ಸಿಂಧಗಿ

ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಗಳ ಫಲಿತಾಂಶ ನೂರಕ್ಕೆ ನೂರು

ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಗಳ ಫಲಿತಾಂಶ ನೂರಕ್ಕೆ ನೂರು

ಸಿಂದಗಿ 11: 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1 ಫಲಿತಾಂಶ ಗುರುವಾರ ಪ್ರಕಟವಾಗಿದ್ದು ಪಟ್ಟಣದ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಎಚ್‌.ಟಿ.ಕೆ.(ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಒಟ್ಟು ಫಲಿತಾಂಶ ಶೇ.100 ರಷ್ಟಾಗಿದೆ. 

ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆ: ವಿದ್ಯಾರ್ಥಿನಿ ಪವಿತ್ರಾ ದೇವರಮನಿ 618 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪರೀಕ್ಷೆ ಬರೆದ 69 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 42 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 27 ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಪವಿತ್ರಾ ದೇವರಮನಿ 618, ರಾಧಿಕಾ ಕಣಮೇಶ್ವರ 606, ಮೇಘಾ ಕುಂಬಾರ 604, ಅಕ್ಷಯ ತಾಳಿಕೋಟಿ 597, ಭೂವನೇಶ್ವರಿ ಗೋನಾಳ 597, ಪ್ರಶಾಂತ ಬಿರಾದಾರ 597, ವೈಶಾಲಿ ಮಳಲಿ 595, ಗೌತಮ ಬಡಿಗೇರ 590, ಪ್ರಜ್ವಲ್ ಬಡಿಗೇರ 586, ಆಕಾಶ ಬಿರದಾರ 583 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ 

ಎಚ್‌.ಟಿ.ಕೆ.(ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆ: ಪರೀಕ್ಷೆ ಬರೆದ 25 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ, 5 ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಗಂಗಮ್ಮ ಬಿರಾದಾರ 581, ಸುಮಯ್ಯ ನಾಟಿಕಾರ 577, ಪವಿತ್ರಾ ಅರಳಗುಂಡಗಿ 575, ಭಾಗ್ಯಶ್ರೀ ಪೋಲಿಸ್‌ಪಾಟೀಲ 574, ಸಮರ್ಥ ಅಲ್ಲಾಪೂರ 574, ಪ್ರೀಯಾ ಹಿಪ್ಪರಗಿ 571, ಆಕಾಶ ಪೂಜಾರಿ 569 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.  

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಪ್ರಕಾಶ ಚೌಧರಿ, ಆಢಳಿತಾಧಿಕಾರಿ ಮಹಾಂತೇಶ ಚೌಧರಿ, ಮುಖ್ಯೋಪಾಧ್ಯಾಯ ವಿಶ್ವನಾಥ ಯಾತ್ನೂರ ಹಾಗೂ ಸಿಬ್ಬಂಧಿವರ್ಗ ಹರ್ಷ ವ್ಯಕ್ತವಾಗಿದ್ದಾರೆ. 


ಸುದ್ದಿ ಓದಿ