ಶಿಗ್ಗಾವ್

ಕೋಡಿ ಬಿದ್ದು ಮೈದುಂಬಿ ಹರಿಯುತ್ತಿರುವ ಐತಿಹಾಸಿಕ ನಾಗನೂರ ಕೆರೆ

ಕೋಡಿ ಬಿದ್ದು ಮೈದುಂಬಿ ಹರಿಯುತ್ತಿರುವ ಐತಿಹಾಸಿಕ ನಾಗನೂರ ಕೆರೆ

ಶಿಗ್ಗಾವಿ 28: ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ನಾಗನೂರ ಕೆರೆ ಶುಕ್ರವಾರದಿಂದ  ತುಂಬಿ ಹರಿಯುತ್ತಿದ್ದು, ರೈತರು ಹಾಗೂ ಸಾರ್ವಜನಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.  

ಸುಮಾರು 200 ಎಕರೆ ಪ್ರದೇಶ ಹೊಂದಿರುವ ವಿಶಾಲವಾದ ನಾಗನೂರ ಕೆರೆ, ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ. ಕೆರೆಯ ಅಕ್ಕಪಕ್ಕದಲ್ಲಿರುವ ಕೊಳವೆ ಬಾವಿಗಳ ನೀರಿನಮಟ್ಟ ಕೂಡ ಹೆಚ್ಚಾಗಿದ್ದು, ರೈತರಿಗೆ ಮತ್ತೆ ಜೀವ ಬಂದಂತಾಗಿದೆ. ಸದ್ಯ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಕೆರೆಗೆ ವಿವಿಧ ಪಕ್ಷಿಗಳು ಆಗಮಿಸುತ್ತಿದ್ದು, ಅವುಗಳ ಕಲರವ ನೋಡುಗರಿಗೆ ರೋಮಾಂಚನ ನೀಡುತ್ತಿದೆ. ಐತಿಹಾಸಿಕ ಕೆರೆ ತುಂಬಿರುವುದನ್ನು ನೋಡಲು ನಗರದ ಜನತೆ ತಂಡೋಪತಂಡವಾಗಿ ನೋಡಲು ಆಗಮಿಸುತ್ತಿದ್ದು, ಸದ್ಯ ಕೆರೆ ಪ್ರವಾಸಿ ತಾಣವಾಗಿ ಮಾರ​‍್ಪಟಟಿದೆ. 


ಸುದ್ದಿ ಓದಿ