ಮರ ಬೆಳೆಸಿ ರಕ್ಷಿಸುವ ಪ್ರತಿಯೊಬ್ಬರ ಹೊಣೆ: ತಹಶೀಲ್ದಾರ ಶಂಕರ
ಐದು ಲಕ್ಷ ಬೀಜದುಂಡೆ ಬಿತ್ತನೆ ಆಂದೋಲನ
ರಾಣೇಬೆನ್ನೂರು 21: ವಿಶ್ವದ ಸಕಲ ಜೀವಿಗಳಿಗೆ ಪರಿಸರವೇ ಜೀವನಧಾರ. ಭೂ ಮಂಡಲದ ಮೇಲಿರುವ ಸಕಲ ಜೀವಿಗಳಿಗೆ ಪರಿಸರವೇ ಜೀವನಾಧಾರ. ಮರ ಬೆಳೆಸುವ ಹಾಗೂ ರಕ್ಷಿಸುವ ಹೊಣೆ ಪ್ರತಿಯೊಬ್ಬ ನಾಗರೀಕರದ್ದು, ಅದನ್ನು ಪ್ರಾಮಾಣಿಕತೆಯಿಂದ ನಿಭಾಯಿಸಬೇಕು ಎಂದು ರಾಣೇಬೆನ್ನೂರಿನ ತಹಶೀಲ್ದಾರ ಶಂಕರ ಜಿ.ಎಸ್. ಕರೆ ನೀಡಿದರು.
ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಎನ್ಎಸ್ಎಸ್ ಕೋಶ, ಕರ್ನಾಟಿಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಕೋಶ, ಸ್ಟುಡೆಂಟ್ಸ್ ಫಾರ್ ಡೆವೆಲಪ್ಮೆಂಟ್ ಇವರ ಸಯಹೋಗದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ್ಘ 2 ಹಾಗೂ ಐಕ್ಯೂಏಸಿ ಕೋಶ ಆಯೋಜಿಸಲಾದ “ಆಕ್ಷೀಜನ್ ಚಾಲೆಂಜ್” ಕಾರ್ಯಕ್ರಮದ ಅಂಗವಾಗಿ ಐದು ಲಕ್ಷ ಬೀಜದುಂಡೆ ಬಿತ್ತನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ಆರೋಗ್ಯಕರವಾದ ವಾತಾವರಣ ಇಂದಿನ ಅತೀ ಅವಶ್ಯಕತೆಗಳಲ್ಲಿ ಒಂದು. ನಮ್ಮ ಮುಂದಿನ ಪೀಳಿಗೆಗಳಿಗೆ ಆಮ್ಲಜನಕ ಸಿಗಬೇಕೆಂದರೆ ಇಂದಿನಿಂದಲೇ ಮರ ಬೆಳೆಸುವ ಹಾಗೂ ರಕ್ಷಿಸುವ ಪಣತೊಡಬೇಕು ಎಂದು ಹೇಳಿದರು. ರಾಣೇಬೆನ್ನೂರು ನಗರಸಭೆ ಪೌರಾಯುಕ್ತ ಡಾ. ಮಹಾಂತೇಶ್ ಎನ್. ಇವರು ಮಾತನಾಡಿ ಪರಿಸರವು ನಿಸರ್ಗದ ಆತ್ಯಮೂಲ್ಯ ಸಂಪತ್ತು, ಮರ ಬೆಳೆಸಿ ಜೀವ ಉಳಿಸಿ ಎಂಬ ಸಂಕಲ್ಪ ಕಾರ್ಯರೂಪಕ್ಕೆ ತಂದಾಗ ಮಾತ್ರ ಪರಿಸರ ವ್ಯವಸ್ಥೆ ಸಮತೋಲನದಿಂದಿರುತ್ತದೆ. ಇದರಿಂದಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಎಲ್.ವಿ.ಸಂಗಳದ ಅವರು, “ನಮಗೆ ಇರುವುದೊಂದೇ ಭೂಮಿ. ಇದನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನಾಶ ಮಾಡುತಿದ್ದಾನೆ. ಪ್ರಕೃತಿಯನ್ನು ತಾಯಿಯ ಸ್ಥಾನ ನೀಡಿರುವುದರಿಂದ ಅದರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆಯಾಗಬೇಕು. ಇನ್ನು ಮುಂದಾದರು ನಮ್ಮ ಈ ಪರಿಸರವನ್ನು ಮಕ್ಕಳಂತೆ ಪೋಷಿಸಿ ರಕ್ಷಿಸಿ ಬೆಳೆಸೋಣ ಎಂದರು.
ಎನ್ಎಸ್ಎಸ್ ಅಧಿಕಾರಿ ಡಾ.ಅರುಣಕುಮಾರ ಚಂದನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಟುಡೆಂಟ್ಸ್ ಫಾರ್ ಡೆವೆಲಪ್ಮೆಂಟ್ ಇವರ ಸಹಕಾರದಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳಿಂದ ಇಡೀ ರಾಜ್ಯದಲ್ಲಿ ಐದು ಲಕ್ಷ ಬೀಜದುಂಡೆಗಳನ್ನು ಬಿತ್ತುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಕಾಲೇಜಿನ ಕ್ಯಾಂಪಸ್ ಹಾಗೂ ನಗರದ ನೂತನ ಲೇಓಟ್ಗಳಲ್ಲಿರುವ ಸಾರ್ವಜನಿಕ ಉದ್ಯಾನವನಗಳಲ್ಲಿ 1100 ಬೀಜದುಂಡೆ ಬಿತ್ತಲಾಯಿತು. ಎನ್ಎಸ್ಎಸ್ ಅಧಿಕಾರಿ ಡಾ.ಸಿದ್ದಲಿಂಗಮ್ಮ ಬಿ.ಜಿ. ವಂದಿಸಿದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಯರಾಜ್, ಡಾ.ಎ.ವಿ.ಕುರ್ಲಿ, ಡಾ.ಎಲ್.ಎಮ್. ಪೂಜಾರ, ಗೀತಾ ಕೋಟೆಣ್ಣನವರ, ಡಾ.ರಾಘವೇಂದ್ರ ಕೆ., ಡಾ. ವೆಂಕಟೇಶ್ ಹೆಚ್., ಸುನೀಲ ಎಂ.ಎಚ್. ಉಪಸ್ಥಿತರಿದ್ದರು. ಕಾಲೇಜಿನ ಎನ್ಎಸ್ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು.