ಕುವೆಂಪು ವಿಶ್ವಮಾನವ ಸಂದೇಶ ಪ್ರತಿಪಾದಿಸಿದ ಜಗದ ಕವಿ: ನಿಷ್ಠಿರುದ್ರಪ್ಪ

ಕುವೆಂಪು ವಿಶ್ವಮಾನವ ಸಂದೇಶ ಪ್ರತಿಪಾದಿಸಿದ ಜಗದ ಕವಿ: ನಿಷ್ಠಿರುದ್ರಪ್ಪ

ಬಳ್ಳಾರಿ 16: ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪುರವರು ನಿಸರ್ಗದ ಕವಿಯಾಗಿದ್ದರು. ಅವರು ಕನ್ನಡ ನಾಡಿಗೆ ತಮ್ಮದೇ ಆದ ಸೃಜನಶೀಲ ಸಾಹಿತ್ಯವನ್ನು ರಚಿಸುವ ಮೂಲಕ ಜಗತ್ತಿಗೆ ವಿಶ್ವವಮಾನವ ಸಂದೇಶವನ್ನು ಸಾರಿದರು. ಅವರ ಸಾಹಿತ್ಯವನ್ನು ಓದುವ ಮೂಲಕ ವಿದ್ಯಾಥರ್ಿಗಳು, ಯುವಕರು ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ನಿಷ್ಠಿರುದ್ರಪ್ಪ ಅವರು ತಿಳಿಸಿದರು.  ಅವರು ಸ್ಥಳೀಯ ವಿಜಡಮ್ ಲ್ಯಾಂಡ್ ಪ್ರೌಢಶಾಲೆಯಲ್ಲಿ ಶ್ರೀಮಂಜುನಾಥ ಲಲಿತಕಲಾ ಬಳಗವು ಹಮ್ಮಿಕೊಂಡಿದ್ದ ``ಕುವೆಂಪು ಸಾಹಿತ್ಯದಲ್ಲಿ ದೃಶ್ಯ ಕಾವ್ಯ ಮತ್ತು ವೈಚಾರಿಕತೆ'' ಎನ್ನುವ ವಿಷಯ ಕುರಿತು ಉಪನ್ಯಾಸ ನೀಡುತ್ತಾ, ಕುವೆಂಪು ಅವರು ತನ್ನ ಮನೆಯನ್ನಲ್ಲದೆ ಜಗತ್ತಿನ ನಿಸರ್ಗವನ್ನೇ ಪ್ರೀತಿಸಿದರು. ಹಾಗಾಗಿ ಅವರ ಕಾವ್ಯಗಳಲ್ಲಿ, ಕಾದಂಬರಿಗಳಲ್ಲಿ ಉನ್ನತ ಮಟ್ಟದಲ್ಲಿ ಪ್ರಕೃತಿಯ ವರ್ಣನೆಯನ್ನು ಕಾಣುತ್ತೇವೆ ಎಂದರು. ಕುವೆಂಪು ಅವರ ಸಾಹಿತ್ಯದಲ್ಲಿ ಮನುಜ ಮತ ವಿಶ್ವ ಪಥ ಎನ್ನುವ ವಿಶ್ವಮಾನವ ಪರಿಕಲ್ಪನೆ ಬಿಂಬಿತವಾಗಿರುವುದು ಕಂಡು ಬರುತ್ತದೆಯಲ್ಲದೆ ರೈತಪರ, ಕೆಳವರ್ಗದ ಪರ, ಶೋಷಿತರ ಪರವಾಗಿ ಧ್ವನಿಯನ್ನು ಎತ್ತಿದ್ದಾರೆ. ಜನರಲ್ಲಿ ವೈಚಾರಿಕತೆಯನ್ನು ಮೂಡಿಸಿದ್ದಾರೆ. ಇಂತಹ ಕವಿಯ ಕೊಡುಗೆಯನ್ನು ಸ್ಮರಿಸಬೇಕಾದುದು ಎಲ್ಲರ ಕರ್ತವ್ಯ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ ಬಿ.ನಾಗರಾಜ ಅವರು ಮಾತನಾಡಿ, ಕುವೆಂಪು ಅವರ ಸಾಹಿತ್ಯವನ್ನು ವಿದ್ಯಾಥರ್ಿಗಳು ಓದುವ ಮೂಲಕ ವೈಚಾರಿಕತೆಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು. ಆ ಮೂಲಕ ತಮ್ಮ ಜೀವನದಲ್ಲಿ ವಿಚಾರವಂತರಾಗಿ ಮುಂದುವರೆಯಬೇಕೆಂದು ಕರೆ ನೀಡಿದರು. ಹೊಸಪೇಟೆಯ ರಂಗಕಮರ್ಿ ಪಿ.ಅಬ್ದುಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕುವೆಂಪು ಅವರ ಬರೆದಿರುವ ರಾಮಾಯಣದರ್ಶನಂ ಕಾವ್ಯವು ಪೂರ್ವ ಕವಿಗಳಿಗಿಂತ ವಿಭಿನ್ನವಾಗಿದೆ. ಇದು ಸರಳ ರಗಳೆಯಲ್ಲಿದೆ. ಕಾವ್ಯ ಕಲ್ಪನೆಯು ವಿಶಿಷ್ಟವಾಗಿದೆ. ಇದರಲ್ಲಿ ಸೀತೆಗೆ ಮಾತ್ರ ಅಗ್ನಿಪರೀಕ್ಷೆಯಾಗದೆ ಶ್ರೀರಾಮನಿಗೂ ಅಗ್ನಿ ಪರೀಕ್ಷೆ ಮಾಡಿಸುವ ಸಮಾನತೆಯನ್ನು ಕಾಣುತ್ತೇವೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ವಿಜಡಂ ಲ್ಯಾಂಡ್ ಪ್ರೌಢಶಾಲೆಯ ಪ್ರಾಂಶುಪಾಲರಾದ ಎಸ್.ವಿ.ಕಟ್ಟೇಗೌಡ ಅವರು ಮಾತನಾಡಿ ಸಾಹಿತ್ಯ ಸಂಸ್ಕೃತಿ ಕುರಿತ ಕಾರ್ಯಕ್ರಮಗಳನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಸಂತೋಷದ ಸಂಗತಿ. ವಿದ್ಯಾಥರ್ಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಂಡು, ಸ್ಫೂತರ್ಿ ಪಡೆದು ಕವಿಗಳಾಗಿ ಹೊರಹೊಮ್ಮಬೇಕೆಂದು ವಿದ್ಯಾಥರ್ಿಗಳಿಗೆ ಕಿವಿ ಮಾತು ಹೇಳಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ- ಶಿಕ್ಷಕಿಯರು, ಆಡಳಿತ ವರ್ಗದವರು ಭಾಗವಹಿಸಿದ್ದರು. 

ಆರಂಭದಲ್ಲಿ ನಾಡಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಮುನ್ನ ಚಿತ್ರಕಲಾ ಸ್ಪಧರ್ೆಯಲ್ಲಿ ಭಾಗವಹಿಸಿ ವಿಜೇತರಾದ ಲೋಹಿತ್ (ಪ್ರಥಮ), ಸೂರ್ಯಪ್ರಕಾಶ್ (ದ್ವಿತೀಯ),ಎಸ್.ಶರಣ (ತೃತೀಯ) ಇವರಿಗೆ ಬಹುಮಾನವನ್ನು ಹಾಗೂ ಪ್ರಮಾಣ ಪತ್ರವನ್ನು  ನೀಡಲಾಯಿತು.  ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಮಂಜುನಾಥ ಗೋವಿಂದವಾಡ ಅವರು ನೆರವೇರಿಸಿದರು. ಬಿ.ಮೌನೇಶ್ ಆಚಾರ್ ಅವರು ನಿರೂಪಿಸಿದರು. ಕೊನೆಯಲ್ಲಿ ಕು.ಶಾಂತ ವಂದಿಸಿದರು.


ಸುದ್ದಿ ಓದಿ