ವಾಸಿಸುವವನೇ ಮನೆ ಒಡೆಯ: ತರಬೇತಿ ಕಾಯರ್ಾಗಾರ

ವಾಸಿಸುವವನೇ ಮನೆ ಒಡೆಯ: ತರಬೇತಿ ಕಾಯರ್ಾಗಾರ


ಬೆಳಗಾವಿ: ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ತಾಂಡಾಗಳ ಜನರು ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕರಾದ ಕೆ.ಎಸ್. ಕಕರ್ಿ ಅವರು ಹೇಳಿದರು. 

ರಾಮದುರ್ಗ ತಾಲೂಕು ಪಂಚಾಯತ ಸಭಾಭವನದಲ್ಲಿ ಜು.11 ರಂದು "ವಾಸಿಸುವವನೇ ಮನೆ ಒಡೆಯ" ತಾಂಡಾ ವಿಕಾಸ ಸಮಿತಿಯ ಸದಸ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ಇಚ್ಛಿಸುವ ಪ.ಜಾತಿ, ಪ.ಪಂಗಡದ ವಿದ್ಯಾಥರ್ಿಗಳಿಗೆ ಸಹಾಯಧನ ನೀಡಲಾಗುತ್ತಿದೆ. ಐ.ಎ.ಎಸ್/ಕೆ.ಎ.ಎಸ್ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಪ.ಜಾತಿ/ಪ.ಪಂಗಡದ ವಿದ್ಯಾಥರ್ಿಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ರೂ.50,000 ಸಹಾಯಧನ ನೀಡಲಾಗುವುದು. ಹಾಗೂ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಆಯೋಜಕರುಗಳಿಗೆ ಪ್ರೋತ್ಸಾಹ ಹಾಗೂ ವಿವಾಹದ ಖಚರ್ು ವೆಚ್ಚಗಳಿಗಾಗಿ ಪ್ರತಿ ಪ.ಜಾತಿ/ಪ.ಪಂಗಡ ಜೋಡಿಗೆ ರೂ.2000/-ಗಳನ್ನು ನೀಡಲಾಗುವುದು ಎಂದು ತಿಳಿಸಿದರು. 

ತಾಂಡಾ ನಿಗಮದ ಮುಖ್ಯ ಸಂಪನ್ಮೂಲ ವ್ಯಕ್ತಿ ಗಂಗಾಧರ ಲಮಾಣಿ ಮಾತನಾಡಿ, ರಾಮದುರ್ಗ ತಾಲೂಕಿನಲ್ಲಿ ಒಟ್ಟು 18 ತಾಂಡಾಗಳಿದ್ದು, ಹಲವು ದಶಕಗಳಿಂದ ಸಮಾಜ ಬಾಂಧವರು ಅಲ್ಲಿಯೇ ವಾಸವಾಗಿದ್ದಾರೆ. ಆದರೆ ಅವರೆಲ್ಲರಿಗೂ ಇದುವರೆಗೆ ಹಕ್ಕು ಪತ್ರಗಳು  ದೊರಕಿರುವುದಿಲ್ಲ ಎಂದು ಹೇಳಿದರು.

ತಾಂಡಾದ ಕೆಲವರು ಸರಕಾರಿ ಜಮೀನಿನಲ್ಲಿ ವಾಸವಾಗಿದ್ದರೆ, ಇನ್ನೂ ಕೆಲವರು ಖಾಸಗಿ ಜಮೀನಿನಲ್ಲಿ ವಾಸವಾಗಿರುತ್ತಾರೆ. ಹೀಗಾಗಿ ಹಕ್ಕು ಪತ್ರ ಪಡೆಯಲು ನಾಯಕ್, ಕಾರಭಾರಿ, ಡಾವ್, ಸಂಚಾಲಕ ಹಾಗೂ ಸಹ ಸಂಚಾಲಕರು ತಾಂಡಾದಲ್ಲಿನ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಯಾವುದೇ ತಪ್ಪಿಲ್ಲದಂತೆ ಅಜರ್ಿ ನಮೂನೆ ಭತರ್ಿ ಮಾಡಬೇಕು ಎಂದರು.

"ವಾಸಿವವನೇ ಮನೆ ಒಡೆಯ" ಯೋಜನೆಯ ಹಕ್ಕು ಪತ್ರವನ್ನು ಪಡೆಯಲು ಸಕರ್ಾರಿ ಜಮೀನಿನಲ್ಲಿ ವಾಸಮಾಡುತ್ತಿರುವವರು ಅಜರ್ಿ ನಮೂನೆ 3ಸಿ ಯನ್ನು ಅಧಿಕೃತ ದಾಖಲೆಗಳೊಂದಿಗೆ ಭತರ್ಿ ಮಾಡಿ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಖಾಸಗಿ ಜಮೀನಿನಲ್ಲಿ ವಾಸ ಮಾಡುತ್ತಿರುವವರು ಅಜರ್ಿ ನಮೂನೆ 2ಎಫ್ ಅನ್ನು ಅಧಿಕೃತ ದಾಖಲೆಗಳೊಂದಿಗೆ ಭತರ್ಿ ಮಾಡಿ ಉಪವಿಭಾಗಾಧಿಕಾರಿಗಳು ಇವರಿಗೆ ಸಾಮೂಹಿಕವಾಗಿ ಭತರ್ಿ ಮಾಡಿದ ಅಜರ್ಿಗಳನ್ನು ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ಕಾಯರ್ಾಗಾರದಲ್ಲಿ ಕನರ್ಾಟಕ ತಾಂಡಾ ಅಭಿವೃದ್ಧಿ ನಿಗಮದ ಕ್ಷೇತ್ರ ಅಭಿವೃದ್ಧಿ ಸಹಾಯಕ ಬಾಲು. ಆರ್. ಚವ್ಹಾಣ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶಂಕರ ರಾಠೋಡ, ತಾಲೂಕು ಪಂಚಾಯತ ಸದಸ್ಯರಾದ ವಾಸು ಲಮಾಣಿ, ಕೃಷ್ಣ ರಾಠೋಡ, ಸಮಾಜದ ಮುಖಂಡರಾದ ಸೋಮು ಪೂಜಾರ, ಕೃಷ್ಣ ಚವ್ಹಾಣ, ಶ್ರೀಮತಿ ಭಾಗ್ಯಶ್ರೀ ಜಾಧವ, ವೆಂಕಟೇಶ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸುದ್ದಿ ಓದಿ