ಪ್ರಾಚೀನ ಬನಶಂಕರಿ ದೇವಸ್ಥಾನದ ಉದ್ಘಾಟನೆ
ರಾಣೇಬೆನ್ನೂರು 15: ನೂತನ ದೇವಸ್ಥಾನವನ್ನು ಉದ್ಘಾಟಿಸಿದ ಕೂಡಲಿ ಶ್ರೀಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನದ ಜಗದ್ಗುರು ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳವರು. ಹೊಸ ದೇವಸ್ಥಾನ ನಿರ್ಮಾಣಕ್ಕಿಂತ ಹಳೇ ದೇವಸ್ಥಾನ ಪುನರುಜ್ಜೀವನಗೊಳಿಸುವುದರಿಂದ ಸಹಸ್ರಪಟ್ಟು ಫಲ ಸಿಗುತ್ತದೆ. ಧಾನದಿಂದ ಪೂರ್ಣ ಫಲ ದೊರೆಯುತ್ತದೆ. ಪೂರ್ತಿ ಶೀಲಾಮೂರ್ತಿಯಾಗಿ ಕಲ್ಲಿನಲ್ಲಿ ಕಟ್ಟಿದ ದೇವಾಲಯವು ಕೈಲಾಸದಲ್ಲಿ ದಾಖಾಲಾಗುತ್ತಿದೆ ಎಂದರು.
ದೇವರು ಎಲ್ಲ ಕಡೆ ಎಲ್ಲರಲ್ಲಿಯೂ ಇರುತ್ತಾನೆ. ಆತನ ಅಣತಿಯಂತೆ ಯಂತ್ರದಂತೆ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಸಾಧನೆಗೆ ಭಗವಂತನ ಪ್ರೇರಣೆ ಮತ್ತು ಆಜ್ಞೆ ಬೇಕಾಗುತ್ತದೆ. ಎಂದ ಜಗದ್ಗುರುಗಳು ಇತಿಹಾಸದ ಬೇರೆ ಬೇರೆ ಯುಗಗಳಲ್ಲಿಯೂ ಸಹ ದೇವಸ್ಥಾನಗಳಿದ್ದವು ಕಲಿಯುಗದಲ್ಲಿಯೂ ದೇವಸ್ಥಾನಗಳಿವೆ. ದೇವಿಯ ಆರಾಧನೆಯಿಂದ ಎಲ್ಲ ದುಃಖಗಳು ಮಾಯವಾಗಲಿವೇ ಧ್ಯಾನ,ಅರ್ಚನೆ,ಪೂಜೆ ಮತ್ತು ನಮಸ್ಕಾರದಿಂದ ಜೀವನದಲ್ಲಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ಒತ್ತಡದಿಂದ ಬದುಕುವ ಇಂದಿನ ಬದುಕಿನಲ್ಲಿ ಭಗವಂತನ ಚಿಂತನೆ ಮಾಡಲು ಸಮಯವಿಲ್ಲ, ಎಲ್ಲದಕ್ಕೂ ಮನಸ್ಸೇ ಕಾರಣವಾಗಿದೆ. ನಮಗೆ ನಾವೇ ಶತ್ರುಗಳು ನಮಗ್ಯಾರು ಶತ್ರುಗಳಿಲ್ಲಾ. ಕ್ಷಣಕಾಲವಾದರೂ ಭಗವಂತನ ಮತ್ತು ದೇವಿಯ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರೆ ಕಷ್ಟವೆನ್ನುವ ಮಾತೆ ಇಲ್ಲ. ಅದಕ್ಕಾಗಿ ಮನಸ್ಸಿನ ಶಾಂತಿ ಸಮಾದಾನಕ್ಕೆ ದೇವಾಲಯಗಳಿಗೆ ಹೋಗುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕೆಂದರು.
ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಗಳವರು ನಗರದಲ್ಲಿ ಎರಡುವರೆ ಕೋಟಿ ರೂ, ವೆಚ್ಚದಲ್ಲಿ ಪ್ರಾಚೀನ ಶ್ರೀ ಬನಶಂಕರಿ ದೇವಿ ದೇವಸ್ಥಾನದ ಶೀಲಾ ಕಲ್ಲಿನಿಂದ ನಿರ್ಮಿಸಿರುವುದು ಶ್ಲಾಘನೀಯ ಎಂದ ಅವರು ದೇವಿಯ ಆರಾಧನೆ ಪುರಾತನ ಕಾಲದಿಂದಲೂ ನಡೆಯುತ್ತಾ ಬಂದಿದ್ದು ದೇವಿಯ ಮಹಿಮೆ ಅಪಾರವಾಗಿದೆ. ನಮ್ಮ ನಾಡು,ಭೂಮಿ,ಹಣ,ಮತ್ತು ಅನ್ನವನ್ನು ತಾಯಿಯನ್ನು ಪೂಜಿಸುತ್ತಾ ಬರಲಾಗಿದೆ. ಭಕ್ತರು ದೇವಿಯನ್ನು ಒಲಿಸಿಕೊಳ್ಳಬೇಕಾದರೆ ದೇವಿಯನ್ನು ಮಾತನಾಡಿಸುವಂತಹ ಶಕ್ತಿಯನ್ನು ಹೊಂದಿರಬೇಕು. ಕವಿರತ್ನ ಕಾಳಿದಾಸ, ರಾಮಕೃಷ್ಣ ಪರಮಹಂಸರು ದಿವ್ಯಶಕ್ತಿ ಹೊಂದಿದ್ದರಿಂದ ಅವರೊಂದಿಗೆ ದೇವಿಯು ಮಾತನಾಡಿರುವ ಉಲ್ಲೇಖವಿದೆ ಎಂದರು.
ನಾವು ದೇವರ ಬಗ್ಗೆ ಭಕ್ತಿ,ಭಾವ,ಪ್ರೀತಿ ಹೊಂದಿದ್ದರೆ ಸ್ವರ್ಗವನ್ನು ಕಾಣಬಹುದು. ತ್ವೇಷ,ದ್ವೇಷ,ಅಸೂಯೇ ಹೊಂದಿದರೆ ನರಕ ಪ್ರಾಪ್ತಿಯಾಗುತ್ತದೆ. ಎಂದು ಇತಿಹಾಸ ಸ್ಮರಿಸಿ ಮಾತನಾಡಿದ ಜಗದ್ಗುರುಗಳು ಭಾರತ ಭೂಮಿ ಪುಣ್ಯೆದ ನಾಡು. ಇಲ್ಲಿ ಶಾಂತಿ ಸುಖ ಸಮೃದ್ಧಿ, ಮಾನಸಿಕ ನೆಮ್ಮದಿ ಇರುವುದರಿಂದಲೇ ಸದಾ ಕಾಲವು ಪ್ರೀತಿ ವಿಶ್ವಾಸ ಮತ್ತು ಭಾವೈಕ್ಯತೆಯಿಂದ ಜೀವನವನ್ನು ಸಾಗಿಸುವಂತಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಗುರುಬಸಪ್ಪ,ನೀ,ಪೂಜಾರ್ ಅವರು ಬನಶಂಕರಿ ದೇವಿಯ ಉಗಮ ಕುರಿತು ಸಾಧ್ಯಾಂತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾಽಽ ಸಂಜಯ್ ನಾಯ್ಕ, ಪ್ರಕಾಶ ಕೋಳಿವಾಡ, ವಿಶ್ವನಾಥ ಪಾಟೀಲ , ಡಾಽಽ ಗೀರಿಶ ಪಾಟೀಲ, ಮಲ್ಲಿಕಾರ್ಜುನ ಹಲಗೇರಿ, ಕವಿತಾ ಹೆದ್ದೇರಿ, ನೀಲಮ್ಮ ಮಾಕನೂರು, ಹೊನ್ನಮ್ಮ ಕಾಟಿ, ರಾಮಮೂರ್ತಿ ನಾಯ್ಕ, ಸಂದೀಪ ನಾಯ್ಕ, ಮಾಲತೇಶ ಕುಲಕಣೀರ್, ಪ್ರಕಾಶ ಜೈನ್, ಗೀರಿಜಮ್ಮ ಗೂಳಣ್ಣನವರ, ಶಿವಪ್ಪ ಹುಗ್ಗಿ, ಮಲ್ಲಿಕಾರ್ಜುನ ಹಳ್ಳಿ , ಪಾರ್ವತಮ್ಮ ಗೌಡ ಶಿವಣ್ಣನವರ, ಅರ್ಚಕ ದತ್ತಣ್ಣ, ಗೀರಿಜಮ್ಮ ಗೂಳಣ್ಣನವರ, ವನಜಾಕ್ಷಮ್ಮ ಬುರಡಿಕಟ್ಟಿ, ಪಾಂಡಪ್ಪ ಅಡ್ಮನಿ, ಸೇರಿದಂತೆ ಮತ್ತಿತರ ಗಣ್ಯರು ಸಮಿತಿಯ ಪದಾದಿಕಾರಿಗಳು. ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಅವರು ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಮರಿಸ್ವಾಮಿ ಪೂಜಾರ ನಿರೂಪಿಸಿ ನಿರ್ಮಲಾ ಪೂಜಾರ ವಂದಿಸಿದರು. ಇದೇ ಸಂದರ್ಭದಲ್ಲಿ ನಿರ್ಮಾಣ ಕಾರ್ಯಕ್ಕೆ ಸಹಾಯ ನೀಡಿದ ನಾಡಿನ ನೂರಾರು ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹತ್ತಾರು ಸಾವಿರ ಭಕ್ತಾಧಿಗಳಿಗೆ ಮಹಾ ಪ್ರಸಾದ ವಿತರಿಸಲಾಯಿತು.