ರಾಣೆಬೆನ್ನೂರ

ಮಾಧ್ಯಮ ಸರ್ಕಾರ-ಜನರ ಸಂಪರ್ಕ ಸೇತುವಾಗಲಿ: ಬಿ.ಎಸ್‌.ಯಡಿಯೂರ​‍್ಪ

ಮಾಧ್ಯಮ ಸರ್ಕಾರ-ಜನರ ಸಂಪರ್ಕ ಸೇತುವಾಗಲಿ: ಬಿ.ಎಸ್‌.ಯಡಿಯೂರ​‍್ಪ

ಲೋಕದರ್ಶನ ವರದಿ 


ರಾಣೇಬೆನ್ನೂರ 11:  ದೇಶದಲ್ಲಿ ಪ್ರಜಾಪ್ರಭುತ್ವ ಸಮರ​‍್ಕವಾಗಿ ನಡೆಯಲು ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸೇರಿದಂತೆ ಪತ್ರಿಕಾ ರಂಗವು 4ನೇ ಅಂಗವಾಗಿ ಸಮರ​‍್ಕ ವಾಗಿ ಕಾರ್ಯನಿರ್ವಹಿಸುತ್ತಿದ್ದು ಸಮಗ್ರ ಜನತೆಯ ದುಃಖ-ದುಮ್ಮಾನಗಳಿಗೆ ಸ್ಪಂಧಿಸಿ ಆಡಳಿತ ಪಕ್ಷವನ್ನು ಎಚ್ಚರಿಸುವ ಕಾರ್ಯವನ್ನು ಮಾದ್ಯಮಗಳು ಯಶಸ್ವಿಯಾಗಿ ಮಾಡುತ್ತಿರು ವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ  ಬಿ.ಎಸ್‌. ಯಡಿಯೂರ​‍್ಪ ಹೇಳಿದರು. 

ಅವರು ಶಿವಮೂಗ್ಗ ನಗರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ಕ್ಷೇತ್ರ ಸಾಧಕ ಪತ್ರ ಕರ್ತರಿಗೆ ಪ್ರಶಸ್ತಿ ಪ್ರಧಾನ  ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು.. ದೃಶ್ಯ ಮಾದ್ಯಮ ರೋಚಕ ವರದಿ ನೀಡುವ ನಿಟ್ಟಿನಲ್ಲಿ ಸಮಾಜಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಸರ್ಕಾರ ಹಾಗೂ ಜನರ ಮಧ್ಯೆ ಮಾದ್ಯಮಗಳು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ದೇಶ ಬಲಾಢ್ಯ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ-ಅಭಿವ್ಯಕ್ತ ಸ್ವಾತಂತ್ರ್ಯ ಸಮಾನತೆಯ ಹಕ್ಕು ಪ್ರತಿಯೊಬ್ಬ ಪ್ರಜೆಗೆ ಇದ್ದು ಈ ಹಕ್ಕಿಗೆ ಧಕ್ಕೆ ಬರದಂತೆ ಮಾಧ್ಯ ಮಗಳು ಸದಾ ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿದರು.  

ಪತ್ರಿಕಾ ರಂಗಕ್ಕೆ ಓದುಗರು ದೃಶ್ಯ ಮಾದ್ಯಮಕ್ಕೆ ವೀಕ್ಷಕರೇ ಅಡಿಪಾಯ ವಿದ್ದಂತೆ, ವೃತ್ತಿ ನಿರತೆ ಕಾಪಾಡಿ ಕೊಳ್ಳುವಲ್ಲಿ ಮಾದ್ಯಮಗಳ ಕೊಡುಗೆ ಅನನ್ಯ, ಇದನ್ನು ಮನಗಂಡು ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ 46 ಪತ್ರ ಕರ್ತರಿಗೆ ತಲಾ 5 ಲಕ್ಷ ರೂ. ಪರಿಹಾರ, 56 ಕೋ.ರೂ. ಜಾಹೀರಾತು ಹಣ ಬಾಕಿ ಇದ್ದು ದನ್ನು ಒಂದೇ ಕಂತಿನಲ್ಲಿ ಬಿಡು ಗಡೆ ಮಾಡಿದ್ದು ಹಾಗೂ ನಾಡಿನ ಪತ್ರಕರ್ತರಿಗೆ ಆರೋಗ್ಯ ಕಾರ್ಡ ನೀಡಿದ್ದು ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಇದು ನನಗೆ ತೃಪ್ತಿ ತಂದಿದ್ದು ಶಿವಮೊಗ್ಗ ಜಿಲ್ಲೆಯಲ್ಲೇ ನಾಡಿನ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಸಮಾರಂಭ ನೆರವೇರಿಸಿದ್ದಕ್ಕೆ ಹರ್ಷವಾಗಿದೆ. ಪ್ರಶಸ್ತಿ ವಿಜೇತರು ಇನ್ನೂ ಹೆಚ್ಚಿನ ಸೇವೆ ಸಲ್ಲಿಸಿ ಉನ್ನತ ಮಟ್ಟದ ಪ್ರಶಸ್ತಿಗಳನ್ನು ಪಡೆಯುವಂತಾಗಲೆಂದು ಶುಭ ಹಾರೈಸಿದರು.  

ನಂತರ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ  ಶೇಷಣ್ಣ ಮಾತನಾಡಿ ದೇಶದಲ್ಲಿ ಕನ್ನಡ ಪತ್ರಿಕೆಗಳೇ ಪ್ರಥಮ ಸ್ಥಾನದಲ್ಲಿದ್ದು ಬಂಗಾಲಿ ಮತ್ತು ಹಿಂದಿ ಪತ್ರಿಕೆಗಳು 2-3 ಸ್ಥಾನವನ್ನು ಹೊಂದಿವೆ ಕನ್ನಡ ಪತ್ರಿಕೆಗಳ ಕಾರ್ಯವನ್ನು ಪ್ರಶಂಶಿಸಿದರು. ನಂತರ ಹನೀಫರವರು ಮಾತನಾಡಿ ಹಿರಿಯ ಪತ್ರಕರ್ತರು ತೋರಿದ ಮಾರ್ಗದಲ್ಲಿ ನಾವು ನಡೆದಿದ್ದು ಪ್ರಶಸ್ತಿ ಹೆಮ್ಮೆ ತಂದಿದೆ. ಯುವ ಪೀಳಿಗೆಗೆ ಹೆಚ್ಚಿನ ಪ್ರೇರಣೆ ಲಭಿಸಬೇಕಾಗಿದರೆ ಹಿರಿಯ ಪತ್ರಕರ್ತರ ಭಾವಚಿತ್ರಗಳನ್ನು ವೇದಿಕೆಯಲ್ಲಿ ಅಳವಡಿಸಬೇಕೆಂದು ಮನವಿ ಮಾಡಿದರು.  

ಗೃಹ ಸಚಿವ  ಆರಗ ಜ್ಞಾನೇಂದ್ರ ಮಾತನಾಡಿ ದೃಶ್ಯ ಮಾದ್ಯಮಗಳು ಇತ್ತೀಚೆಗೆ ಅತಿರೇಖತೆಯ ಸುದ್ದಿಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿರುವುದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀಳುತ್ತದೆ ಇದು  ಆತಂಕ ಕಾರಿ ಸಂಗತಿ, ಮುದ್ರಣ ಮಾದ್ಯಮ ಸತ್ಯದ ಪರ ನಿಂತಿದೆ. ಈ ರಂಗದಲ್ಲಿ ಅಸಲಿ-ನಕಲಿ ಪತ್ರಕರ್ತರ ನಡುವೆ ಹೋರಾಟವೇ ನಡೆದಿದೆ. ಅಸಲಿ ಪತ್ರ ಕರ್ತರು ಉಳಿದರೆ ಮಾತ್ರ ಪತ್ರಿ ಕೋದ್ಯಮ ತನ್ನ ಪಾವಿತ್ರತೆ ಕಾಯ್ದುಕೊಳ್ಳಲು ಸಾದ್ಯ. ಇದನ್ನು ಗಮನಿಸಿದರೆ ನನಗೆ ದೇವ ಹಾಗೂ ದೆವ್ವಗಳ ನಡುವೆ ನಡೆಯುವ ಹೋರಾಟವನ್ನು ನೆನಪಿಗೆ ತರುತ್ತದೆ ಎಂದ ಅವರು ರಾಜಕಾರಣಿಗಳಾದ ನಾವು ಕಾರ್ಯ ಸಾಧನೆಗೆ ದೇವರಿಗೂ ಹಾಗೂ ದೆವ್ವಗಳಿಗೂ ಕೈ ಮುಗಿಯುತ್ತೇವೆ. ಹಾಗೇಯೇ ಅಸಲಿ-ನಕಲಿ ಪತ್ರಕರ್ತರಿಗೂ ಕೈ ಮುಗಿಯುವ ಸ್ಥಿತಿ ನಿರ್ಮಾಣವಾಗಿದೆ ಅಸಲಿ ಪತ್ರಕರ್ತರಿಗೆ ನಕಲಿ ಪತ್ರಕರ್ತರು ತೊಂದರೆ ಕೊಡದಂತ ವಾತಾವರಣ ನಿರ್ಮಾಣವಾಗ ಲೆಂದರು. ಶಿವಮೊಗ್ಗ ಜಿಲ್ಲಾ ಕಾ. ನಿ.ಪ.ಸಂಘದ ಅಧ್ಯಕ್ಷ  ಕೆ.ಜಿ. ಶಿವಕುಮಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ  ಬಿ.ವಿ.ಮಲ್ಲಿ ಕಾರ್ಜುನಯ್ಯ, ಮದನ ಗೌಡ,  ಎಚ್‌.ಬಿ.ಷಡಕ್ಷರಿ, ಕೆ.ವಿ.ಗೋಪಾಲಗೌಡ ಸೇರಿದಂತೆ ಮತ್ತಿತರ ಗಣ್ಯರು ಸಂಘದ ಮುಖಂಡರು  ಉಪಸ್ಥಿತರಿದ್ದರು. ರವಿಕುಮಾರ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ