲೂಕಾಧ್ಯಕ್ಷ ಡಾ.ಶೇಖರ ಹಲಸಗಿ, ಪಟ್ಟಿಹಾಳ ಪ್ರೌಢಶಾಲೆಯ ಶಿಕ್ಷಕ ಎಸ್.ಎಂ.ಪಾಟೀಲ ಮಾತನಾಡಿದರು. ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಗಾಣಿಗೇರ, ಹಿರೇಬಾಗೇವಾಡಿ ಪ್ರೌಢ ಶಾಲೆ ಮುಖ್ಯಾಧ್ಯಾಪಕ ಎಸ್.ಆರ್.ದಂಡಿನ, ನಿವೃತ್ತ ದೈಹಿಕ ಶಿಕ್ಷಕ ಎಂ.ವೈ.ಆನಿಕಿವಿ, ಎಂ.ಎ.ಎ.ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮಹಾಂತೇಶ ಮತ್ತಿಕೊಪ್ಪ, ನಿವೃತ್ತ ಶಿಕ್ಷಕ ಆರ್.ಯು.ಹೊಂಗಲಮಠ, ಜಿಲ್ಲಾ ಉಪಾಧ್ಯಕ್ಷ ಅಶೋಕ ಅಣ್ಣಿಗೇರಿ, ನಿವೃತ್ತ ಶಿಕ್ಷಕ ದುಂಡಪ್ಪ ತುಬಾಕಿ, ಬೆಳಗಾವಿ ಗ್ರಾಮೀಣ ಘಟಕದ ಅಧ್ಯಕ್ಷ ಎನ್.ಎಸ್.ತಲ್ಲೂರ, ಜಿಲ್ಲಾ ಖಜಾಂಚಿ ಎಂ.ಬಿ.ಹುಲಮನಿ, ಶ್ರೀಧರ ಪಾಟೀಲ, ಎ.ಕೆ.ಆಗನೂರ, ಎಸ್.ವೈ.ಜೈನರ, ಶಿಕ್ಷಕ ಬಿ.ಟಿ.ಗುರಕನವರ, ಸುಲೋಚನಾ ಹೊಸಮನಿ ಉಪಸ್ಥಿತರಿದ್ದರು. ಇದೇ ವೇಳೆ ರಾಜ್ಯ ಸಹಶಿಕ್ಷಕರ ಸಂಘ, ಎಂಸ್ಸೆಸ್ಸೆಆರ್ ಶಿಕ್ಷಕರ ಬಳಗ ಹಾಗೂ ವಿದ್ಯಾರ್ಥಿಗಳಿಂದ ಮತ್ತು ಕಿತ್ತೂರ ಕಸಾಪ ಘಟಕದಿಂದ ಬಳಿಗಾರ ಅವರನ್ನು ಸತ್ಕರಿಸಲಾಯಿತು. ಶಿಕ್ಷಕ ಎಂ.ಸಿ.ಹಂಗರಕಿ ಮಾತನಾಡಿದರು. ಶಿಕ್ಷಕ ಬಾಳೇಶ ಬೋರಗಲ್ ನಿರೂಪಿಸಿದರು. ಪಿ.ಟಿ.ಹಸರಂಗಿ ವಂದಿಸಿದರು.