ಶಿಗ್ಗಾವ್

ನೂತನ ನದಾಫ ಸಮುದಾಯದ ಅಧ್ಯಕ್ಷ ಪೀರ್ಸಾಬಗೆ ಮಣ್ಣಣ್ಣವರ ಸನ್ಮಾನ

ನೂತನ ನದಾಫ ಸಮುದಾಯದ ಅಧ್ಯಕ್ಷ ಪೀರ್ಸಾಬಗೆ  ಮಣ್ಣಣ್ಣವರ ಸನ್ಮಾನ

ಲೋಕದರ್ಶನ ವರದಿ

ಶಿಗ್ಗಾವಿ 15: ತಾಲೂಕಿನ ನೂತನ ನದಾಫ ಸಮುದಾಯದ ಅಧ್ಯಕ್ಷ ಪೀರ್ಸಾಬ್ ನದಾಫ್ ಅವರನ್ನು ತಮ್ಮ ಕಚೇರಿಯಲ್ಲಿ ಅಭಿನಂದನೆ ಹಾಗೂ ಗೌರವ ಸಲ್ಲಿಸಿದ ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ್.

 ಪ್ರವಾಸಿ ಮಂದಿರದಲ್ಲಿ ಜರುಗಿದ ನದಾಪ ಸಮುದಾಯದ ಸಭೆಯಲ್ಲಿ ತಾಲೂಕಿನ ನದಾಫ ಸಮುದಾಯದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುವ ಪೀರ್ ಸಾಬ್ ಅವರನ್ನು ತಮ್ಮ ಕಚೇರಿಗೆ ಆಹ್ವಾನಿಸಿ ನೂತನ ಅಧ್ಯಕ್ಷರಿಗೆ ಅಭಿನಂದನೆ ತಿಳಿಸಿ ಗೌರವ ಸಲ್ಲಿಸಿ ಮಾತನಾಡಿ ಸಮುದಾಯದ ಕೆಲಸ ದೇವರ ಕೆಲಸ ಅಂದ ತಿಳಿದುಕೊಂಡು ಕೆಲಸ ನಿರ್ವಹಿಸುವುದು ಪದಾಧಿಕಾರಿಗಳ ಜವಾಬ್ದಾರಿಯಾಗಿದೆ. ಪೀರ್ ಸಾಬ್ ಹಾಗೂ ಉಳಿದ ಎಲ್ಲಾ ಪದಾಧಿಕಾರಿಗಳು ಸಮರ್ಥವಾಗಿ ನಿಭಾಯಿಸುವ ಹಾಗೂ ಸಮುದಾಯಕ್ಕೆ ಒಳ್ಳೆಯದಾಗುವ ಕೆಲಸವಾಗಲಿ ಎಂದು ಹೇಳಿದರು.

 ಪತ್ರಕರ್ತ ಹಜರೇ ಸಾಬ್ ಹರಕುಣಿ ಹಜಾರೆ ಸಾಬ್ ಮಿಸ್ತ್ರಿಕೋಟಿ ಶಿಗ್ಗಾವ್ ತಾಲೂಕ ಯುವ ಕಾಂಗ್ರೆಸ್ ಅಧ್ಯಕ್ಷ ನಿಸಾರ್ ಅಹಮದ್ ತೋಕಲ್ಲಿ ಮನ್ಸೂರ್ ನದಾಫ್ ಡಿಬಿ ಮುಲ್ಲಾ ಇನ್ನೂ ಹಲವರು ಉಪಸ್ಥಿತರಿದ್ದರು 

ಸುದ್ದಿ ಓದಿ