ರಾಣೆಬೆನ್ನೂರ

ಮೌನೇಶ್ವರ ಸ್ವಾಮಿಯ ಮಹಾ ಕಾರ್ತಿಕೋತ್ಸವ

ಮೌನೇಶ್ವರ ಸ್ವಾಮಿಯ ಮಹಾ ಕಾರ್ತಿಕೋತ್ಸವ


ಲೋಕದರ್ಶನ ವರದಿ 

ರಾಣೇಬೆನ್ನೂರ 22: ಇಲ್ಲಿನ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಮೌನೇಶ್ವರ ಸ್ವಾಮಿಯ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ ಮಂಗಳಾರತಿಯೊಂದಿಗೆ ಪೂಜಾ ವಿಧಿ ವಿಧಾನಗಳು ನಡೆದವು. ಭಕ್ತರ ಸಮ್ಮುಖದಲ್ಲಿ ಅನಂತರ ಕಾರ್ತಿಕೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.   

ಮೌನೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಓಂಕಾರ ಅರ್ಕಾಚಾರಿ, ಕಾರ್ಯದರ್ಶಿ ರಾಘವೇಂದ್ರ ಬಿ ಕಮ್ಮಾರ, ನಾಗರಾಜ್ ಬಡಿಗೇರ, ಬಾಬು ಬೆಳ್ಳೂಡಿ, ಚಂದ್ರ​‍್ಪ ಹುಲ್ಲತ್ತಿ, ಸಿದ್ದಪ್ಪ ಬಡಿಗೇರ, ಗಣೇಶ ಬಡಿಗೇರ, ಈರಣ್ಣ ಬಡಿಗೇರ, ಕೃಷ್ಣ ಕಮ್ಮಾರ, ಪರಮೇಶ್ವರಾಚಾರ್ ಬಡಿಗೇರ, ಹೇಮಾಚಾರ್ ಬಡಿಗೇರ್ ಸೇರಿದಂತೆ ಸಮಾಜ ಮುಖಂಡರು ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ