ರಾಷ್ಟ್ರೀಯ

ದೇಶದಲ್ಲಿ 46 ಲಕ್ಷಕ್ಕೇರಿದ ಕೋವಿಡ್ -19 ಸೋಂಕಿತರ ಸಂಖ್ಯೆ

ದೇಶದಲ್ಲಿ 46 ಲಕ್ಷಕ್ಕೇರಿದ ಕೋವಿಡ್ -19 ಸೋಂಕಿತರ ಸಂಖ್ಯೆ

ನವದೆಹಲಿ, ಸೆಪ್ಟೆಂಬರ್.12: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 97, 570 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 46 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಮಾಹಿತಿ ನೀಡಿದೆ. 

ಸದ್ಯ ದೇಶದಲ್ಲಿ 46 ಲಕ್ಷದ 59 ಸಾವಿರದ 985 ಕೊರೊನಾ ಪ್ರಕರಣಗಳಿದ್ದು, ಈ ಪೈಕಿ 9 ಲಕ್ಷದ 58 ಸಾವಿರದ 316 ಸಕ್ರಿಯ ಪ್ರಕರಗಳಿವೆ. ಈ ಮಧ್ಯೆ, 36 ಲಕ್ಷದ 24 ಸಾವಿರದ 197 ಸೋಂಕಿತರು ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ 1201 ಮಂದಿ ಸಾವನ್ನಪ್ಪಿದ್ದು,  ಒಟ್ಟಾರೆ ಸಾವಿನ ಸಂಖ್ಯೆ 77 ಸಾವಿರದ 472ಕ್ಕೆ ಏರಿಕೆಯಾಗಿದೆ.

ಸುದ್ದಿ ಓದಿ