ರೈತರ ಶ್ರೇಯೋಭಿವೃದ್ಧಿಗಾಗಿ ಸಂಘಟನೆ ಶ್ರಮಿಸಲಿದೆ : ರಾಜ್ಯಾಧ್ಯಕ್ಷ ಧರ್ಮರಾಜ ಗೌಡರ ಹೇಳಿಕೆ: ನೇಗಿಲಯೋಗಿ ಸುರಕ್ಷಾ ರೈತಸಂಘದ ತಾಲೂಕು ಘಟಕ ಉದ್ಘಾಟನೆ
ಲೋಕದರ್ಶನ ವರದಿ
ರಾಜ್ಯಾಧ್ಯಕ್ಷ ಧರ್ಮರಾಜ ಗೌಡರ ಹೇಳಿಕೆ: ನೇಗಿಲಯೋಗಿ ಸುರಕ್ಷಾ ರೈತಸಂಘದ ತಾಲೂಕು ಘಟಕ ಉದ್ಘಾಟನೆ
ಬೈಲಹೊಂಗಲ 02: ರಾಜ್ಯದಲ್ಲಿ ರೈತರನ್ನು ಸಂಘಟಿಸಿ ರೈತರ ಶ್ರೇಯೋಭಿವೃದ್ದಿಗಾಗಿ ಹುಟ್ಟಿದ ಈ ಸಂಘಟನೆ ಎಲ್ಲ ಗ್ರಾಮಗಳಲ್ಲಿ ಶಾಖೆಗಳನ್ನು ತೆರೆಯಲಾಗುತ್ತಿದೆ. ರೈತರು, ರೈತ ಮಹಿಳೆಯರು ನಮ್ಮ ಸಂಘಟನೆಗೆ ಸ್ಪಂದಿಸುತ್ತಿದ್ದಾರೆ ಎಂದು ರಾಜ್ಯಾಧ್ಯಕ್ಷ ಧರ್ಮರಾಜ ಗೌಡರ ಹೇಳಿದರು.
ನೇಗಿಲಯೋಗಿ ಸುರಕ್ಷಾ ರೈತಸಂಘದ ಸ್ಥಳೀಯ ತಾಲೂಕು ಘಟಕವನ್ನು ಮರಡಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯವಾಗಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ ರೈತರಿಗೆ ಸಿಗಬೇಕಾದ ಹಕ್ಕುಗಳನ್ನು ಪಡೆಯಲು ನಮ್ಮ ಸಂಘಟನೆ ಶ್ರಮಿಸುತ್ತದೆ. ಈ ದೆಸೆಯಲ್ಲಿ ರೈತರು ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಿಷ್ಠವಾಗಿ ಬೆಳೆಸಿಕೊಳ್ಳಬೇಕೆಂದು ಧರ್ಮರಾಜ ಗೌಡರ ರೈತರಿಗೆ ಕರೆ ನೀಡಿದರು.
ರಾಜ್ಯ ಕಾರ್ಯಾಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ, ಲಂಚ ಮುಕ್ತ ರಾಜ್ಯವನ್ನಾಗಿಸುವುದು ನಮ್ಮ ಧ್ಯೆಯವಾಗಿದೆ. ರೈತರ ಆತ್ಮಹತ್ಯೆಗೆ ಕಾರಣವನ್ನು ಹುಡುಕಿ ಪರಿಹಾರ ಕಂಡುಕೊಳ್ಳುವಲ್ಲಿ ನಮ್ಮ ಸಂಘಟನೆ ಶ್ರಮಿಸಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ನಾವಯ ಸಿದ್ದರಾಗಿದ್ದೆವೆ. ಬೆಳೆ ಹಾನಿ, ರೈತರ ಬೆಳೆಗೆ ಬೆಂಬಲ ಬೆಲೆ ಸಿಗದೇ ಇರುವುದನ್ನು ಕಟುವಾಗಿ ಟೀಕಿಸಿದ ಅವರು ಸರ್ಕಾರಗಳು ರೈತರ ಬಗ್ಗೆ ಕಿಂಚಿತ್ತೂ ಚಿಂತಿಸದಿರುವುದು ಯಾವ ನ್ಯಾಯ? ಎಂದ ಅವರು ರೈತ ಸಂಘಟನೆ ಮೂಲಕ ಹೋರಾಟ ನಿರಂತರವಾಗಿ ಮಾಡಬೇಕೆ ಎಂದೂ ಪ್ರಶ್ನಿಸಿದ ಅವರು ಕೃಷಿ ಕಾಯ್ದೆ ಹಿಂಪಡೆಯಲು ಕೇಂದ್ರ ಸರ್ಕಾರ ಬದ್ದವಾಗಿದೆ ಎಂದರೂ ರಾಜ್ಯ ಸರ್ಕಾರವೂ ಕೂಡ ಈ ದಿಸೆಯಲ್ಲಿ ಕೇಂದ್ರದೊಂದಿಗೆ ಕೈಜೋಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ, ರಾಣಿ ಚನ್ನಮ್ಮ ಸಮಾಧಿಗೆ ಗೌರವ ಸಲ್ಲಿಸಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಮರಡಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ ನೂರಾರು ರೈತರು ಹಾಗೂ ರೈತ ಮಹಿಳೆಯರು ಸಮಾರಂಭದಲ್ಲಿ ಪಾಲ್ಗೊಂಡರು. ಪಾದಯಾತ್ರೆಯ ನೇತೃತ್ವವನ್ನು ಧರ್ಮರಾಜ ಗೌಡರ, ಬಸವನಗೌಡ ಪಾಟೀಲ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸಹನಾ ಅಂಚಿಗಿ, ಜಿಲ್ಲಾಧ್ಯಕ್ಷ ಈರಣ್ಣ ಹುಬ್ಬಳ್ಳಿ, ಗೀರಿಜಾ ಹುಲಸೋಗಿ, ರಾಜ್ಯ ಸಂಚಾಲಕ ಶಂಕರಯ್ಯಸ್ವಾಮಿ ಹಿರೇಮಠ, ತಾಲೂಕಾ ಮಹಿಳಾ ಅಧ್ಯಕ್ಷೆ ನಾಗವ್ವ ಮಠಪತಿ ವಹಿಸಿದ್ದರು.
ವೇದಿಕೆ ಮೇಲೆ ರಾಜ್ಯ ಕೋಶಾಧ್ಯಕ್ಷ ಈಶ್ವರ ಟರ್ಕಿ, ಎಂ.ಎಸ್.ಹೆಗಡೆ, ಜಿಲ್ಲಾ ಗೌರವ ಅಧ್ಯಕ್ಷ ಈರಣ್ಣ ಅಂಗಡಿ, ಜಿಲ್ಲಾ ಉಪಾಧ್ಯಕ್ಷೆ ಆನಂದ ಬೇವಿನ, ತಾಲೂಕಾ ಅಧ್ಯಕ್ಷ ಸಂಭಾಜಿ ಖಂಡೋಜಿ, ತಾಲೂಕಾ ಸಂಚಾಲಕ ಬಸಪ್ಪ ರೋಡಬಸವನ್ನವರ,ಉಪಾಧ್ಯಕ್ಷ ಮುರಿಗೇಪ್ಪ ನಾಗನಗೌಡರ, ಕುಂದಗೋಳ ಘಟಕ ಅಧ್ಯಕ್ಷ ಪರಶುರಾಮ ಮೂಡಲಗಿ, ಸವದತ್ತಿಯ ಬಸಪ್ಪ ಗುಡಿಮನಿ, ಸಂಚಾಲಕ ವೀರೇಶ ಮಾಕಿ, ಕಿತ್ತೂರು ತಾಲುಕಾ ಅಧ್ಯಕ್ಷ ಶಿವಕ್ಕಾ ಮಿನಕಿ, ಉಪಾಧ್ಯಕ್ಷ ಗೌಡಪ್ಪ ಗೌಡರ ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದಲ್ಲಿ ಶ್ರೀಶೈಲ ತೋಟಗಿ, ಬಸವರಾಜ ಹಿಟ್ಟಣಗಿ, ಉಳವಪ್ಪ ಅಕ್ಕಿ, ರಾಮಲಿಂಗ ಬಳಿಗಾರ, ಚಿನ್ನಪ್ಪ ಶಿಂತ್ರಿ, ಈರ್ಪ ಕೋತಂಬರಿ, ಗಂಗಪ್ಪ ಕೋತಂಬ್ರಿ, ಶಿವಪ್ಪ ಕಲಾದಗಿ, ಮಹಾದೇವ ಅಜ್ಜನಕಟ್ಟಿ, ಬಸನಪ್ಪ ಸೋಮನಟ್ಟಿ, ಮಹಾಂತೇಶ ರುದ್ರಾಪುರ, ನಾರಾಯಣ ಉಳ್ಳಾಗಡ್ಡಿ, ರೈತ ಧುರೀಣ ಈರ್ಪ ಹುಂಬಿ, ಪಾರವ್ವ ಶಿಂತ್ರಿ, ನಾಗವ್ವ ಗೋವನಕೊಪ್ಪ ಮುಂತಾದವರು ಪಾಲ್ಗೊಂಡಿದ್ದರು.