ಸೌಂದತ್ತಿ

ಸಂಭ್ರಮದಿಂದ ಗ್ರಾಮದೇವಿ ಉಡಿತುಂಬುವ ಕಾರ್ಯಕ್ರಮ

ಸಂಭ್ರಮದಿಂದ ಗ್ರಾಮದೇವಿ ಉಡಿತುಂಬುವ ಕಾರ್ಯಕ್ರಮ

ಲೋಕದರ್ಶನ ವರದಿ

ಸವದತ್ತಿ 21: ತಾಲ್ಲೂಕಿನ ಮದ್ಲೂರ ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವಿ ಜಾತ್ರೆಯು ಏ.18 ರಂದು ಆರಂಭವಾಗಿದ್ದು. ಶುಕ್ರವಾರ ಗ್ರಾಮದ ಪ್ರತಿಯೊಂದು ಓಣಿಯ ಗ್ರಾಮಸ್ಥರು ಗ್ರಾಮ ದೇವಿ ದ್ಯಾಮಮ್ಮ ತಾಯಿಗೆ ಉಡಿ ತುಂಬಲು ಸಡಗರ ಸಂಭ್ರಮದಿಂದ ಭಂಡಾರದಲ್ಲಿ ಮಿಂದೆದ್ದು ದೇವಿಯ ಭಾವಚಿತ್ರ ಹಾಗೂ ಝಾಂಜ್ ಮೇಳ, ಕರಡಿ ಮಜಲು, ಬ್ಯಾಂಡ್ ಮೇಳದೊಂದಿಗೆ ತಾಯಂದಿರು ಆರತಿ ಕುಂಭ ಮೇಳದೊಂದಿಗೆ ಶೃಂಗಾರದಿಂದ ಭವ್ಯ ಮೆರವಣಿಗೆಯಲ್ಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಯಿಯ ಜೈಕಾರ ಘೋಷಣೆ ಹಾಕುತ್ತಾ ಭಕ್ತಿಯ ಪರಾಕಾಷ್ಠೆ ಮೆರೆಯುವ ದೃಶ್ಯವೂ ನೋಡುಗರ ಮನಕಲಕುವಂತಿತ್ತು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖ ಗುರು ಹಿರಿಯರು, ಹಾಗೂ ಭಕ್ತಾಧಿಗಳು ಈ  ಮೆರವಣಿಗೆಯಲ್ಲಿ ಭಾಗವಹಿಸಿದ್ದರು 

ಸುದ್ದಿ ಓದಿ