ಚಿಕ್ಕೋಡಿ

ಜೈನರ ಷಟ್ಖಂಡಾಗಮ ಮಹಾಗ್ರಂಥದ ಭವ್ಯ ಮೆರವಣಿಗೆ

ಜೈನರ ಷಟ್ಖಂಡಾಗಮ ಮಹಾಗ್ರಂಥದ ಭವ್ಯ ಮೆರವಣಿಗೆ

ಲೋಕದರ್ಶನ ವರದಿ 


ಚಿಕ್ಕೋಡಿ 09: ತಾಲೂಕಿನ ಕೋಥಳಿ-ಕುಪ್ಪಾಣವಾಡಿ ಗ್ರಾಮದಲ್ಲಿ ಪ್ರಥಮಾಚಾರ್ಯ ಚಾರಿತ್ರ ಚಕ್ರವರ್ತಿ ಶಾಂತಿಸಾಗರ ಮಹಾರಾಜ ಅವರ ಪಂಚಮ ಪಟ್ಟಾಚಾರ್ಯ ಆಚಾರ್ಯ ವಾತ್ಸಲ್ಯವರದಿ ವರ್ಧಮಾನ ಸಾಗರ ಮುನಿಮಹಾರಾಜರ ಹಾಗೂ ಮಹಾರಾಜರ ಸಹ ಸಂಘ ಆಚಾರ್ಯ ವರದತ್ತ ಸಾಗರ ಸಂಗಸ್ತ ಸಮಸ್ತೆ ಸಾದುಸಂಘದ ಪಿಂಚಿ ಪರಿವರ್ತನಾ ಸಮಾರಂಭ ಹಾಗೂ ಜೈನರ ಮಹಾಗ್ರಂಥ ಷಟ್ಖಂಡಾಗಮ ಮರಾಠಿ ಅನುವಾದ ಗ್ರಂಥದ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. 

ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಚಿವೆ ಶಶಿಕಲಾ ಜೊಲ್ಲೆ ಅವರು ಮಹಾರಾಜರ ದರ್ಶನ ಪಡೆದು, ಸಮಾಜ ಒಳತಿಗಾಗಿ ಶ್ರಮಿಸುತ್ತಿರುವ ಮುನಿ ಮಹಾರಾಜರ ದಿವ್ಯ ಕಾರ್ಯ ಹಾಗೂ ಅವರ ಮಾರ್ಗದರ್ಶನ ನಮಗೆ ಸ್ಫೂರ್ತಿದಾಯಕವಾಗಿದೆ ಎಂದರು. 

ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಮಾತನಾಡಿ, ಕೋಥಳಿ-ಕುಪ್ಪಾಣವಾಡಿ ಗ್ರಾಮದ ಶಾಂತಿಗಿರಿ ಹಾಗೂ ದೇಶಭೂಷನ ಅಶ್ರಮದ ಬೆಳವಣಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ನೀಡಲಾಗಿದೆ. ಜೈನ ಸಮಾಜದ ಬೇಡಿಕೆ ಅನುಗುಣವಾಗಿ ಅನುದಾನ ನೀಡಲು ನಾನು ಮತ್ತು ಶಾಸಕ ಗಣೇಶ ಹುಕ್ಕೇರಿ ಬದ್ಧರಾಗಿದ್ದೇವೆ ಎಂದರು. 

ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಶಾಸಕ ಅಭಯ ಪಾಟೀಲ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ವಾತ್ಸಲ್ಯವರದಿ ವರ್ಧಮಾನ ಸಾಗರ ಮುನಿಮಹಾರಾಜರ ಮಾರ್ಗದರ್ಶನದಲ್ಲಿ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದರು. 

ದಿವ್ಯ ಸಾನಿಧ್ಯವನ್ನು ಆಚಾರ್ಯ ವಾತ್ಸಲ್ಯ ವರದಿ ವರ್ಧಮಾನ ಸಾಗರ ಮುನಿಮಹಾರಾಜರು ವಹಿಸಿ ಆಶಿರ್ವಚನ ನೀಡಿದರು. 

ಚಾತುರ ಮಾಸ ಕಾಲದಲ್ಲಿ ಜೈನ ಮುನಿ ಮತ್ತು ಮಾತಾಜಿಗಳಿಗೆ ವೈದ್ಯಕೀಯ ಸೇವೆ ನೀಡಿದ್ದ ಚಿಕ್ಕೋಡಿ ಹಾಗೂ ಸುತ್ತಮುತ್ತಲಿನ ವೈದ್ಯರನ್ನು ಮಹಾರಾಜರು ಸನ್ಮಾನಿಸಿ ಗೌರವಿಸಿದರು. 

ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಗಣೇಶ ಹುಕ್ಕೇರಿ, ಸಾಂಗ್ಲೀ ಮಾಜಿ ಮೇಯರ ಸುರೇಶ ಪಾಟೀಲ, ಲಠ್ಠೆ ಶಿಕ್ಷಣ ಸಂಸ್ಥೆಯ ಚೇರಮನ ಶಾಂತಿನಾಥ ಕಾಂತೆ, ಶಾಂತಿಗಿರಿ ಆಚಾರ್ಯ ದೇಶಭೂಷನ ಟ್ರಸ್ಟ ಅಧ್ಯಕ್ಷ ಪಿ.ಆರ್‌.ಪಾಟೀಲ, ಆಚಾರ್ಯ ದೇಶಭೂಷನ ಆಶ್ರಮ ಟ್ರಸ್ಟ ಅಧ್ಯಕ್ಷ ವರ್ಧಮಾನ ಸದಲಗೆ, ಸಮಾಜದ ಮುಖಂಡರಾದ ಕಿರಣ ಪಾಟೀಲ, ಹಿರಿಯ ನ್ಯಾಯವಾದಿ ಧನ್ಯಕುಮಾರ ಗುಂಡೆ, ಪೋಪಟ ಖೋತ, ಜಿತೇಂದ್ರ ಪಾಟೀಲ, ಮಹಾವೀರ ಕಾಮಗೌಡ, ಖ್ಯಾತ ವೈದ್ಯ ಡಾ, ಪದ್ಮರಾಜ ಪಾಟೀಲ, ಬಾಬು ಗೌರಾಜ, ಮಹಾವೀರ ಮುಕರೆ, ಸಮರ ಇಂದೋರ, ಅಶೋಕ ಶೆಟ್ಟಿ, ವಿಜಯಕುಮಾರ ಕಸಲಿವಾಲ, ರಂಗಲಾಲ, ಈಶ್ವಲಾಲ ಜೋಡವತ್ತ ಸೇರಿದಂತೆ ಮುಂತಾದವರು ಇದ್ದರು. 

ಇದಕ್ಕೂ ಮೊದಲು ಜೈನರ ಮಹಾಗ್ರಂಥ ಷಟ್ಖಂಡಾಗಮ ಮರಾಠಿ ಅನುವಾದ ಗ್ರಂಥವನ್ನು ಕೋಥಳಿಯಿಂದ-ಕುಪ್ಪಾಣವಾಡಿ ಗ್ರಾಮದವರೆಗೆ ಭವ್ಯ ಮೆರವಣಿಗೆಯು ನಡೆಯಿತು. ಡಾ.ಸಿ.ಬಿ.ಪಾಟೀಲ ದಂಪತಿಗಳು ಮೆರವಣಿಗೆ ಚಾಲನೆ ನೀಡಿದರು. ಖ್ಯಾತ ನ್ಯಾಯವಾದಿ ಎಸ್‌.ಟಿ.ಮುನ್ನೋಳ್ಳಿ ಸ್ವಾಗತಿಸಿದರು. 


ಸುದ್ದಿ ಓದಿ