ರಾಷ್ಟ್ರೀಯ

ದಲಿತ ಮುಖಂಡನ ಕೊಲೆ , ಆರ್ ಜೆ ಡಿ ನಾಯಕರ ವಿರುದ್ಧ ಎಫ್ಐಆರ್

ದಲಿತ ಮುಖಂಡನ ಕೊಲೆ ,  ಆರ್ ಜೆ ಡಿ  ನಾಯಕರ ವಿರುದ್ಧ   ಎಫ್ಐಆರ್

ಪಾಟ್ನಾ,   ಅಕ್ಟೋಬರ್ 5: ಬಿಹಾರದಲ್ಲಿ  ದಲಿತ ಮುಖಂಡ ಶಕ್ತಿ ಮಲಿಕ್ ಹತ್ಯೆಗೆ ಸಂಬಂಧಿಸಿದಂತೆ ಆರ್ಜೆಡಿ ನಾಯಕರಾದ ತೇಜಸ್ವಿ ಪ್ರಸಾದ್ ಯಾದವ್, ತೇಜ್ ಪ್ರತಾಪ್ ಯಾದವ್ ಮತ್ತು ಇತರ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ರಾಣಿಗಂಜ್ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಲು ತೇಜಶ್ವಿ ಪ್ರಸಾದ್ ಯಾದವ್ ಅವರು 50 ಲಕ್ಷ ರೂಪಾಯಿ ದೇಣಿಗೆ ನೀಡುವಂತೆ ಒತ್ತಾಯಿಸಿದ್ದರು ಎಂದು ಶಕ್ತಿ ಮಲಿಕ್ ಆರೋಪ ಮಾಡಿದ ಬೆನ್ನಲ್ಲೇ ಈ ಹತ್ಯೆ ನಡೆದಿದೆ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮನೆಯಲ್ಲಿ ಶಕ್ತಿ ಮಲಿಕ್ ಮಲಗಿದ್ದಾಗ ಮೂವರು ಅಪರಿಚಿತರು ಬೈಕ್ ನಲ್ಲಿ ಬಂದು  ಗುಂಡು ಹಾರಿಸಿ ಪರಾರಿಯಾಗಿದ್ದರು. ಗುಂಡೇಟಿನಿಂದ ಮಲಿಕ್ ಸ್ಥಳದಲ್ಲೇ ಮೃತಪಟ್ಟಿದ್ದರು.

ಸುದ್ದಿ ಓದಿ