ಬಹುಮುಖ ವ್ಯಕ್ತಿತ್ವವೇ ಇಂದಿನ ಯುವಶಕ್ತಿಗೆ ಮಾದರಿ : ಸ್ವಾಮಿ ಪ್ರಕಾಶನಂದಾಜೀ
ಲೋಕದರ್ಶನ ವರದಿ
ಶಿಗ್ಗಾವಿ : ಪಟ್ಟಣದ ರಂಭಾಪುರಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ ದಿನಾಚರಣೆಯ ಪ್ರಯುಕ್ತ ಸರಣಿ ಉಪನ್ಯಾಸ ಸಮಾರೋಪ ಸಮಾರಂಭ ಹಾಗೂ ಉಪನ್ಯಾಸ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಾಣೇಬೆನ್ನೂರಿನ ಸ್ವಾಮಿ ವಿವೇಕಾನಂದ ಆಶೃಮದ ಮುಖ್ಯಸ್ಥರಾದ ಸ್ವಾಮಿ ಪ್ರಕಾಶನಂದಾಜೀ ಸ್ವಾಮಿಗಳು, ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮಿ ಪ್ರಕಾಶನಂದಾಜೀ ಸ್ವಾಮಿಗಳು, ಸ್ವಾಮಿ ವಿವೇಕಾನಂದರಂತ ವ್ಯಕ್ತಿಗೆ ಜನ್ಮ ಕೊಟ್ಟ ತಾಯಿ ಭುವನೇಶ್ವರಿ ಧನ್ಯಳು, ಸಮಗ್ರ ಹಾಗೂ ಬಹುಮುಖ ವ್ಯಕ್ತಿತ್ವವೇ ಇಂದಿನ ಯುವಶಕ್ತಿಗೆ ಮಾದರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಕುರಿತು ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಯನ್ನ ಏರಿ್ಡಸಲಾಗಿತ್ತು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು,
ಅಧ್ಯಕ್ಷತೆಯನ್ನ ಕಾರ್ಯದರ್ಶಿ ಎಸ್ ಬಿ ಹಿರೇಮಠ ವಹಿಸಿದ್ದರು, ಪ್ರಾಚಾರ್ಯ ಪ್ರೋ ಸಿ ಹೆಚ್ ತಾವರಗೊಂದಿ, ಪ್ರೊ. ಎಸ್ ವಿ ಕುಲಕರ್ಣಿ, ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ, ಪ್ರೊ ಶಿವಯ್ಯ ಪೂಜಾರ, ಡಾ ಡಿ ಎ ಗೊಬ್ಬರಗುಂಪಿ, ಡಾ. ರಾಜರತ್ನ ದಾದುಗೌಡರ್, ಪ್ರೊ. ಎಸ್ ಎಸ್ ಮಲ್ಲಾಡದ, ಪ್ರೊ. ಎಸ್ ಎನ್ ತೀರ್ಥ, ಪ್ರೊ. ಎಮ್ ಎಸ್ ಸಿದ್ದಪ್ಪನವರ, ಪ್ರೊ. ಎಸ್ ವ್ಹಿ ಬಳೆಗಾರ ಪ್ರೊ. ಎಮ್ ಎಸ್ ಸಂಗಣ್ಣನವರ,ಡಾ, ಶ್ರೀಶೈಲ್ ಹುದ್ದಾರ, ಡಾ. ಆರ್ ಎಸ್ ಹೊಗರ್ತಿ, ಪ್ರೊ. ಎನ್ ಸಿ ನಾಯಕ, ಡಾ, ವಿನಯ್ ಹೆಚ್ ಕೆ ಇದ್ದರು. ವೀಣಾ ಕಾಮನಳ್ಳಿ, ಐಶ್ವರ್ಯಾ ದಿಡಗೂರ, ಸಂಗಡಿಗರು ಪ್ರಾರ್ಥಿಸಿದರು, ಕಾವ್ಯಾ ಹಾಳಿ ಸ್ವಾಗತಿಸಿ, ವಂದಿಸಿದಳು.