ಬೈಲಹೊಂಗಲ

ಅಭಿವೃದ್ಧಿ ಪಥದತ್ತ ಸಾಗಿಸುವುದು ನರೇಗಾದ ಮುಖ್ಯ ಗುರಿ

ಅಭಿವೃದ್ಧಿ ಪಥದತ್ತ ಸಾಗಿಸುವುದು ನರೇಗಾದ ಮುಖ್ಯ ಗುರಿ
ಬೈಲಹೊಂಗಲ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ ಕಾಮಗಾರಿಯಲ್ಲಿ ತೊಡಗಿಕೊಂಡ ಕಾರ್ಮಿಕರು.

ಬೈಲಹೊಂಗಲ 23:  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮೀಣ ಅಕುಶಲ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದರ ಮೂಲಕ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಸಾಗಿಸುವುದು ನರೇಗಾದ ಮುಖ್ಯ ಗುರಿಯಾಗಿದೆ ಎಂದು ತಾಪಂ.ಇಓ ಸುಭಾಷ ಸಂಪಗಾಂವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕಿನ ಮುರಕೀಭಾಂವಿ, ಕೆಂಗಾನೂರ ಅಂದಾಜು ತಲಾ ರೂ. 1.70 ಲಕ್ಷ ವೆಚ್ಚದಲ್ಲಿ ಮಳೆ ನೀರು ಕೋಯ್ಲು, ಹಣಬರಟ್ಟಿ, ಮುರಕೀಭಾಂವಿ ಗ್ರಾಮದಲ್ಲಿ ರೂ.7.8 ಲಕ್ಷ ವೆಚ್ಚದಲ್ಲಿ ಕೊಳವೆ ಬಾಂವಿ ಮರುಪೂರಣ ಘಟಕ, ಹೊಳಿನಾಗಲಾಪುರ, ಗೋಕಟ್ಟೆ, ಸಂಗೊಳ್ಳಿ, ಮಲ್ಲಾಪುರ ಕೆ.ಎನ್.ದೇಶನೂರ ಕೆರೆಗಳು ಪೂರ್ಣಗೊಂಡಿವೆ.  ಹಣಬರಟ್ಟಿ, ಬೆಳವಡಿ, ಬುಡ್ರಕಟ್ಟಿ, ಪಟ್ಟಿಹಾಳ ಕೆ.ಬಿ., ತುರಕರಶೀಗಿಹಳ್ಳಿ, ಚಿಕ್ಕಬಾಗೇವಾಡಿ, ಭಾಂವಿಹಾಳ, ಮರಕಟ್ಟಿ ಗ್ರಾಮದ ಕೆರೆಗಳು  19 ಹೊಸ ಕೆರೆಗಳ ಕಾಮಗಾರಿ ಪ್ರತಿ ಹಂತದಲ್ಲಿವೆ. ಸುಮಾರು 1703 ಬಚ್ಚಲು ಗುಂಡಿ, ರೈತರ ಭೂಮಿಯಲ್ಲಿ 455 ಬದು, 45 ಕೃಷಿ ಹೊಂಡ  ನಿರ್ಮಾಣ ಮಾಡುವ ಮೂಲಕ ಪಂಚಾಯತಿ ವ್ಯಾಪ್ತಿಯಲ್ಲಿ ಅಂರ್ತಜಲ, ಮಣ್ಣು ಸಂರಕ್ಷಣೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತಿದೆ ಎಂದರು. 

ಪ್ರಸಕ್ತ ಸಾಲಿನಲ್ಲಿ ಜಲಸಂರಕ್ಷಣೆಗಾಗಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಮುಂದಿನ ಆರ್ಥಿಕ ವರ್ಷದಲ್ಲಿ ಎಪ್ರೀಲ್ 01 ರಿಂದ ಪ್ರತಿ ಪಂಚಾಯತಿಗೆ ಹೆಚ್ಚಿನ ಸಸಿ ನೇಡುವುದಕ್ಕಾಗಿ ಮುಂಗಡ ಗುಂಡಿ ತೋಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮತ್ತು ರೈತರ ಕ್ರಿಯಾ ಯೋಜನೆಯಲ್ಲಿ ರೈತರ ವೈಯಕ್ತಿಕ ಬೇಡಿಕೆಗಳಿಗೆ ಒತ್ತು ನೀಡಿ ಕನಿಷ್ಠ ಪ್ರತಿ ಪಂಚಾಯಿತಿಗೆ 50 ಬದು ನಿರ್ಮಾಣ, 02 ಕೆರೆ ನಿರ್ಮಾಣ, 02 ಕೃಷಿ ಹೊಂಡ ಮತ್ತು  50 ಬಚ್ಚಲು ಗುಂಡಿ ನಿರ್ಮಾಣ ಮಾಡುವ ಗುರಿಯನ್ನು ಹಮ್ಮಿಕೊಳ್ಳುವ ಮೂಲಕ ಜಲ ಮತ್ತು ಮಣ್ಣು ಸಂರಕ್ಷಣೆ ಒತ್ತುಕೊಡಲಾಗುವುದು.

ಸುದ್ದಿ ಓದಿ