ಪುರಸಭೆಗೆ ಆದಾಯ ಬಂದಷ್ಟೂ ಪಟ್ಟಣದ ಅಭಿವೃದ್ಧಿ ಸಾಧ್ಯ: ಶಾಸಕ ಸಿ.ಎಸ್.ನಾಡಗೌಡ
ಮುದ್ದೇಬಿಹಾಳ 17: ಪಟ್ಟಣದ ಪುರಸಭೆ ವ್ಯಾಪ್ತಿಯ, ಮನೆ ನೀರು, ಸೇರಿದಂತೆ ಇತರೇ ಕರ ಬಾಕಿ ಉಳಿಸಿಕೊಂಡವರು ಈ ಕೂಡಲೇ ಪುರಸಭೆಗೆ ಬಾಕಿ ಭರಿಸಬೇಕು ಇಲ್ಲದಿದ್ದರೇ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಮೇಲೆ ಕೈಗೊಳ್ಳುವ ಕ್ರಮಕ್ಕೆ ನಾವು ಹೊಣೆಗಾರರಲ್ಲ. ಇದರಲ್ಲಿ ಪುರಸಭೆ ಯಾವ ಸದಸ್ಯರು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಶಾಸಕ ಸಿ ಎಸ್ ನಾಡಗೌಡ ಅವರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪುರಸಭೆ ಎಲ್ಲ ಸದಸ್ಯರ, ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸುದಿಗೋಷ್ಠಿಯಲ್ಲಿ ಮಾತನಾಡಿದರು.
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ. ಪುರಸಭೆಗೆ ಎಷ್ಟು ಹೆಚ್ಚು ಆದಾಯ ಬರುತ್ತದೆಯೋ ಅಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ 23 ವಾರ್ಡುಗಳ ಸದಸ್ಯರ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳಲು ಪುರಸಭೆ ಮುಖ್ಯಾಧಿಕಾರಿಗಳು ವಾಸ್ಥವ್ಯ ಹೂಡಬೇಕು ಜೊತೆಗೆ ನಿತ್ಯ ಬೆಳಿಗ್ಗೆ ನಾಲ್ಕು ವಾರ್ಡುಗಳಿಗಾದರೂ ಭೇಟಿ ನೀಡಿ ಆಯಾ ವಾರ್ಡುಗಳ ಜನರ ಕುಂದು ಕೊರತೆ ಆಲಿಸಿ ಸೂಕ್ತ ಕ್ರಮ ಕೈಗೋಳ್ಳಬೇಕು ಎಂದು ನೂತನವಾಗಿ ಅಧಿಕಾರ ವಹಿಸಿಕೊಂಡ ಮೋಹನ ಜಾಧವ ಅವರಿಗೆ ಸೂಚಿಸಿದ್ದೇನೆ ಎಂದರು.
ಕಳೆದ ಐದು ವರ್ಷಗಳಲ್ಲಿ ರಸ್ತೆ ದುರಸ್ತೀಕರಣ ನೆಪದಲ್ಲಿ ಸರಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸದ್ಯ ಕಳೆದ ಆರು ವರ್ಷಗಳಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ನಡೆಸಲಾಗಿದೆ, ಆದರೆ ಪ್ರತಿ ಮನೆ ಮನೆಗೂ ಒಳಚರಂಡಿ ಸಂಪರ್ಕವೂ ಕೂಡ ನೀಡಿರಲಿಲ್ಲ ಎಲ್ಲೆಂದರಲ್ಲಿ ಅವೈಜ್ಞಾನಿಕ ಸಿಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ರಸ್ತೆ ನಿರ್ಮಿಸಿದರೆ ಒಳಚಂಡಿ ಸಂಪರ್ಕ ಕೊಡುವುದು ಹೇಗೆ ಎಂಬ ಸಾಮಾನ್ಯ ಜ್ಞಾನವೂ ಕೂಡ ಅಧಿಕಾರಿಗಳಿಗೆ ಇರಬೇಕಲ್ಲವೇ.
ಸಾರ್ವಜನಿಕರ ಒತ್ತಾಯಿಸುತ್ತಿದ್ದಾರೆ ಎಲ್ಲೆಡೆ ಒಳಚರಂಡಿ ಸಂಪರ್ಕ ನೀಡಬೇಕಾಗಿದೆ, ಆದರೀಗ ರಸ್ತೆಯನ್ನು ಕೊರೆಯಬೇಕಾಗುವುದು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡಬೇಕು. ಪುರಸಭೆ ಖಜಾನೆಯಲ್ಲಿ ಕೇವಲ 4 ಲಕ್ಷ ಹಣ ಮಾತ್ರ ಇದೆ. ಮೊದಲೇ ಪುರಸಭೆಗೆ ಬರಬೇಕಾದ ಆದಾಯ ಬರುತ್ತಿಲ್ಲ ಅಭಿವೃದ್ಧಿ ಮಾಡಬೇಕು ಎಂದರೆ ಹೇಗೆ ಸಾಧ್ಯ ಸದಸ್ಯರಾದವರಾದರೂ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಮೊದಲು ಪುರಸಭೆಯ ಆದಾಯಕ್ಕೆ ಹೆಚ್ಚು ಕೊಟ್ಟು ಆದಾಯ ಸಂಗ್ರಹಿಸಬೇಕು. ಅನಧಿಕೃತ ಲೇಓಟ್ ಗಳಿಗೆ ಕೈಬರಹ ಉತಾರಗಳನ್ನು ಈಗಾಗಲೇ ಕೊಟ್ಟಿದ್ದಾರೆ ಅದರ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಜನರಿಗೆ ಕುಡಿಯುವ ನೀರು, ಬೀದೀದೀಪಗಳನ್ನು ಒದಗಿಸುವ ಮೂಲಕ ಜನಸಾಮಾನ್ಯರ ಕುದುಕೊರತೆ ಆಲಿಸಿ ತರಕ್ಷಣದಲ್ಲಿಯೇ ಜನಸಾನ್ಯರಿಗೆ ಸರಕಾರಿ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕು.ಪಟ್ಟಣದ ತುಂಬೆಲ್ಲ ಸ್ವಚ್ಚತೆ ಆದ್ಯತೆ ಕೊಡಬೇಕು ಸಧ್ಯ ಎಲ್ಲ ವಾರ್ಡುಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ ಹಾಗಾಗಿ ಸೊಳ್ಳೆ ನಿಯಂತ್ರಣಕ್ಕಾಗಿ ಫಾಗೀಂಗ್ ಸಿಂಪಡಣೆ ಕ್ರಮ ಕೈಗೊಳ್ಳಬೇಕು.
ಪಟ್ಟಣದಲ್ಲಿ ಏನೆಲ್ಲ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಕೊಡಿ ಸರಕಾರದಿಂದ ವಿಶೇಷ ಅನುದಾನ ಹೇಗೆ ಯಾವೂದಕ್ಕೆ ತರಬೇಕು ಎಂದು ಯೋಚಿಸುತ್ತೇನೆ. ಅದರಂತೆ ಪಟ್ಟ ಣದ ಇಂದಿರಾ ಸರ್ಕಲ್ ಬಳಿ ಇರುವ ತರಕಾರಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಈ ಗಾಗಲೇ ನೀಲನಕ್ಷೇ ತಯಾರಿಸಲು ಮತ್ತು ಕೆರೆ ಅಭಿವೃದ್ಧಿ ಹೇಗೇಲ್ಲ ಅಭಿವೃದ್ಧಿಪಡಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಸಂಬಂಧಪಟ್ಟ ಇಂಜಿನಿಯರವರಿಗೆ ಸೂಚಿದ್ದೇನೆ ಎಂದರು
ಪಟ್ಟಣದಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗಾಗಲಿ ಅಥವಾ ಅಧಿಕಾರಿಗಳಿಗಾಗಲಿ ಕಾಮಗಾರಿ ನಿಲ್ಲಿಸಿ ಎಂದು ಹೇಳಿಯೇ ಇಲ್ಲ ಚುನಾವಣೆ ಮುಗಿದು ಕೇವಲ 3 ತಿಂಗಳಾಗಿದೆ. ಯಾವ ಗುತ್ತಿಗೆದಾರರು ಎಲ್ಲೆಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿಯೇ ಗೊತ್ತಿಲ್ಲ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ಮುಖವನ್ನೇ ಇಲ್ಲಿಯವರೆಗೆ ನಾನು ನೋಡಿಯೇ ಇಲ್ಲ. ಅವರಾಗಿಯೇ ಕಾಮಗಾರಿ ನಡೆಸಲು ಸಾಧ್ಯವಾಗದೆ ಸ್ವಯಂಪ್ರೇರಿತವಾಗಿ ನಿಲ್ಲಿಸಿರಬಹುದು.
ಈ ವೇಳೆ ವಿಜಯಪುರ ಡಿಯುಡಿಸಿ ಎಇಇ ಅನೀಲಕುಮಾರ ಮುದ್ದಾ,ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಸದಸ್ಯರಾದ ,ಮೈಬೂಬ ಗೊಳಸಂಗಿ, ಸಮೀರ ದ್ರಾಕ್ಷೀ, ಯಲ್ಲಪ್ಪ ನಾಲಕಮಕ್ಕಳ, ಬಸವರಾಜ ಮುರಾಳ, ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಚನ್ನಪ್ಪ ಕಂಠಿ, ರೀಜಾಹಮ್ಮದ ಢವಳಗಿ, ಶಿವು ಶಿವಪುರಿ, ವಿರೇಶ ಹಡಲಗೇರಿ, ಶಾಹಾಜಾದಬಿ ಹುಣಸಗಿ, ಸೇರಿದಂತೆ ಹಲವರು ಇದ್ದರು.