ರಾಷ್ಟ್ರೀಯ

ರೈತರ ಬಿಕ್ಕಟ್ಟು, ವಿರೋಧಿ ನಿಯೋಗದಿಂದ ರಾಷ್ಟ್ರಪತಿ ಭೇಟಿ

ರೈತರ  ಬಿಕ್ಕಟ್ಟು,  ವಿರೋಧಿ  ನಿಯೋಗದಿಂದ  ರಾಷ್ಟ್ರಪತಿ ಭೇಟಿ

ನವದೆಹಲಿ, ಡಿಸೆಂಬರ್ 9:   ಕೇಂದ್ರದ  ಹೊಸ ಕೃಷಿ ಸುಧಾರಣಾ ತಿದ್ದುಪಡಿ  ಕಾಯ್ದೆ ಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ , ಪರಿಹಾರ ಕಾಣದ ಬಿಕ್ಕಟ್ಟಿನ ನಡುವೆಯೇ  ಇಂದು   ವಿರೋಧ ಪಕ್ಷಗಳ ನಾಯಕರು  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. 

ಐವರು ವಿರೋಧ ಪಕ್ಷಗಳ ನಾಯಕರ ನಿಯೋಗದಲ್ಲಿ ಐ.ಎನ್.ಸಿ.ಯಿಂದ ರಾಹುಲ್ ಗಾಂಧಿ, ಎನ್ ಸಿಪಿಯಿಂದ ಶರದ್ ಪವಾರ್, ಸಿಪಿಐ(ಎಂ)ನಿಂದ ಸೀತಾರಾಂ ಯೆಚೂರಿ, ಸಿಪಿಐನಿಂದ ಡಿ.ರಾಜಾ, ಡಿಎಂಕೆಯಿಂದ ಟಿಕೆಎಸ್ ಇಳಂಗೋವನ್ ಇರಲಿದ್ದಾರೆ ಎನ್ನಲಾಗಿದೆ.

ಸಂಜೆ 5 ಗಂಟೆಗೆ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿ ಮಾಡುವ ಮುನ್ನ ಪ್ರತಿಪಕ್ಷಗಳ ನಾಯಕರು ಸಭೆ ನಡೆಸಿ ಸಮಾಲೋಚನೆ ಮಾಡಲಿದ್ದಾರೆ.  ಈ ಬಗ್ಗೆ ಮಾಹಿತಿ ನೀಡಿರುವ ಸೀತರಾಮ್ ಯಚೂರಿ,  ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಕಾರ್ಯತಂತ್ರ ವನ್ನು ಅಂತಿಮಗೊಳಿಸುವ ಮುನ್ನ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದರು.  ಕೊರೋನ ಕಾರಣಕ್ಕಾಗಿ  ನಿಯೋಗದ ಸದಸ್ಯರ ಸಂಖ್ಯೆ ಸೀಮಿತಗೊಳಿಸಲಾಗಿದೆ. 

ಸುದ್ದಿ ಓದಿ