ನಾಡು ಕಂಡ ಅತ್ಯದ್ಭುತ ಕವಿ ಡಾ.ದ.ರಾ.ಬೇಂದೆ: ಸುರೇಶ ಕುಲಕರ್ಣಿ
ರಾಣೀಬೆನ್ನೂರ 07: ಬದುಕಿನುದ್ದಕ್ಕೂ ಕಡು ಕಷ್ಟದಲ್ಲಿ ಜೀವನ ಸಾಗಿಸುವುದರ ಮೂಲಕ ಹಲವು ವಿಧದ ಕಾವ್ಯಕ್ಕೆ ಜೀವ ತುಂಬಿ ಅರ್ಥೈಶಿಸಿ ಕೊಳ್ಳಲು ಸೂಕ್ಷ್ಮ ಸಂವೇದನೆ ಬೇಕು ಎನ್ನುವುದನ್ನು ಮನವರಿಸಲು ಪ್ರೇರೇಪಿಸಿದ ಈ ನಾಡು ಕಂಡ ಅತ್ಯದ್ಭುತ ಕವಿ ಡಾ. ದ.ರಾ.ಬೇಂದ್ರೆ ಅವರಾಗಿದ್ದಾರೆ ಎಂದು ಧಾರವಾಡದ ಸಾಹಿತಿ ಸುರೇಶ ಕುಲಕರ್ಣಿ ಹೇಳಿದರು.
ಅವರು ಇಲ್ಲಿನ ಕೆ ಎಲ್ ಇ ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಕನ್ನಡ ವಿಭಾಗವು ಆಯೋಜಿಸಿದ್ದ ಬೇಂದ್ರೆ ಭಾವಯಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಸ್ವಾತಂತ್ರ್ಯಕ್ಕಾಗಿ ನಿತ್ಯವೂ ಮಿಡಿದ ಜೀವ ಭಾರತದ ಯುವ ಶಕ್ತಿಯನ್ನು ಪ್ರಬಲಗೊಳಿಸಬೇನ್ನುವ ಬಹು ಆಶೆಯನ್ನು ಹೊಂದಿದವರು, ಅವರು ತಮ್ಮ ಕಾವ್ಯದ ಮೂಲಕ ಜನರನ್ನು ಎಚ್ಚರಿಸುವಲ್ಲಿ ತಮ್ಮ ಭಾವ ಕಾವ್ಯಕ್ಕೆ ಜೀವ ತುಂಬಿದ ಅಪ್ರತಿಮ ಕವಿ ಅವರಾಗಿದ್ದರು. ಯಾವುದೇ ಸ್ವಾರ್ಥವಿಲ್ಲದೇ ಹೋರಾಟಕ್ಕೆ ಕಾವ್ಯದ ಮೂಲಕ ಭಾಷ್ಯ ಬರೆದ ಅಪ್ರತಿಮ ಕವಿ ಬೇಂದ್ರೆ ಎಂದು ಸಾದ್ಯಾಂತವಾಗಿ ಅವರ ಬದುಕು ಬರಹ ಮತ್ತು ವಾಸ್ತವಿಕ ಜೀವನ ಕುರಿತು ಸರಳವಾಗಿ ಮನವರಿಸಿ ಮಾತನಾಡಿದರು. ದೇಹದ ಆಕಾರವನ್ನು ಯಾರೂ ಅಳೆಯಬಾರದು ಆದರೆ ಬೇಂದ್ರೆ ಅವರ ವ್ಯಕ್ತಿತ್ವವನ್ನು ಅಳೆಯುವುದು ಅಸಾಧ್ಯವಾಗಿತ್ತು. ಅಷ್ಟೇ ಅವರ ಕಾವ್ಯದಲ್ಲಿರುವ ಒಳಾರ್ಥ ಅರ್ಥ ಮಡಿಕೊಳ್ಳುವುದು ಅಷ್ಟೊಂದು ಸುಲಭವೂ ಆಗಿರಲಿಲ್ಲ. ಬಡತನವಿದ್ದರೂ ಸಹ 102 ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ. ವಿವಿಧ ಪ್ರಕಾರದ 16000 ಗ್ರಂಥಗಳನ್ನು ಹೊಂದಿದ್ದರು. ವ್ಯವಹಾರಕ್ಕೆ ಭಾಷೆ ಬೇಕು ಭಾಷೆಯ ಜ್ಞಾನವಿಲ್ಲದೇ ಹೋದರೂ ವ್ಯವಹಾರ ಜ್ಞಾನ ಬೆಳೆಯಲಾರದು ಎನ್ನುವ ಸೂಕ್ಷ್ಮತೆ ಅರಿತಿದ್ದ ಬೇಂದ್ರೆ ಕವಿ ಮತ್ತು ಕಲಾವಿದರಿಗೆ ಅವರ ಕಾವ್ಯಗಳನ್ನು ಅರಿಯಲು ಒಳಗಣ್ಣು ಇರಬೇಕಗುತ್ತದೆ. ಬೇಂದ್ರೆಯವರು ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರರು ಎಂದು ಹೇಳಿದರು.
ಬದುಕಿನ ಬಗೆಗಿನ ಒಲವು ವ್ಯಕ್ತಿಗೆ ಧೈರ್ಯವನ್ನು ನೀಡುತ್ತದೆ. ತನ್ನವರ ಹಿತವನ್ನು ಕಾಪಾಡುತ್ತದೆ. ಬದುಕನ್ನು ಮುನ್ನಡೆಸುತ್ದೆ ಎಂದು ನಂಬಿದ್ದ ಬೇಂದ್ರೆ, ಬದುಕಿನ ಪಾಡುಗಳನ್ನೇ ಹಾಡನ್ನಾಗಿಸಿ ರಸಿಕ ಓದುಗರಿಗೆ ರಸದೌತಣ ನೀಡುತ್ತ ಬಂದವರು. ಮಾನವ-ಪ್ರಕೃತಿ -ಸಮಾಜ ಈ ಎಲ್ಲವನ್ನು ಬೆಸೆಯುವ ಕೊಂಡಿ ಅದು ಒಲವು ಮಾತ್ರ, ಆ ಮೂಲಕವೇ ಬದುಕಿನ ಸಾರ್ಥಕತೆ ಎಂದ ಬೇಂದ್ರೆ ಅವರು ನಾನು ಬಡವಿ , ಮನದನ್ನೆ ಬಿಸಿಲ್ಗುದುರೆಯಂತಹ ಕವಿತೆಗಳ ಮೂಲಕ ಒಲವಿನ ವಿವಿಧ ಮುಖಗಳನ್ನು ಅಕ್ಷರವನ್ನಾಗಿಸಿದವರು ಒಲವೇ ಕಾವ್ಯದ ಜೀವಸೆಲೆಯಾಗಿತ್ತು ಎಂದರೆ ಅತೀಶಯೋಕ್ತಿಯಾಗಲಾರದು. ಎಂದು ಕುಲಕರ್ಣಿ ಅವರು ಕನ್ನಡದ ವಿದ್ಯಾರ್ಥಿಗಳಿಗೆ ಬೇಂದ್ರೆ ಭಾವಯಾನ ಅಥೈ ರ್ಶಿಸುವಲ್ಲಿ ಯಶಸ್ಸು ಕಂಡರು.
ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಕಾರ್ಯಾಧ್ಯಕ್ಷ ವಿಪಿ ಲಿಂಗನಗೌಡ್ರ ಅವರು ಮಾತನಾಡಿ ತಾವು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅವರ ಉಪನ್ಯಾಸವೆಂದರೆ ಅತ್ಯಂತ ಆಸಕ್ತಿ ಹೊಂದಿದ್ದೆ. ಅವರು ಸರಳವಾಗಿ ಬೋಧಿಸುವ ಕೌಶಲ್ಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಮನಮುಟ್ಟುತ್ತಿತ್ತು. ಓದು ಒಕ್ಕಾಲು ಬುದ್ದಿ ಮುಕ್ಕಾಲು ಎನ್ನುವ ಗಾದೆಯಂತೆ ಧಾರವಾಡ ಕಾಲೇಜು ಅಂದು ಸಾಹಿತ್ಯ ಮತ್ತು ಸಂಸ್ಕೃತಿಯ ತವರೂರಾಗಿತ್ತು. ಶಿಕ್ಷಣ ಫಲ-ಪ್ರದವಾಗಬೇಕಾದರೆ ಏಕಾಗ್ರತೆ ಮತ್ತು ಗುರು ಭಕ್ತಿ ಅಗತ್ಯವಿದೆ. ಇಂದಿನ ವಿದ್ಯಾರ್ಥಿಗಳ ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಬಿ.ಎಸ್.ಪಟ್ಟಣಶೆಟ್ಟಿ, ವೀರಣ್ಣ ಅ<ಗಡಿ, ಪ್ರ್ರಾಚಾರ್ಯ ಡಾ. ನಾರಾಯಣ ನಾಯಕ್ ಎನ್, ಅನುರಾಧಾ ಎಸ್. ಪ್ರೊಽ.ಸಾಯಿಲತಾ ಮಡಿವಾಳರ ಡಾ.ಸುಬ್ರಾವ್ ಎಂಟೆತ್ತಿನ ಪ್ರೊ. ಮಲ್ಲಪ್ಪ, ಪ್ರೊ.ಶ್ರೀಕಾಂತ್ ಕುಂಚೂರು ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಬೇಂದೆ ಅವರ ಅಪ್ರತಿಮ ಕಾವ್ಯ ಕುರುಡು ಕಾಂಚಾಣ ನೃತ್ಯ ರೂಪಕ ಪ್ರದರ್ಶಿಸಿ ಸಭೆಯ ಗಮನ ಸೆಳೆದರು.