ರಾಣೆಬೆನ್ನೂರ

ಭಾವೈಕ್ಯ ಸಂದೇಶ ಸಾರಿದ ಗಣವೇಷದಾರಿಗಳ ಪಥಸಂಚಲನ

ಭಾವೈಕ್ಯ ಸಂದೇಶ ಸಾರಿದ ಗಣವೇಷದಾರಿಗಳ ಪಥಸಂಚಲನ

ಲೋಕದರ್ಶನ ವರದಿ 


ರಾಣೇಬೆನ್ನೂರು 08:  ವಾಣಿಜ್ಯ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಪಥ ಸಂಚಲನ  ಕಾರ್ಯಕ್ರಮವು ರವಿವಾರ ಮಧ್ಯಾನ ನಡೆಯಿತು. ಜಿಲ್ಲಾ ಸಂಘ ಚಾಲಕರು ಈಶ್ವರ ಹಾವನೂರ ಅವರು ದ್ವಜ ವಂದನೆ ಸಲ್ಲಿಸಿ ಪಥಸಂಚಲನಕ್ಕೆ ಚಾಲನೆ ನೀಡಿದರು. ನಗರ ಮತ್ತು ತಾಲೂಕಿನ 300 ಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂ ಸೇವಕರು ಪಾಲ್ಗೂಂಡಿದ್ದರು. ಆಕರ್ಷಕ ಪಥಸಂಚಲನವು ಘೋಷ ವಾಕ್ಯದೂಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. 

ಮುಂಚೂಣಿಯಲ್ಲಿ ಅಶೋಕ ನಾಡಗೇರ, ರುದ್ರೇಶ ಮಜ್ಜಗಿ, ಕೆ.ಎನ್, ಷಣ್ಮುಖ, ವಿ.ಆರ್ ಜೋಶಿ, ಡಾ. ಬಸವರಾಜ ಕೇಲಗಾರ, ಶಾಸಕ ಅರುಣಕುಮಾರ ಪೂಜಾರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ,  ನ್ಯಾಯವಾದಿ ಕೆ. ಶಿವಲಿಂಗಪ್ಪ, ಪವನ ಮಲ್ಲಾಡದ, ಆರ್,ಟಿ. ತಾಂಬೆ, ಸಂತೋಷ ರಾಯ್ಕರ, ಸತ್ಯನಾರಾಯಣ ಹೂಳೆಬಾಗಿಲ, ಯೋಗೇಂದ್ರ ಹೊಳಬಾಗಿಲ, ಯುವರಾಜ ಬ್ಯಾಡಗಿ, ಬಾಬುಲಾಲ್ ಜೈನ್, ರಾಯಣ್ಣ ಮಾಕನೂರ, ಎ.ಬಿ. ಪಾಟೀಲ, ಶ್ರೀಕಾಂತ ಹುಲ್ಮನಿ ಸೇರಿದಂತೆ ಮತ್ತಿತರ ಸ್ವಯಂ ಸೇವಕ ಗಣ್ಯರು ಪಾಲ್ಗೂಂಡಿದ್ದರು. ಕ್ರೀಡಾಂಗಣದಿಂದ ಹೋರಟ ಪಥಸಂಚಲನವು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಕ್ರೀಡಾಂಗಣದಲ್ಲಿ ಸಾಂಗತ್ಯಗೂಂಡಿತು. ಸಾಗಿದ ರಸ್ತೆಯುದ್ದಕ್ಕೂ ನಾಗರೀಕರು, ಮಹಿಳೆಯರು ರಂಗೋಲಿ ಸಾರಿಸಿ ಪುಷ್ಪ ವೃಷ್ಟಿಗರೆದು  ಭಾರತಾಂಬೆಗೆ ಪೂಜೆ ಸಲ್ಲಿಸಿ ತಮ್ಮ ದೇಶ ಭಕ್ತಿಯನ್ನು ಮೇರೆಯುತ್ತಿರುವುದು ಎಲ್ಲೆಡೆಯು ಕಂಡುಬರುತ್ತಿತ್ತು. 


ಸುದ್ದಿ ಓದಿ