ರಾಜ್ಯದಲ್ಲಿ ಮಸಣ ಕಾರ್ಮಿಕರದ್ದು ಬಿಟ್ಟಿ ಚಾಕರಿಯಾಗಿದೆ: ಬಿ ಮಾಳಮ್ಮ
ಬಳ್ಳಾರಿ 10: ರಾಜ್ಯದಲ್ಲಿ ಮಸಣಕಾರ್ಮಿಕರ ಬಿಟಿ ಚಾಕರಿಯಾಗಿದೆ. ಯಾರಾದರೂ ಮರಣ ಹೊಂದಿದರೆ ಕುಣಿ ತೆಗೆಯಬೇಕೆಂದು ಹೇಳಿ ಕಾರ್ಮಿಕರಿಗೆ ಕುಡಿಯುವುದಕ್ಕೆ ಮತ್ತು ಟಿ ಪಾನಿ ಮಾಡುವುದಕ್ಕೆ ಹಣ 100 ರಿಂದ 200 ರೂ. ನೀಡುತ್ತಾರೆ ನಾವು ಕುಣಿ ತೆಗೆಯುವುದಕ್ಕೆ ಐದರಿಂದ ಆರು ಅಡಿ ಆಳ ತೆಗೆಯುತ್ತೇವೆ ಎಂದು ರಾಜ್ಯ ಸಂಚಾಲಕ ಬಿ ಮಾಳಮ್ಮ ಅವರು ಹೇಳಿದರು.
ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಮಸಣ ಕಾರ್ಮಿಕರ ಬಗ್ಗೆ ಮಾತನಾಡುತ್ತಾ ಕುಣಿ ತೆಗೆಯುವ ಸಂದರ್ಭದಲ್ಲಿ ಅಸೈಸಿ ಹೆಣಗಳು ಬರುತ್ತವೆ ನಮಗೆ ಸುರಕ್ಷತೆ ಸಾಮಾನುಗಳು ಇರುವುದಿಲ್ಲ ಬರೆ ಕೈಲೇ ನಾವು ಹೆಣವನ್ನು ಕಿತ್ತು ಹೋಗೋದು ಹೊಸ ಹೆಣ ಇಡುವುದಕ್ಕೆ ಜಾಗ ಮಾಡಿಕೊಳ್ಳುತ್ತೇವೆ. ಬೆಳಿಗ್ಗೆಯಿಂದ ಕುಣಿ ಮುಚ್ಚುವ ತನಕ ನಮಗೆ ಆಹಾರ ಇರುವುದಿಲ್ಲ ಕುಡಿಯುವುದಕ್ಕೆ ನೀರು ಕೂಡ ಇರುವುದಿಲ್ಲ, ಮತ್ತು ಸಾಮಾನುಗಳು ನಮ್ಮ ಮನೆಯಿಂದ ತೆಗೆದುಕೊಂಡು ಹೋಗುತ್ತೇವೆ ನಾವು 45 ವರ್ಷ ಆದರೆ 60 ವರ್ಷ ಆದವರಂತೆ ಕಾಣುತ್ತೇವೆ. ಏಕೆಂದರೆ ಕುಡಿದರೆ ಮಾತ್ರ ಕೆಲಸ ಮಾಡುವುದಕೆ ಸಾಧ್ಯ ನಮಗೆ ಸರಿಯಾದಂತಹ ಆಹಾರ ಸಿಗುವುದಿಲ್ಲ ಹಾಗೆನೇ ನಾವು ಕೆಲಸ ಮಾಡುತ್ತೇವೆ ಎಂದು ದುಃಖ ವ್ಯಕ್ತಪಡಿಸಿದರು.
ಕುಣಿ ಮುಚ್ಚಿದ ಮೇಲೆ ಕೈ ತೊಳೆಯುವುದಕ್ಕೆ ಸಾಬೂನು ಇಲ್ಲ ನಮ್ಮ ಕುಟುಂಬಗಳು ವಾಸ ಮಾಡುವುದಕ್ಕೆ ಯೋಗ್ಯವಾದ ಮನೆಗಳು ಇರುವುದಿಲ್ಲ ನಮಗೂ ಭೂಮಿ ಇರುವುದಿಲ್ಲ ಯಾರಾದರೂ ಸಾಯುತ್ತಾರೆ ಎಂದು ದಾರಿ ನೋಡುತ್ತೇವೆ! ನಮ್ಮ ಮಕ್ಕಳಿಗೆ ಮದುವೆ ಮಾಡಬೇಕೆಂದರೆ ಬೇರೆಯವರ ಹತ್ತಿರ ಸಾಲ ಮಾಡಿ ಮದುವೆ ಮಾಡುತ್ತೇವೆ. ನಮಗೆ ಸರ್ಕಾರ ಇಲ್ಲಿವರೆಗೂ ಗುರುತಿಸಿಲ್ಲ. ಈಗಲಾದರೂ ಗುರುತಿಸಬೇಕು ಎಂದರು.ಎ ಸ್ವಾಮಿ ಮಾತನಾಡುತ್ತಾ ಎಲ್ಲಾ ಮಸಣ ಕಾರ್ಮಿಕರನ್ನು ಸರ್ವೆ ಮಾಡಬೇಕು. ಗ್ರಾಮ ಪಂಚಾಯತಿಯಲ್ಲಿ ಮಸಣ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು, ಮಸಣ ಕಾರ್ಮಿಕರ ಮಕ್ಕಳ ಮದುವೆಗೆ ಸಹಾಯಧನ, ಕುಣಿ ತೆಗೆಯುವುದಕ್ಕೆ ಮತ್ತು ಮುಚ್ಚುವುದಕ್ಕೆ 3000, ಕೈ ತೊಳೆದುಕೊಳ್ಳುವುದಕ್ಕೆ ಸಾಬೂನು, ವಿಶೇಷ ಆರೋಗ್ಯ ಕಾರ್ಡ್, ಭೂಮಿ ನೀಡಬೇಕು, ಹಾಗೂ ರುದ್ರ ಭೂಮಿಯಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಬೇಕು, ರುದ್ರ ಭೂಮಿಯನ್ನು ಪಾರ್ಕ್ ಆಗಿ ನಿರ್ಮಾಣ ಮಾಡಬೇಕು ಎಂದು ಹೇಳಿ ಮಸಣ ಕಾರ್ಮಿಕರ ಸಂಘಟನೆಯಿಂದ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗಾಳಿ ಬಸವರಾಜ್ ದೇವದಾಸಿ ಮಹಿಳೆಯರ ಸಂಘಟನೆಯಿಂದ ತಾಲೂಕು ಅಧ್ಯಕ್ಷರು ಯಂಕಮ್ಮ, ಗಾಳೆಪ್ಪ, ಹನುಮಂತಪ್ಪ, ಮಾರ್ಪ., ತಾಯಪ್ಪ, ಗೋವಿಂದಪ್ಪ, ತಿಮ್ಮಣ್ಣ ಇತರರು ಭಾಗವಹಿಸಿದರು.